ದೇಶ ಸಂಸ್ಕಾರವಂತರನ್ನು ಬಯಸುತ್ತದೆ – ನಿವೃತ್ತ ಯೋಧ ರವಿಕುಮಾರ್

ದಾವಣಗೆರೆ: ದೇಶ ಸಂಸ್ಕಾರವಂತರು ಮತ್ತು ಸುಸಂಸ್ಕೃತರನ್ನು ಬಯಸುತ್ತದೆ. ಆದ್ದರಿಂದ ನಾವು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಸುಬೇದಾರ್ ಮೇಜರ್ ಹಾನರರಿ ಕ್ಯಾಪ್ಟನ್ ರವಿಕುಮಾರ್ ಎನ್ ಕೆ ಕರೆ ಮಾಡಿದರು.
ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ದಿನಾಂಕ : 15/08/2024 ರ ಗುರುವಾರ ಬೆಳಿಗ್ಗೆ 8 ಕ್ಕೆ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರಾಮಾಣಿಕತೆ, ಸ್ವಂತಿಕೆ ಬೆಳೆಸಿಕೊಳ್ಳಬೇಕು. ಸಮಾಜ ಸೇವೆ, ದೇಶ ಸೇವೆಯಂತಹ ಪುನೀತ ಕಾರ್ಯದಲ್ಲಿ ತೊಡಗುವ ಮನಸ್ಸು ಮಾಡಬೇಕು ಎಂದರು.
ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ದಿನಾಚರಣೆ ಕುರಿತ ಭಾಷಣ ಹಾಗೂ ದೇಶಪ್ರೇಮ, ದೇಶಭಕ್ತಿ ಬಿಂಬಿಸುವ ನೃತ್ಯ ಪ್ರದರ್ಶನ ಏರ್ಪಟ್ಟವು.
ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಬಿ ಚಿಟ್ಟಕ್ಕಿ, ಆಡಳಿತಾಧಿಕಾರಿ ಕುಮಾರ್ ಎಸ್ ಕೆ, ಪ್ರಗತಿಪರ ರೈತರಾದ ಶೇಖರಪ್ಪ ಮಲನಾಯಕನಹಳ್ಳಿ , ಪ್ರಾಂಶುಪಾಲರಾದ ಚೇತನ್ ಕುಮಾರ್,ಉಪ ಪ್ರಾಂಶುಪಾಲರಾದ ಅಖಿಲೇಶ್ವರಿ ವೇದಿಕೆಯಲ್ಲಿದ್ದರು. ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.