ಕೋವಿಡ್ ಎಲ್ಲಾ ಕಡೆ ತನ್ನ ಕೃಪೆ ತೋರಿದ್ದು, ಜಿಲ್ಲಾಡಳಿತ ವ್ಯಾಪಾರಸ್ಥರ ಕಡೆ ಕೃಪೆ ತೊರಲಿ – ಕೆ.ಎಲ್.ಹರೀಶ್ ಬಸಾಪುರ
ದಾವಣಗೆರೆ: ಕೋವಿಡ್ ಈಗ ರಾಜ್ಯಾದ್ಯಂತವಲ್ಲದೆ, ದೇಶಾದ್ಯಂತ ನಿಯಂತ್ರಣಕ್ಕೆ ಬಂದಿದ್ದು, ನಮ್ಮ ಜಿಲ್ಲೆಯಲ್ಲಿ ಸಹ ಇದು ಶೇ.0.73% ಕೆ ಇಳಿಮುಖವಾಗಿದೆ ಎಂದು ಹೇಳಲಾಗುತ್ತಿದೆ.
ಮದುವೆ ಸಮಾರಂಭಗಳು, ಸಭೆ-ಸಮಾರಂಭಗಳು, ರಾಜಕಾರಣಿಗಳ ಸಮಾವೇಶಗಳು ಯಥೇಚ್ಛವಾಗಿ ನಡೆಯುತ್ತಿದ್ದು, ಇಲ್ಲಿ ಎಲ್ಲಿಯೂ ಇರದ ನಿಯಮಗಳು ವ್ಯಾಪಾರಸ್ಥರಿಗೆ ಮಾತ್ರ ಇರುವುದು ವಿಷಾದನೀಯ.
ಜಿಲ್ಲಾಡಳಿತ ಅಂಗಡಿ-ಮುಂಗಟ್ಟುಗಳನ್ನು ರಾತ್ರಿ 9 ಗಂಟೆಗೆ ಮುಚ್ಚಲು ಕೋವಿಡ್ ಸಂದರ್ಭದಲ್ಲಿ ಆದೇಶಿಸಿರುವುದು ಸರಿ, ಈಗ ಎಲ್ಲಾ ಸಾಧಾರಣ ಸ್ಥಿತಿಗೆ ಮರಳಿರುವುದರಿಂದ ಆ ನಿಯಮವನ್ನು ಸಡಿಲಿಸಿ ರಾತ್ರಿ 10 ಗಂಟೆಯವರೆಗದರೂ ವಿಸ್ತರಿಸಬೇಕಾಗಿದೆ, ಆಗಲಾದರೂ ಅಂಗಡಿಗಳ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.
ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು, ಮಕ್ಕಳ ಪೀಸ್ ಕಟ್ಟಲು, ಖಾಸಗಿ ಫೈನಾನ್ಸ್ ಕಂಪನಿಗಳಿಂದ ಪಡೆದ ಸಾಲ ಮರುಪಾವತಿಸಲು, ಮಳಿಗೆಗಳ ಬಾಡಿಗೆ ಕಟ್ಟುವ ಅನಿವಾರ್ಯತೆ ಇರುವುದರಿಂದ ಮಾನ್ಯ ಜಿಲ್ಲಾಡಳಿತವು ಇದರ ಬಗ್ಗೆ ಗಮನಹರಿಸಿ ತಕ್ಷಣದಿಂದಲೇ ವ್ಯಾಪಾರಿಗಳಿಗೆ ರಾತ್ರಿ 10 ಗಂಟೆ ಯವರೆಗೆ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕಾಗಿ ವಿನಂಬ್ರ ಮನವಿ.