ಕೋವಿಡ್ ಸೆಂಟರಗಳನ್ನಾಗಿ ಬಳಸಿದ ವಿಧ್ಯಾರ್ಥಿ ನಿಲಯಗಳನ್ನು ಸ್ವಚ್ಛಗೊಳಿಸಲು ಆಗ್ರಹ

ದಾವಣಗೆರೆ: ದಾವಣಗೆರೆ ನಗರದ ಹೊರ ವಲಯದಲ್ಲಿರುವ ಶಾಮನೂರಿನ್ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರು ಮಹಿಳಾ ವಿಧ್ಯಾರ್ಥಿ ನಿಲಯಗಳನ್ನು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೋವಿಡ್ ಕೇರ್ ಸೆಂಟರಗಳಾಗಿ ಬಳಸಿಕೊಂಡಿತ್ತು.
ಆದರೆ ಕರೋನ ಅಲೆ ಕಡಿಮೆಯಾಗಿರುವುದರಿಂದ ಸೊಂಕಿತರ ಸಂಖ್ಯೆ ಕಡಿಮೆ ಯಾಗಿದ್ದು ಕಾಲೇಜುಗಳು ಪ್ರಾರಂಭವಾಗಿವೆ ಹಾಗಾಗಿ ಹಳ್ಳಿಕಡೆ ಮುಖಮಾಡಿದ್ದ ವಿಧ್ಯಾರ್ಥಿಗಳು ಪುನಃ ಹಾಸ್ಟೆಲ್ ಗಳಿಗೆ ಬರುತ್ತಿದ್ದಾರೆ. ಆದರೆ ಕೋವಿಡ್ ಸೆಂಟರ್ಗಳಾಗಿ ಬಳಸಿಕೊಂಡಿದ್ದ ನಿಲಯಗಳನ್ನು ಯಾವುದೇ ಸ್ವಚ್ಚತೆ ಮಾಡದೆ ಪ್ರಾರಂಭಿಸಿದ್ದು ಅದರಲ್ಲಿಯೇ ವಿಧ್ಯಾರ್ಥಿಗಳು ಇರುವಂತಹ ಪರಿಸ್ಥಿತಿ ಬಂದಿದೆ, ಈ ಕೂಡಲೆ ದಯಮಾಡಿ ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಲ್ಲಿರುವ ಮೂರು ವಿಧ್ಯಾರ್ಥಿ ನಿಲಯಗಳನ್ನು ಸ್ವಚ್ಛತೆ ಮಾಡಬೇಕು ಹಾಗೂ ಸೊಂಕಿತರಿಗೆ ಬಳಸಿದಂತಹ ಬೆಡ್ ಹಾಗೂ ಇನ್ನಿತರೆ ಕೋವಿಡ್ ಗೆ ಸಂಬಂಧಿಸಿದ ಉಪಕರಣಗಳನ್ನು ಅಲ್ಲಿಂದ ತೆಗೆದು ಹಾಕಬೇಕೆಂದು ಮಾಧ್ಯಮದವರ ಮುಖಾಂತರ ಸಂಬಂಧಿಸಿದ ದಾವಣಗೆರೆಯ ಜಿಲ್ಲಾಡಳಿತ ಹಾಗೂ ಡಿ.ಹೆಚ್.ಓ ಅಧಿಕಾರಿಗಳಿಗೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಗೋವಿಂದ್ ಹಾಲೇಕಲ್ಲ್ ಅವರು ತಿಳಿಸಿದ್ದಾರೆ.
ಹೊಸದಾಗಿ ನಿರ್ಮಾಣವಾಗಿರುವಂತ ನಿಲಯಗಳನ್ನು ಎರಡು ಬಾರಿ ಕೋವಿಡ್ ಸೆಂಟರ್ ಮಾಡಲು ಸಮಾಜ ಕಲ್ಯಾಣ ಇಲಾಖೆ ನೀಡಲಾಗಿತ್ತು.ಆದರೆ ವಿಧ್ಯಾರ್ಥಿಗಳ ವಿಧ್ಯಾಭ್ಯಾಸದ ಹಿತದೃಷ್ಟಿಯಿಂದ ಉತ್ತಮವಾದ ಉಪಕರಣಗಳನ್ನು ನಿಲಯಗಳಲ್ಲಿ ಅಳವಡಿಸಲಾಗಿತ್ತು. ಆದರೆ ಕೋವಿಡ್ ಸೆಂಟರ್ ಸಂದರ್ಭದಲ್ಲಿ ಹಲವಾರು ಉಪಕರಣಗಳು ಹಾನಿಗೊಳಗಾಗಿವೆ ಇದರ ಹೊಣೆಗಾರಿಕೆಯನ್ನು ಯಾರು ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಇನ್ನೆರಡು ಮೂರು ದಿನದಲ್ಲಿ ನಮ್ಮ ಮನವಿಗೆ ಸಂಬಂಧಿಸಿದವರು ಎಚ್ಚರಗೊಳ್ಳದಿದ್ದಾರೆ ನಮ್ಮ N.S.U.I , ವಿಧ್ಯಾರ್ಥಿಗಳು , ಹಾಗೂ ವಿಧ್ಯಾರ್ಥಿ ಸಂಘಟನೆಗಳ ಮುಖಾಂತರ ಪ್ರತಿಭಟನೆ ಮಾಡಲಾಗುವುದು ಹಾಗೂ ಮುಂದೆ ಬರುವಂತಹ ಮೂರನೇ ಅಲೆಗಳಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಧ್ಯಾರ್ಥಿ ನಿಲಯಗಳು , ಶಾಲ ಕಾಲೇಜುಗಳನ್ನು ಬಳಸಿಕೊಳ್ಳದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋವಿಂದ್ ಹಾಲೇಕಲ್ಲ್
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರು