BREAKING : ಕೊವಿಡ್ ನಿಂದ ಮೃತಪಟ್ಟ ಬಿ ಪಿ ಎಲ್ ಕುಟುಂಬಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ ಯಡಿಯೂರಪ್ಪ: WATCH BSY VIDEO

CM BS YADIYURAPPA GARUDA VOICE NEWS

Big Breaking: BSY VIDEO

ದಾವಣಗೆರೆ: ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ದಾರರ ಕುಟುಂಬದ ಓರ್ವ ಸದಸ್ಯರಿಗೆ 1 ಲಕ್ಷ ರೂ., ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಘೋಷಿಸಿದ್ದಾರೆ. ಈ ಯೋಜನೆ ಘೋಷಣೆ ದೇಶದಲ್ಲೇ ಮೊದಲು ಎಂದಿದ್ದಾರೆ ಸಿಎಂ.

ಕರೋನಾ ಸೋಂಕಿನಿಂದ ಬಡ ಮಧ್ಯಮ‌ ಕುಟುಂಬಗಳು ನಲುಗಿ ಹೋಗಿದ್ದು, ಆ ಕುಟುಂಬದ ದುಡಿಯುವ ವ್ಯಕ್ತಿಗಳೇ ಸೋಂಕಿನಿಂದ ಮೃತಪಟ್ಟು ಆ ಕುಟುಂಬದವರು ಇಂದು ಬೀದಿ ಪಾಲಾಗುತ್ತಿದ್ದಾರೆ. ಇದನ್ನು ಮನಗೊಂಡು ಸರ್ಕಾರದಿಂದ ಪರಿಹಾರ ಮೊತ್ತ ಘೋಷಿಸಲಾಗಿದೆ ಎಂದು ಅವರು ಸುದ್ದಿಗೋಷ್ಟಿ‌ ನಡೆಸಿ ತಿಳಿಸಿದ್ದಾರೆ.

ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬ ವರ್ಗದವರು ಕೋವಿಡ್ ನಿಂದ ಸಾವನ್ನಪ್ಪಿದ ಓರ್ವರಿಗೆ ಈ ಪರಿಹಾರ ಮೊತ್ತ ಅನ್ವಯಿಸಲಿದೆ ಎಂದು ಅವರು ಹೇಳಿದ್ದಾರೆ.ಇದಕ್ಕಾಗಿ 200 ರಿಂದ 300 ಕೋಟಿ ವ್ಯಯಿಸಲಾಗುವುದು ಎಂದಿದ್ದಾರೆ, ಅಲ್ಲದೆ ಸುಮಾರು 25000 ಜನರು ಈ ಯೋಜನೆಯಿಂದ ಪರಿಹಾರಕ್ಕೆ ಅರ್ಹರಾಗುತ್ತಾರೆ ಎಂದಿದ್ದಾರೆ. ಇನ್ನು ಸಿಎಂ ಯಡಿಯೂರಪ್ಪ ಯಾವ ಅಲೆಯಲ್ಲಿ ಮೃತಪಟ್ಟವರಿಗೆ ಈ ಯೋಜನೆಯ ಹಣ ಸಿಗುತ್ತೆ ಎಂಬುದಕ್ಕೆ ಸರಿಯಾದ ಉತ್ತರ ಬಂದಿಲ್ಲ, ಸರ್ಕಾರ ಹೊರಡಿಸುವ ಪರಿಹಾರದ ನೂತನ ಗೈಡಲೈನ್ಸ್ ಹೊರಬಿದ್ದಾಗ ಸಂಪೂರ್ಣ ಮಾಹಿತಿ ಸಿಗಲಿದೆ.

ಸಿಎಂ ಯಡಿಯೂರಪ್ಪ ಘೋಷಿಸಿದ ಪರಿಹಾರದ ವಿಡಿಯೋ ನೋಡಿ..

Leave a Reply

Your email address will not be published. Required fields are marked *

error: Content is protected !!