ಕೊರೊನಾ ಸೋಂಕಿತರು ಗುಣಮುಖರಾದ ನಂತರ ಕೊರೊನಾ ವಾರಿಯರ್ಸ್ ಗಳಾಗಿ ಕೆಲಸ ಮಾಡಿ – ಎಂ ಪಿ ರೇಣುಕಾಚಾರ್ಯ
ಹೊನ್ನಾಳಿ : ಕೊರೊನಾ ಸೋಂಕಿನಿಂದ ಗುಣಮುಖರಾಗಿ ಹೋಗುವವರು ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದ ಮೇಲೆ ಕೊರೊನಾ ವಾರಿಯರ್ಸಗಳಾಗಿ ಕೆಲಸ ಮಾಡುವ ಮೂಲಕ ಕೊರೊನಾ ಜಾಗೃತಿ ಮೂಡಿಸುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊರೊನಾದಿಂದ ಗುಣಮುರಾದ 83 ಜನರಿಗೆ ಪುಪ್ಪವೃಷ್ಟಿ ಸುರಿಸಿ ಆತ್ಮೀಯವಾಗಿ ಬೀಳ್ಕೋಟ್ಟು ಮಾತನಾಡಿದರು.
ಕೊರೊನಾ ಎಂಬ ಸಣ್ಣ ಸೋಂಕು ಇಡೀ ವಿಶ್ವವನ್ನ ತಲ್ಲಣಗೊಳಿಸಿದೇ ಅಲ್ಲದೇ ಸಾಕಷ್ಟು ಸಾವು ನೋವು ಉಂಟು ಮಾಡಿದ್ದು, ಈಗ ಕೊರೊನಾ ಸೋಂಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಗುಣಮುರಾಗಿ ಮನೆಗೆ ತೆರಳುವವರೆ ಸಂಖ್ಯೆ ಹೆಚ್ಚಾಗಿದೆ ಎಂದರು. ಪ್ರತಿನಿತ್ಯ ಕೋವಿಡ್ ಕೇರ್‍ಗೆ ಬರುವ ಸೋಂಕಿತರನ್ನು ನೋಡು ನೋವಾಗುತಿತ್ತು, ಆದರೇ ಇಂದು ಒಂದೇ ದಿನವೇ 83 ಜನರು ಕೋವಿಡ್ ಕೇರ್ ಸೆಂಟರ್‍ನಿಂದ ಗುಣಮುಖವಾಗಿ ಹೋಗುತ್ತಿರುವುದನ್ನು ನೋಡಿ ಸಂತೋಷವಾಗುತ್ತಿದೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ 3403 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 2565 ಜನರು ಗುಣಮುಖರಾಗಿದ್ದು 705 ಸಕ್ರೀಯ ಪ್ರಕರಣಗಳು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾದ್ಯಂತ ಇದ್ದು ಕೋವಿಡ್ ಕೇರ್ ಸೆಂಟರ್ ಸೇರಿದಂತೆ ವಿವಿಧ ಕಡೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.ಕೋವಿಡ್ ಕೇರ್ ಸೆಂಟರ್‍ನಲ್ಲಿ ನಾನು ವಾಸ್ತವ್ಯ ಮಾಡಲು ಆರಂಭಿಸಿ 12 ದಿನಗಳಾಗಿದ್ದು ಇಲ್ಲಿ ಮಲಗಿರೋದು ಸೋಂಕಿತರ ಯೋಗ ಕ್ಷೇಮ ವಿಚಾರಿಸಲು ಎಂದ ಶಾಸಕರು, ನಾನು ಸೋಂಕಿತ ಬಂಧುಗಳ ಸಹೋದರನಾಗಿ ಇಲ್ಲಿದ್ದು ಕೋಂಡು ಕೆಲಸ ಮಾಡುತ್ತಿದ್ದೇನೆ ಎಂದರು.
ಯಾರೇ ನನ್ನ ಮೇಲೆ ಟೀಕೆ ಟಿಪ್ಪಣಿ ಮಾಡಿದರು ನಾನು ನನ್ನ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದರು.
ಸೋಂಕಿನಿಂದ ಗುಣಮುರಾದವರಿಂದ ಶಾಸಕರಿಗೆ ಹೂಮಳೆ : ಪ್ರತಿನಿತ್ಯ ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳುತ್ತಿದ್ದ ಸೋಂಕಿತರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೂಮಳೆ ಸುರಿಸಿ ಆತ್ಮೀಯವಾಗಿ ಬೀಳ್ಕೋಡುತ್ತಿದ್ದರು. ಆದರೇ ಇಂದು ಅರಬಗಟ್ಟೆಯಲ್ಲಿನ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸೋಂಕಿನಿಂದ ಗುಣಮುಖರಾದವರು ರೇಣುಕಾಚಾರ್ಯ ದಂಪತಿಗಳಿಗೆ ಹೂಮಳೆ ಸುರಿಸಿ ಆತ್ಮೀಯವಾಗಿ ಅಭಿನಂದಿಸಿದರಲ್ಲದೇ, ಇಂತಹ ಶಾಸಕರನ್ನು ಪಡೆದ ಅವಳಿ ತಾಲೂಕಿನ ಜನರು ನಾವೇ ಪುಣ್ಯವಂತರು ಎಂದು ಶಾಸಕರ ಕಾಲಿಗೆ ಎರಗಿದರು.
ಸೋಂಕಿತರಿಗೆ ರೊಟ್ಟಿ,ಗೋದಿಪಾಯಸ ಊಟ : ತಾಲೂಕಿನ ಹೊಳೆಹರಹಳ್ಳಿ ಗ್ರಾಮಸ್ಥರಿಂದ ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಕೊರೊನಾ ಸೋಂಕಿತರಿಗೆ ರೊಟ್ಟಿ ಹಾಗೂ ಗೋಂದಿಪಾಯಸದ ವ್ಯವಸ್ಥೆ ಮಾಡಿಸಿದ್ದರು. ಪ್ರತಿನಿತ್ಯ ವಿವಿಧ ಗ್ರಾಮಗಳ ಗ್ರಾಮಸ್ಥರು ಸೋಂಕಿತರಿಗಾಗೀ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಸಾಕಷ್ಟು ಜನರು ಅಕ್ಕಿ,ಬಿಸ್ಕೇಟ್ ಸೇರಿದಂತೆ ನೀರಿನ ಬಾಟಲ್‍ಗಳನ್ನು ಕೂಡ ಸೋಂಕಿತರಿಗೆ ನೀಡುತ್ತಿದ್ದು ಅವರ ಪ್ರೀತಿ ಅಭಿಮಾನಕ್ಕೆ ಶಾಸಕರು ಆತ್ಮೀಯವಾಗಿ ಅಭಿನಂದನೆ ಸಲ್ಲಿಸಿದರು.