‘ಕಮಲ’ ಹಿಡಿದು ‘ಕೈ’ ಕೊಟ್ಟ ಮತದಾರರು.! ಉಪ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು.!

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ-37 ಹಾಗೂ ವಾರ್ಡ್‌ ಸಂಖ್ಯೆ – 28 ಮತ್ತು ಚನ್ನಗಿರಿ ಪುರಸಭೆ ವಾರ್ಡ್ ಸಂಖ್ಯೆ-16 ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಬಾರಿಸಿದ್ದಾರೆ.

ಮೇ 20 ರಂದು ಉಒ ಚುನಾವಣೆ ನಡೆದಿತ್ತು.  ದಾವಣಗೆರೆ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 28-ಭಗತ್‌ಸಿಂಗ್ ನಗರ ಮತ್ತು 37-ಕೆ.ಇ.ಬಿ ಕಾಲೋನಿಯಲ್ಲಿ ಉಪ ಚುನಾವಣೆಯ ಎಣಿಕಾ ಕಾರ್ಯವನ್ನು ಸರ್ಕಾರಿ ಬಾಲಕರ ಫ್ರೌಢಶಾಲೆ ಆವರಣದಲ್ಲಿ ಇರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಇಂದು ಮತ ಎಣಿಕೆ ಕಾರ್ಯ ಮಾಡಲಾಗಿತ್ತು.

ಪಾಲಿಕೆಯ 28 ವಾರ್ಡ್ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಹುಲ್ಲುಮನಿ ಗಣೇಶ್ ಅವರು 1884 ಮತಗಳನ್ನು ಪಡೆದರೆ, ಬಿಜೆಪಿಯ ಜೆ ಎನ್ ಶ್ರೀನಿವಾಸ್ 2565 ಮತ ಪಡೆದು 681 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ವಾರ್ಡ್ ನಂಬರ್ 37 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಶ್ವೇತಾ ಶ್ರೀನಿವಾಸ್ 2096 ಮತ ಪಡೆದರೆ, ಕಾಂಗ್ರೆಸ್ ನ ರೇಖಾರಾಣಿ 1303 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ. ಈ ಮೂಲಕ ಶ್ವೇತಾ ಶ್ರೀನಿವಾಸ್ 793 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದಾರೆ. ಈ ಮೂಲಕ ಪಾಲಿಕೆಯಲ್ಲಿ ಬಿಜೆಪಿಯ ಸಂಖ್ಯಾಬಲಕ್ಕೆ ಇಬ್ಬರು ಸದಸ್ಯರು ಹೆಚ್ಚಾಗಿದೆ.

ದಾವಣಗೆರೆ ಮಹಾನಗರಪಾಲಿಕೆ 28ನೇ ವಾರ್ಡ್ ನ ಫಲಿತಾಂಶ:

1) ಬಿಜೆಪಿ ಜೆ.ಎನ್.ಶ್ರೀನಿವಾಸ್ : 2565
2) ಕಾಂಗ್ರೆಸ್ ಗಣೇಶ್ ಹುಲುಮನೆ : 1884
3) ಉತ್ತಮ ಪ್ರಜಾಕೀಯ ಪಕ್ಷ ಚಂದ್ರಶೇಖರ್ : 86
4)  ಕೆ.ಆರ್.ಎಸ್ ಅಭಿಷೇಕ್ : 23
5) ಜೆಡಿಎಸ್ ಮಹಮದ್ ಸಮೀವುಲ್ಲಾ : 16
6) ನೋಟಾ : 12

ಬಿಜೆಪಿ ಅಭ್ಯರ್ಥಿ 681 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ದಾವಣಗೆರೆ ಮಹಾನಗರಪಾಲಿಕೆ 37ನೇ ವಾರ್ಡ್ ನ ಫಲಿತಾಂಶ

1) ಬಿಜೆಪಿ ಶ್ವೇತಾ ಶ್ರೀನಿವಾಸ್ : 2096
2) ಕಾಂಗ್ರೆಸ್ ರೇಖಾರಾಣಿ : 1303
3) ನೋಟಾ : 24

ಬಿಜೆಪಿ ಅಭ್ಯರ್ಥಿ 793 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆಯಿಂದ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದ ಶ್ರೀನಿವಾಸ್ ಹಾಗೂ ಪತ್ನಿ ಶ್ವೇತಾ ಶ್ರೀನಿವಾಸ್ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅದರಂತೆ ಆ ಎರಡು ವಾರ್ಡ್ ಗಳಿಗೆ ಉಪ ಚುನಾವಣೆ ನಡೆದಿತ್ತು.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!