ನೈಟ್, ವೀಕೆಂಡ್ ಕರ್ಫ್ಯೂ ಏನಿರುತ್ತೆ, ಏನಿರಲ್ಲ, ನೈಟ್ ಡ್ಯೂಟಿ ಏನು ಕಥೆ, ಜನತೆಯ ಎಲ್ಲ ಪ್ರಶ್ನೆಗೆ ದಾವಣಗೆರೆ ಡಿಸಿ ಏನು ಹೇಳಿದ್ರು ಇದನ್ನ ಓದಿ..

ನಿಂದಕರಿಗೆ ಮನೆ ಮುಂದೆ ಗುಡಿ ಕಟ್ಟಿಸಬೇಕು ನೀರು, ಸಾಬೂನಿಲ್ಲದೇ ಶುಚಿಗೊಳಿಸುವರು ನಿಂದಕರು ಕಬೀರನ ಸಾಲುಗಳಿಂದ ಸುದ್ದಿಗೋಷ್ಠಿಸುದ್ದಿಗೋಷ್ಠಿ ಆರಂಭಿಸಿದ ಡಿಸಿ ಮಹಾಂತೇಶ ಬೀಳಗಿಯಾರಿಗೆ ನಿಂದಕರು ಎಂದಿದ್ದಕ್ಕೆ ಸ್ಪಷ್ಟನೆ ನೀಡದ ಮಹಾಂತೇಶ ಬೀಳಗಿ
ದಾವಣಗೆರೆ: ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಇದರಂತೆ ಬೆಳಗ್ಗೆ 6 ರಿಂದ ರಾತ್ರಿ 9ರ ವರೆಗೆ ಪಡಿತರ ಅಂಗಡಿ, ದಿನಸಿ, ಹಣ್ಣು ತರಕಾರಿ, ಮೀನು ಮಾಂಸ, ಹಾಲಿನ ಅಂಗಡಿ, ಪಶು ಆಹಾರ, ಅಗತ್ಯ ಸರಕು, ಕಟ್ಟಡ ನಿರ್ಮಾಣ ಸಾಮಗ್ರಿ ಅಂಗಡಿ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ನಿರ್ಭಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ ಹೇಳಿದರು.
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈದಾನ ಇಲ್ಲವೇ ತೆರೆದ ಪ್ರದೇಶದಲ್ಲಿ ಮಾತ್ರ ಸಗಟು ತರಕಾರಿ, ಹಣ್ಣು, ಹೂ ವ್ಯಾಪಾರ ನಡೆಸಲು ಅನುಮತಿ ಇದೆ. ಮುಂಗಾರು ಕೃಷಿ ಪೂರ್ವ ಚಟುವಟಿಕೆಗಳಿಗೆ ನಿಬರ್ಂಧ ಇಲ್ಲ. ಎಲ್ಲ ರೀತಿಯ ಕೈಗಾರಿಕೆ, ಸಂಸ್ಥೆಗಳು ಕಾರ್ಯನಿರ್ವಹಿಸಬಹುದು.
ರಾಜ್ಯದಲ್ಲಿ ಕೋವಿಡ್19 ಸೋಂಕು ಉಲ್ಬಣಗೊಂಡಿದ್ದು ಸೋಂಕು ನಿಯಂತ್ರಣಕ್ಕಾಗಿ ಸರ್ಕಾರದಿಂದ ಬಿಗಿ ಕ್ರಮ
ರಾಜಧಾನಿ ಹಾಗೂ ವಿವಿಧ ನಗರಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಬೀಳದಿರುವ ಬಗ್ಗೆ ಸಿಎಂ ಸಿಡಿಮಿಡಿಗೊಂಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪೊಲೀಸರು ಮುಂಜಾನೆಯಿಂದ ದಿಢೀರನೆ ಅಖಾಡಕ್ಕಿಳಿದರು. ಮಾರುಕಟ್ಟೆ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ ಪ್ರಸಂಗ ಹಲವು ನಗರಗಳಲ್ಲೂ ನಡೆಯಿತು. ಬೆಂಗಳೂರು ಸಹಿತ ಹಲವು ನಗರಗಳು ಇಂದು ಮಧ್ಯಾಹ್ನವಾಗುತ್ತಿದ್ದಂತೆ ಬಂಧ್ ಸಂದರ್ಭದ ಸನ್ನಿವೇಶಕ್ಕೆ ಸಾಕ್ಷಿಯಾಯಿತು.ಈ ನಡುವೆ ರಾಜ್ಯ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯಂತೆ ಅಗತ್ಯ ಸೇವೆಗಳಿಗೆ ಅಡಚಣೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹೊಸ ಮಾರ್ಗಸೂಚಿಯಂತೆ ಏನಿರುತ್ತೆ..? ಏನಿರಲ್ಲ..?
ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ / ತರಬೇತಿ/ ತರಬೇತಿ ಸಂಸ್ಥೆ ಇತ್ಯಾದಿಗಳು ಮುಚ್ಚಲ್ಪಡುತ್ತವೆ. ಆನ್‌ಲೈನ್ / ದೂರ ಶಿಕ್ಷಣಕ್ಕೆ ಅನುಮತಿ ಇದೆ.
ಎಲ್ಲಾ ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್‌ಗಳು, ಜಿಮ್ಗಳು, ಯೋಗ ಕೇಂದ್ರಗಳು, ಸ್ಪಾಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಾ, ಈಜುಕೊಳಗಳು, ಮನರಂಜನೆ / ಮನೋರಂಜನಾ ಉದ್ಯಾನಗಳು, ಕ್ಲಬ್‌ಗಳು, ಚಿತ್ರಮಂದಿರಗಳು, ಬಾರ್‌ಗಳು ಮತ್ತು ಸಭಾಂಗಣಗಳು, ವಿಧಾನಸಭೆ ಹಾಲ್‌ಗಳು ಮತ್ತು ಅಂತಹುದೇ ಸ್ಥಳಗಳು.
ತರಬೇತಿ ಉದ್ದೇಶಕ್ಕಾಗಿ ಮಾತ್ರ ಕ್ರೀಡಾ ವ್ಯಕ್ತಿಗಳಿಗಾಗಿ ಈಜು ಕೊಳದಲ್ಲಿ ತರಬೇತಿ ಪಡೆಯಲು ಅವಕಾಶ.
ಎಲ್ಲಾ ಸಾಮಾಜಿಕ / ರಾಜಕೀಯ / ಕ್ರೀಡೆ/ ಮನರಂಜನೆ / ಶೈಕ್ಷಣಿಕ / ಸಾಂಸ್ಕೃತಿಕ/ ಧಾರ್ಮಿಕ ಸಭೆ / ಇತರ ಸಭೆಗಳು ಮತ್ತು ಬೃಹತ್ ಸಭೆಗಳಿಗೆ ನಿಷೇಧ.
ಪ್ರೇಕ್ಷಕರು ಇಲ್ಲದೆ ಕ್ರೀಡಾಕೂಟಗಳನ್ನು ಆಯೋಜಿಸಲು ಮತ್ತು ಅಭ್ಯಾಸ ಮಾಡಲು ಸ್ಟೇಡಿಯಂ ಮತ್ತು ಆಟದ ಮೈದಾನ ಬಳಕೆಗೆ ಅನುಮತಿ ಇದೆ.
ಎಲ್ಲಾ ಧಾರ್ಮಿಕ ಸ್ಥಳಗಳು / ಪೂಜಾ ಸ್ಥಳಗಳನ್ನು ಸಾರ್ವಜನಿಕರಿಗೆ ಮುಚ್ಚಬೇಕು. ಪೂಜಾ ಸ್ಥಳದ ಸೇವೆಯಲ್ಲಿ ಸಿಬ್ಬಂದಿ ಕರ್ತವ್ಯಗಳನ್ನು ಮುಂದುವರಿಸಬಹುದು.
ರೆಸ್ಟೋರೆಂಟ್ ಮತ್ತು ಹೋಟೆಲ್ಗಳು ಕಾರ್ಯನಿರ್ವಹಿಸಲು ಅನುಮತಿ ಇದೆ. ಮತ್ತು ಪಾರ್ಸೆಲ್‌ಗೆ ಅನುಮತಿ ಇದೆ.
ಎಲ್ಲಾ ನಿರ್ಮಾಣ ಚಟುವಟಿಕೆಗಳು, ನಾಗರಿಕ ದುರಸ್ತಿ ಕಾರ್ಯಗಳಿಗೆ ಅನುಮತಿ ನೀಡಲಾಗಿದೆ..
ಮಾನ್ಸೂನ್ ಪೂರ್ವ ತಯಾರಿಕೆಗೆ ಸಂಬಂಧಿಸಿದ ಕೆಲಸಗಳಿಗೆ ಅನುಮತಿ ಇದೆ.
ಕೈಗಾರಿಕೆಗಳು / ಕೈಗಾರಿಕಾ ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ ಇದೆ
ಕೈಗಾರಿಕಾ ಸಂಸ್ಥೆಯ ಸಿಬ್ಬಂದಿ ಕೆಲಸಕ್ಕೆ ಹೋಗುವಾಗ ಅಧಿಕೃತ ಸಂಸ್ಥೆಯಿಂದ ಮಾನ್ಯಗೊಂಡ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ.
ಪಡಿತರ ಅಂಗಡಿಗಳು (ಪಿಡಿಎಸ್) ಸೇರಿದಂತೆ ಅಂಗಡಿಗಳು ವ್ಯವಹಾರ ಮುಂದುವರೆಯಲಿದೆ. ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನು, ಪ್ರಾಣಿಗಳ ಮೇವುಪೂರೈಕೆಗೆ ಅನುಮತಿ ಇದೆ.
ಸಗಟು ತರಕಾರಿ / ಹಣ್ಣು / ಹೂವಿನ ಮಾರುಕಟ್ಟೆಗಳು, ಕೋವಿಡ್‌ಗೆ ಕಟ್ಟುನಿಟ್ಟಾಗಿ ಆಟದ ಮೈದಾನ, ವಿಶಾಲ ಸ್ಥಳಗಳಲ್ಲಿ ಮಾರಾಟ ಮಾಡಲು ಅನುಮತಿ.
ಅತಿಥಿಗಳು ಹೋಟೆಲ್ ಗಳಲ್ಲಿ ತಂಗಲು ಅನುಮತಿ ಇದೆ.
ಮದ್ಯದಂಗಡಿಗಳು ಮತ್ತು ಮಳಿಗೆಗಳು / ಬಾರ್‌ಗಳಲ್ಲಿ ಪಾರ್ಸೆಲ್‌ಗೆ ಅನುಮತಿ
ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎಟಿಎಂಗೆ ಅನುಮತಿ ಇದೆ.
ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದವರಿಗೆ ಅನುಮತಿ ಇದೆ.
ಕಟಿಂಗ್ ಅಂಗಡಿಗಳು / ಸಲೂನ್/ ಬ್ಯೂಟಿ ಪಾರ್ಲರ್‌ಗಳನ್ನು ಅನುಮತಿಸಲಾಗಿದೆ.
ಮದುವೆ ಸಮಾರಂಭಗಳಲ್ಲಿ 50 ಜನರು ಪಾಲ್ಗೊಳ್ಳಲು ಅವಕಾಶ.
ಅಂತಿಮ ಸಂಸ್ಕಾರದಲ್ಲಿ 20 ಜನರಿಗಷ್ಟೇ ಭಾಗವಹಿಸಲು ಅವಕಾಶ.
ಸರ್ಕಾರಿ ಕಚೇರಿಗಳಲ್ಲಿ ಶೇ. 50 ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸಲು ಅವಕಾಶ
ಐಟಿ-ಬಿಟಿಯಲ್ಲಿ ವರ್ಕ್ ಫ್ರಂ ಹೋಂಗೆ ಅವಕಾಶ
ಹೈಕೋರ್ಟ್ ನ್ಯಾಯಮೂರ್ತಿಗಳ ಆದೇಶದಂತೆ ನ್ಯಾಯಾಲಯಗಳು ಹಾಗೂ ನ್ಯಾಯಾಂಗ ಕೆಲಸಗಳಿಗೆ ಅವಕಾಶ.
ಭಾರತ ಸರ್ಕಾರದ ಎಲ್ಲಾ ಕಚೇರಿಗಳು, ಅದರ ಸ್ವಾಯತ್ತ / ಅಧೀನ ಕಚೇರಿಗಳು, ರಕ್ಷಣಾ, ತುರ್ತು ಮತ್ತು ಅಗತ್ಯ ಸೇವೆಗಳು, ಮತ್ತು ಸಾರ್ವಜನಿಕ ನಿಗಮಗಳು ಮಾರ್ಗಸೂಚಿಗಳ ಪ್ರಕಾರ ಕಾರ್ಯನಿರ್ವಹಿಸುತ್ತವೆ.
ಪೆಟ್ರೋಲ್, ಡೀಸೆಲ್ ಪಂಪ್‌ಗಳು, ಅನಿಲ ಕೇಂದ್ರಗಳು ಸಂಪೂರ್ಣವಾಗಿ ಕಾರ್ಯಾಚರಣೆಯಲ್ಲಿ ಇರಲಿವೆ.
ಇ-ಕಾಮರ್ಸ್ ಮೂಲಕ ಎಲ್ಲ ವಸ್ತುಗಳ ಡೆಲಿವರಿಗೆ ಅವಕಾಶ
ನೈಟ್ ಶಿಫ್ಟ್ ಕೆಲಸಗಾರರಿಗೆ ತಮ್ಮ ಕಂಪನಿಯ ಐಡಿ ಕಾರ್ಡ್ ಬಳಸಬೇಕು. ಸರ್ಕಾರ ಯಾವುದೇ ಪಾಸ್ ನೀಡುವುದಿಲ್ಲ.
ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವವರು ಕಡ್ಡಾಯವಾಗಿ ಸಂಬಂಧಪಟ್ಟ ಕಂಪೆನಿಯ ಅಧಿಕೃತವಾದ ಐಡಿ ಕಾರ್ಡ್ ಹೊಂದಿರಲೇಬೇಕು ಮದುವೆ ಸಮಾರಂಭಗಳಿಗೆ ತಹಸೀಲ್ದಾರ್ ಕಚೇರಿಯಿಂದ ಅನುಮತಿ ಪಡೆದು ಗರಿಷ್ಠ 50 ಮಂದಿ ಮೀರದಂತೆ ನಿರ್ವಹಿಸಬೇಕು. ಮದುವೆಗೆ ಹೋಗಬೇಕಾದವರೆ ಒಂದೇ ತಂಡದಲ್ಲಿ ಹೋಗಬೇಕು. ಯಾರೋ ಯಾವುದೋ ಭಾಗದಿಂದ ಮದುವೆಗೆಂದು ಓಡಾಡುವಂತಿಲ್ಲ. ಇದನ್ನು ಕಟ್ಟುನಿಟ್ಟಿನಿಂದ ಪಾಲಿಸಲೇಬೇಕು. ನಿಶ್ಚಿತಾರ್ಥ, ಜನ್ಮ ದಿನ, ಇತ್ಯಾದಿ ಪಾರ್ಟಿಗಳಿಗೆ ಅವಕಾಶ ಇರುವುದಿಲ್ಲ. ರಾಜ್ಯದೊಳಗೆ ವ್ಯಕ್ತಿಗಳ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ಮುಕ್ತ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ವೀಕೆಂಡ್ ಕರ್ಫ್ಯೂ: ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ಕರ್ಪ್ಯೂ ಇರಲಿದೆ. ಈ ಅವಧಿಯಲ್ಲಿ ಬೆಳಗ್ಗೆ 6ರಿಂದ 10ರ ವರೆಗೆ ದಿನಸಿ, ತರಕಾರಿ ಹಾಲು ಅಂಗಡಿಗಳು ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ತೆರೆದಿರುತ್ತದೆ. ಮೇ 4ರ ವರೆಗೆ ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ಕಫ್ರ್ಯೂ ಜಾರಿಯಲ್ಲಿರಲಿದೆ. ಹೀಗಾಗಿ, ಪ್ರತಿಯೊಬ್ಬರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಪಾಲಿಕೆ ಆಯುಕ್ತ ಡಿ ಹೆಚ್ ಓ ನಾಗರಾಜ್, ಉಪವಿಭಗಧಿಕಾರಿ ಮಮತಾ ಹೀರೆಗೌಡರ್, ತಹಸೀಲ್ದಾರ್ ಗಿರೀಶ್ ಉಪಸ್ಥಿತರಿದ್ದರು.