cd stay:ರೇಣುಕಾಚಾರ್ಯರ ಬೆನ್ನಿಗೆ ನಿಂತ ಅಭಿಮಾನಿ ಬಳಗ, ಸಿಡಿ ಪ್ರಸಾರ ಮಾಡದಂತೆ ಕೋರ್ಟ್‌ನಿಂದ ತಡೆಯಾಜ್ಞೆ

ಬೆಂಗಳೂರು: ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರನ್ನು ಋಣಾತ್ಮಕವಾಗಿ ಬಿಂಬಿಸುವ ಯಾವುದೇ ಸಿಡಿಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ರಾಜ್ಯದಲ್ಲಿ ಬಿಜೆಪಿಯ ಕೆಲ ಶಾಸಕರುಗಳ ‘ಕಾಮಕಾಂಡ’ದ ಬಗ್ಗೆ ಮಾಧ್ಯಮಗಳಲ್ಲಿ ಅಶ್ಲೀಲ ಸಿಡಿಗಳನ್ನು ಪ್ರಸಾರ ಮಾಡಲಾಗಿತ್ತು. ಈಗ ಈ ಭೀತಿ ರೇಣುಕಾಚಾರ್ಯ ಅವರಿಗೂ ಶುರುವಾದಂತೆ ಕಂಡುಬಂದಿದ್ದು, ಪ್ರಸಕ್ತ ರಾಜಕೀಯದಲ್ಲಿ ನೂತನ ಸಂಪುಟ ರಚನೆಗೊಳ್ಳುವ ಈ ಸಮಯದಲ್ಲಿ ರೇಣುಕಾಚಾರ್ಯ ವಿರುದ್ಧ ಅಶ್ಲೀಲ ಸಿಡಿ ಪ್ರಸಾರಗೊಂಡರೆ ಮಂತ್ರಿ ಸ್ಥಾನ ಕೈತಪ್ಪುವ ಪರಿಸ್ಥಿತಿ ಇದೆ.
ಹಾಗಾಗಿ, ಈಗಾಗಲೇ ಜಿಲ್ಲೆಗೊಂದು ಮಂತ್ರಿಸ್ಥಾನದ ಒತ್ತಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ಕೋವಿಡ್ ಪರಿಸ್ಥಿತಿಯಲ್ಲಿ ಸೋಂಕಿತರೊಂದಿಗೆ ಬೆರೆತು ಅವರ ಸೇವೆ ಮಾಡಿದ ರೇಣುಕಾಚಾರ್ಯ ಹೆಸರು ದೇಶದಲ್ಲೆಲ್ಲಾ ಹಬ್ಬಿದ್ದು, ಅವರ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯಗಳು ಕೇಳಿಬಂದಿತ್ತು. ಆದರೆ, ಜಿಲ್ಲೆಯ ಕೆಲವು ಶಾಸಕರು ಅವರ ಮಂತ್ರಿಗಿರಿ ತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಸ್ವತಃ ಎಂ.ಪಿ. ರೇಣುಕಾಚಾರ್ಯ ಅವರೇ ಬಾಯ್ಬಿಟ್ಟಿದ್ದಾರೆ.
ಈಗ ಗ್ರಾಫಿಕ್ಸ್ನಲ್ಲಿ ಎಲ್ಲವೂ ಸಾಧ್ಯವಿದೆ. ಯಾವುದನ್ನ ಬೇಕಾದರೂ ಎಡಿಟ್ ಮಾಡಬಹುದು. ಯಾರ ಮುಖ ಯಾವುದಕ್ಕೂ ಜೋಡಿಸಬಹುದು. ಯಾರದ್ದೋ ಕಾಲು, ಯಾರದ್ದೋ ದೇಹ ಗ್ರಾಫಿಕ್ಸ್ ಮಾಡಿಸಬಹುದು. ರೇಣುಕಾಚಾರ್ಯ ವಿಡಿಯೋ ಇದೆ ಎಂದು ಯಾರೋ ಪುಣ್ಯಾತ್ಮ ಬ್ಲಾಕ್ ಮೇಲೆ ಮಾಡಿದ್ದಾರೆ. ಹೀಗಾಗಿ ನಾನು ತಡೆಯಾಜ್ಞೆ ತರುವುದಕ್ಕೆ ನೋಡುತ್ತಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನನ್ನು ಯಾರೂ ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ಶಾಸಕ ರೇಣುಕಾಚಾರ್ಯ ಅವರಿಗೆ ಈ ಬಾರಿಯ ಸಂಪುಟ ರಚನೆಯಲ್ಲಿ ಮಂತ್ರಿಸ್ಥಾನ ಬಹುತೇಕ ಖಚಿತ ಎಂಬ ಸುದ್ದಿ ರಾಜಕೀಯ ಮೂಲಗಳಿಂದ ವ್ಯಕ್ತವಾಗಿದ್ದು, ಶತಾಯಗತಾಯ ಸಚಿವ ಸ್ಥಾನ ಉಳಿಸಿಕೊಳ್ಳಬೇಕಾದ ಅಗತ್ಯ ರೇಣುಕಾಚಾರ್ಯರಿಗಿದೆ. ಹಾಗಾಗಿ, ಈ ವೇಳೆ ಅವರ ವಿರುದ್ಧದ ಷಡ್ಯಂತ್ರ ನಡೆಸಿದರೆ ಮಂತ್ರಿಗಿರಿಗೆ ಕುತ್ತು ಬಂದೀತು ಎಂಬ ಕಾರಣಕ್ಕೆ ರೇಣುಕಾಚಾರ್ಯ ಬೆಂಗಳೂರಿನ ಸಿಟಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ಅವರು ಯಾವುದೇ ಕಾರಣಕ್ಕೂ ಅಂತಹ ತಪ್ಪು ಮಾಡಲು ಸಾಧ್ಯವಿಲ್ಲದ. ಕೆಲವರು ಅವರ ಮುಖಕ್ಕೆ ಮಸಿಬಳಿಯುವ ಪ್ರಯತ್ನ ನಡೆಸಿದ್ದಾರೆ. ರೇಣುಕಾಚಾರ್ಯ ಅವರು ಕಷ್ಟದಲ್ಲಿದ್ದ ಎಲ್ಲರಿಗೂ ಸಹಾಯ ಮಾಡುತ್ತಾರೆ. ಅಭಿವೃದ್ಧಿಯ ಮಂತ್ರ ಜಪಿಸುತ್ತಾರೆ. ಈಗ ಅವರಿಗೆ ಸಚಿವ ಸ್ಥಾನ ಸಿಗುವ ಸಂಭವ ಬಹುತೇಕ ಖಚಿತಗೊಂಡಿರುವುದನ್ನು ತಪ್ಪಿಸಲು ಕಜೆಲಸವರು ಗ್ರಾಫಿಕ್ಸ್ ಮೂಲಕ ಏನೂ ಬೇಕಾದರೂ ಮಾಡಬಹುದು. ಗ್ರಾಮಾಂತರ ಜನರಿಗೆ ಉಇಂತಹವೆಲ್ಲ ತಿಳಿಯುವುದಿಲ್ಲ ಇದನ್ನೇ ನಿಜವೆಂದು ನಂಬುತ್ತಾರೆ. ಹಾಗಾಗಿ, ಅವರು ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿದರು.
ಮನೋಜ್ ಕೋಟೆಮಲ್ಲೂರು – ಅಧ್ಯಕ್ಷ – ರೇಣುಕಾಚಾರ್ಯ ಜನಸೇವಾ ಕಲ್ಯಾಣ ಟ್ರಸ್ಟ್