ಕೊರೊನಾ ದಿಂದ ವಿದ್ಯಾರ್ಥಿಗಳ ಜೀವನಕ್ಕೆ ಮಾರಕ – ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ಜಿಕ್ರಿಯ

kisan congres zikriya

ದಾವಣಗೆರೆ: ಕೊರೊನಾ ಮೊದಲನೇ ಹಾಗೂ ಎರಡನೇ ಅಲೆಯ ಬಿಸಿ ವಿದ್ಯಾರ್ಥಿಗಳ ಪಾಲಿಗೆ ಇನ್ನೂ ಮುಗಿದಂತೆ ಕಾಣುತ್ತಿಲ್ಲ ಆದ್ದರಿಂದ ಶಾಲೆಗಳ ಪುನರಾರಂಭಕ್ಕೆ ಸರ್ಕಾರ ದಿಟ್ಟ ನಿರ್ಧಾರ ಈವರೆಗೂ ಕೈಗೊಂಡಿಲ್ಲ ಇದರಿಂದಾಗಿ ಅನೇಕ ಶಾಲಾ ಮಕ್ಕಳ ಭವಿಷ್ಯದ ಜೊತೆಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ಜಿಕ್ರಿಯಾ ಆರೋಪಿಸಿದ್ದಾರೆ.

ಕೊರೊನ ಅಲೆಗಳಿಂದ ತತ್ತರಿಸಿರುವ ಜನಕ್ಕೆ ಮಕ್ಕಳ ಭವಿಷ್ಯದ ಚಿಂತೆಯೂ ಕಾಡತೊಡಗಿದೆ ಇನ್ನೂ ಆರಂಭವಾದ ಶಾಲೆಗಳು,ಯಾವುದೇ ದಿಟ್ಟ ಕ್ರಮ ಕೈಗೊಳ್ಳದ ಸರ್ಕಾರ ಇದೆಲ್ಲದರ ಮಧ್ಯೆ ಕೆಲವು ಖಾಸಗಿ ಶಾಲೆಗಳು ಆನ್ ಲೈನ್ ಕ್ಲಾಸ್ ನೆಪದಲ್ಲಿ ಒಂದು ರೀತಿಯ ವಸೂಲಿಗಿಳಿದಿರುವುದು ಪೋಷಕರಿಗೆ ಇನ್ನಿಲ್ಲದ ಆತಂಕಗಳಿಗೆ ಕಾರಣವಾಗಿದೆ ಎಂದರು

ಮೊದಲೇ ಕೊರೊನ ಅಲೆಗಳಿಂದಾಗಿ ಕೆಲಸ ಇಲ್ಲದೇ, ವ್ಯವಹಾರಗಲಿಲ್ಲದೆ ರೋಸಿ ಹೋಗಿರುವ ಸಾಮಾನ್ಯ ಮಧ್ಯಮ ವರ್ಗಗಳ ಪೋಷಕರಿಗೆ ಖಾಸಗಿ ಶಾಲೆಗಳ ದರ್ಬಾರ್ ಮುಂದೆ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುವ ಆತಂಕ ಕಾಡತೊಡಗಿದೆ. ಯಾವುದೇ ಆತಂಕವಿಲ್ಲದೆ ಕೆಲವು ಖಾಸಗಿ ಶಾಲೆಗಳು ಆನ್ಲೈನ್ ಕ್ಲಾಸ್ ಹೆಸರಲ್ಲಿ ವಸೂಲಿಗಿಳಿದಿದ್ದು ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿವೆ ಈ ಬಗ್ಗೆ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಇರುವುದು ಮಕ್ಕಳ ಪಾಲಿಗೆ ದುರಾದೃಷ್ಟವೇ ಸರಿ,

ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಶಾಲೆಗಳನ್ನು ತೆರವು ಮಾಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಇಲ್ಲವಾದರೆ ಮಧ್ಯಮ ವರ್ಗಗಳ ಮಕ್ಕಳು ಶಾಲೆ ಆರಂಭವಾಗದೇ ಇರುವ ಈ ಕಾಲದಲ್ಲಿ ಈಗಾಗಲೇ ಅನೇಕ ಸಣ್ಣ ಪುಟ್ಟ ಕೆಲಸಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದು ಇದು ಹೀಗೆ ಮುಂದುವರೆದರೂ ಆಶ್ಚರ್ಯವಿಲ್ಲ.

ಕೊರೊನ ತೀವ್ರತೆ ಕಡಿಮೆ ಆದ ನಂತರ ಬಿಹಾರ, ಗುಜರಾತ್ ಸೇರಿದಂತೆ ಅನೇಕ ಕಡೆ ಶಾಲೆ ತೆರೆಯಲು ಶರತ್ತುಬದ್ಧ ಅನುಮತಿ ನೀಡಲಾಗಿದ್ದು ನಮ್ಮ ರಾಜ್ಯದಲ್ಲೂ ಸಹ ಸೂಕ್ತ ಕ್ರಮ ಕೈಗೊಂಡು ಉಜ್ವಲ ಮಕ್ಕಳ ಭವಿಷ್ಯಕ್ಕೆ ಸಹಕಾರಿಯಾಗಬೇಕೆಂದು ಈ ಮೂಲಕ ಹೊಸದಾಗಿ ರಚನೆಯಾದ ಸರ್ಕಾರಕ್ಕೆ ಹಾಗೂ ಹೊಸದಾಗಿ ಆಯ್ಕೆಯಾಗುವ ಶಿಕ್ಷಣ ಸಚಿವರಿಗೆ ಜಿಕ್ರಿಯಾ ಮನವಿ ಮಾಡಿದ್ದಾರೆ.

ಮೊಹಮ್ಮದ್ ಜಿಕ್ರಿಯಾ
ಜಿಲ್ಲಾ ಕಾರ್ಯದರ್ಶಿ
ಕಿಸಾನ್ ಕಾಂಗ್ರೆಸ್ ದಾವಣಗೆರೆ

 

Leave a Reply

Your email address will not be published. Required fields are marked *

error: Content is protected !!