ಕೊರೋನಾ,ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಅತಂಕ ಬೇಡ-ಡಾ.ರಂಗನಾಥ್.

ಚಿತ್ರದುರ್ಗ ತಾಲ್ಲೂಕು ಸಿದ್ಧಾಪುರ ನೂತನ NGO ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ದಿನಾಂಕ 30-7-2021 ರಂದು ಹಮ್ಮಿಕೊಳ್ಳಲಾಗಿದ್ದ ವ್ಯಾಕ್ಸಿನೇಷನ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಕೋವಿಡ್ -19 , ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ವ್ಯಾಕ್ಸಿನೇಷನ್ ತೆಗೆದುಕೊಳ್ಳುವುದು ಅಗತ್ಯವಿದ್ದು.ಜನರು ಅತಂಕವನ್ನು ಕೃೆಬಿಟ್ಟು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಮುಂದಾಗಬೇಕೆಂದು ಸಲಹೆ ನೀಡಿದರು.
ಸರ್ಕಾರ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರು ಹಾಗೂ NGOಗಳ ಸಹಕಾರದೊಂದಿಗೆ ಕೊರೋರಾ ವೃೆರಸ್ನು ತೊಡೆದುಹಾಕಲು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಗ್ರಾಮೀಣ ಭಾಗದ ಜನರಲ್ಲಿ ಭಯಾ ಮತ್ತು ಅತಂಕದವಾತವರಣಾವಿದ್ದು ಇವುಗಳನ್ನ ತೋಡೆದುಹಾಕಲು ಕಡ್ಡಾಯವಾಗಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಸಲಹೆ ನೀಡಿದರು.
ಕೋವಿಡ್ -19, ಕೊರೋನಾ ವೃೆರಸಿನ ಮೂರು,ನಾಲ್ಕನೇ ಅಲೆಗಳು ಬರುವ ಸಾಧ್ಯತೆಗಳ ಬಗ್ಗೆ ವೃೆರಸ್ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದು.ಜನರು ಯಾವುದೇ ಭಯಾ,ಭೀತಿಗೆ ಒಳಗಾಗದೆ ವ್ಯಾಕ್ಸಿನೇಷನ್ ಪಡೆದುಕೊಳ್ಳಲು ಮನವಿ ಮಾಡಿದರು.
ವ್ಯಾಕ್ಸಿನೇಷನ್ ಪಡೆಯುವುದರಿಂದ ಕೊರೋನಾ ಅತಂಕದಿಂದ ಹೊರಬರಲು ಸಾಧ್ಯವಿದ್ದು.ಗ್ರಾಮೀಣ ಭಾಗದ ಜನರು ಪ್ರತಿಯೊಬ್ಬರು ವ್ಯಾಕ್ಸಿನೇಷನ್ ಪಡೆದು ಕೊರೋನಾ ಮುಕ್ತ ಜೀವನ ನಡೆಸಲು ಪ್ರಯತ್ನಿಸಬೇಕೆಂದು ಹೇಳಿದರು.
ಸಿದ್ದಾಪುರ ನೂತನ NGO ಅಧ್ಯಕ್ಷರಾದ ರಘು(ರಾಘವೇಂದ್ರ ) ಅವರು ಮಾತನಾಡಿ ನೂತನ ಸಂಸ್ಥೆವತಿಯಿಂದ ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಠಿಯಿಂದ ವ್ಯಾಕ್ಸಿನೇಷನ್ ಅಭಿಯಾನ ಆರಂಭಿಸಲಾಗಿದ್ದು.ಸಾರ್ವಜನಿಕರು,ಗ್ರಾಮೀಣಜನರು ಹೆಚ್ಚು ಆದ್ಯತೆ ನೀಡಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಗ್ರಾಮೀಣ ಭಾಗದ ಜನರ ಕ್ಷೇಮಾ ಮತ್ತು ಆರೋಗ್ಯದ ಹಿತ, ದೃಷ್ಟಿಯಿಂದ ಪ್ರತಿತಿಂಗಳು ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದ ಅವರು ಆರೋಗ್ಯ ಇಲಾಖೆಯ ಸಹಯೋಗವನ್ನು ನಿರೀಕ್ಷಿಸುತ್ತೆವೆಂದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್ ಅವರು ಮಾತನಾಡಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಆರೋಗ್ಯ ಸೇವೆ ಅತ್ಯಗತ್ಯವಾಗಿರುತ್ತದೆ ಆದ್ದರಿಂದ ಆರೋಗ್ಯ ಇಲಾಖೆ ನೆರವಿನೊಂದಿಗೆ ನೂತನ ಸಂಸ್ಥೆಯ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಉಚಿತ ಆರೋಗ್ಯ ಸೇವೆ ಆರಂಭಿಸುವುದು ಅನಿವಾರ್ಯತೆ ಇದೆ ಎಂದು ನುಡಿದರು.
ವ್ಯಾಕ್ಸಿನೇಷನ್ ಶಿಬಿರದಲ್ಲಿ ಆರೋಗ್ಯ ಇಲಾಖೆಯ ಗಂಗಾಧರ,ರಮೇಶ್ ಕದುರಪ್ಪ,ಜಾನುಕೊಂಡ ಸಾರ್ವಜನಿಕ ಅಸ್ಪತ್ರೆಯ ವೃೆದ್ಯಧೀಕಾರಿ ಡಾ.ಅಕ್ಷತಾ ಮಹೇಶ್ವರಪ್ಪ ಚಕ್ರಸಾಲಿ ನೂತನ ಸಿಬ್ಬಂದಿಗಳು ಹಾಜರಿದ್ದರು .