ಕೊರೋನಾ ವಾರಿಯರ್ ಗಳಿಗೆ, ಸ್ಪೂರ್ತಿ ಸಂಸ್ಥೆಯಿಂದ ಮಾನವೀಯ ಸ್ಪಂದನ !

 

ದಾವಣಗೆರೆ: ಸ್ಪೂರ್ತಿ ಸಂಸ್ಥೆ ವತಿಯಿಂದ ದಾವಣಗೆರೆ ಸಮೀಪದ ಬಾತಿ ಗ್ರಾಮದಲ್ಲಿ ದಿನಾಂಕ 31-7-2021 ರಂದು ಶನಿವಾರ ಸಂಜೆ ಕೊರೋನಾ ವಾರಿಯರ್ಸ್ ಗಳಾದ ಅಂಗನವಾಡಿ ಕಾರ್ಯಕರ್ತೆಯರು,ಅಶಾ ಕಾರ್ಯಕರ್ತೆಯರು,ಅಸ್ಪತ್ರೆಯ ಸಿಸ್ಟರ್ ಗಳು ಮತ್ತು ಅಂಗವಿಕಲರು(ವಿಶೇಷಚೇತನರಿಗೆ )ಗೌರವಿಸಲಾಯಿತು.

ಕೊರೋನಾ ಸಂಕಷ್ಟಕಾಲದಲ್ಲಿ ಸಾಂಕ್ರಾಮಿಕ ರೋಗಕ್ಕೆ ಒಳಗಾದವರಿಗೆ ಚಿಕಿತ್ಸೆ, ಜಾಗೃತಿ,ಅರಿವು ಮೂಡಿಸಿ ವೃೆರಸ್ ಮುಕ್ತ ಸಮಾಜ ನಿರ್ಮಾಣಕ್ಕೆ ನೆರವಾದ ಕೊರೋನಾ ವಾರಿಯರ್ಸ್ ಗಳಿಗೆ ಫೇಸ್ ಮಾಸ್ಕ್,ಸ್ಯಾನಿಟೇಜ್ ಗಳನ್ನು ವಿತರಣೆ ಮಾಡಲಾಯಿತು.

ಸಂದರ್ಭದಲ್ಲಿ ಸ್ಪೂರ್ತಿ ಸಂಸ್ಥೆಯ ಅಧ್ಯಕ್ಷರಾದ ರೂಪಾನಾಯಕ್ ಅವರು ಮಾತನಾಡಿ ಕೋವಿಡ್ 19,ಕೊರೋನಾ ಸಂಕಷ್ಟಕಾಲದಲ್ಲಿ ಮಾನವೀಯತೆ ಮೆರೆದ ಎಲ್ಲಾ ಕಾರ್ಯಕರ್ತೆಯರಿಗೂ ಸಮಾಜದಲ್ಲಿ ಗೌರವಿಸುವುದು ಅತ್ಯುತ್ತಮ ಕಾರ್ಯವಾಗಿದೆ ಎಂದರು.

ಅಂಗನವಾಡಿ,ಅಶಾ ಕಾರ್ಯಕರ್ತೆಯರು
ಮತ್ತು ಅಸ್ಪತ್ರೆಯ
ಸಿಸ್ಟರ್ ಗಳು ಕೊರೋನಾ ಕಾಲದಲ್ಲಿ ನಡೆದಾಡುವ ದೇವರಂತೆ ಭಾಸವಾಗಿದ್ದಾರೆ ಎಂದರು.

ಕರ್ನಾಟಕ ಶಾಂತಿ & ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್ ಅವರು ಮಾತನಾಡಿ
ಕೊರೋನಾ ಸೇರಿ ಹಲವು ಸಾಂಕ್ರಾಮಿಕ ರೋಗಗಳು ಮನುಷ್ಯರ ಜೊತೆ ಇದ್ದು. ಎಲ್ಲಾ ವೃೆರಸ್ ಗಳನ್ನು ಸಾಮಾಜಿಕ ಅಂತರ,ಸ್ಯಾನಿಟೃೆಜ್ ಮತ್ತು ಮಾಸ್ಕ್ ಗಳ ಮೂಲಕ ನಿಯಂತ್ರಣಕ್ಕೆ ತಂದುಕೊಳ್ಳುವುದು ಹಾಗೆಯೇ ವಿಕಲಚೇತನರು ಸೇರಿ ಪ್ರತಿಯೊಬ್ಬರು ಕಡ್ಡಾಯವಾಗಿ ವ್ಯಾಕ್ಸಿನೇಷನ್‌ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಉಮೇಶ್ ಅವರು ಮಾತನಾಡಿ ಸ್ಪೂರ್ತಿ ಸಂಸ್ಥೆವತಿಯಿಂದ ತುಂಬಾ ಉತ್ತಮ ಕೆಲಸವಾಗಿದ್ದು.ಕೊರೋನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದವರಿಗೆ ಗೌರವಿಸುವುದು ಉತ್ತಮ ಕಾರ್ಯ ಅಂದರು.

ಬಾತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹನುಮಂತಪ್ಪ ಅವರು ಮಾತನಾಡಿ ಸ್ಪೂರ್ತಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಇಂತಹ ಮಾನವೀಯತೆಯ ಕಾರ್ಯಗಳು ಜನರಿಗಾಗಿ ನಡೆಯುತ್ತಿರಬೇಕು ಅಂದರು.

ಇದೇ ಸಂದರ್ಭದಲ್ಲಿ ಸಿಸ್ಟರ್,ಅಶಾ ಕಾರ್ಯಕರ್ತೆಯರು ಹಾಜರಿದ್ದರು
ಕಾರ್ಯಕ್ರಮವನ್ನು ಕೃಷ್ಣ ನಿರ್ವಹಿಸಿದರು

Leave a Reply

Your email address will not be published. Required fields are marked *

error: Content is protected !!