ಯುವ ಕಾಂಗ್ರೆಸ್ ವತಿಯಿಂದ ಪೌರ ಕಾರ್ಮಿಕರಿಗೆ ಸುರಕ್ಷಿತ ಮೆಡಿಕಲ್ ಕಿಟ್ ವಿತರಣೆ

National youth congress workers gives medical kit to davangere corporation workers

ದಾವಣಗೆರೆ: ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಫ್ರಂಟ್ಲೈನ್ ಕರೋನಾ ವಾರಿಯರ್ಸ್ ಗಳಾದ ಪೌರ ಕಾರ್ಮಿಕರಿಗೆ ಸುರಕ್ಷಿತ ಮೆಡಿಕಲ್ ಕಿಟ್ ಕೊಡುವ ಜತೆಗೆ ಊಟದ ವ್ಯವಸ್ಥೆ ಮಾಡಿ ಗೌರವಿಸಲಾಯಿತು.

ಇದೇ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರ ಹೆಚ್.ಜೆ. ಮೈನುದ್ದೀನ್, ಕರೋನಾದಂತಹ ಸಾಂಕ್ರಾಮಿಕ ರೋಗದ ನಡುವೆಯೂ ಪ್ರಾಣ ಲೆಕ್ಕಿಸದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರ ಮಕ್ಕಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ನೀಡಬೇಕು ಹಾಗೂ ಸೋಂಕಿಗೆ ಬಲಿಯಾದ ಪ್ರತಿಯೊಬ್ಬರಿಗೂ 4 ಲಕ್ಷ ರೂ., ಪರಿಹಾರ ಘೋಷಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಮೊಹಮದ್ ಸಾಧಿಕ್ ಸದ್ದಾಂ, ಮಹಮದ್ ವಾಜೀದ್, ಸೈಯದ್ ಇರ್ಫಾನ್, ಮಹಮದ್ ರಫೀಕ್, ಅಲ್ಲಾವಲಿ ಸಮೀರ್ಹಾ, ಸಲ್ಮಾನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!