ಕೊವಿಡ್ ಟೆಸ್ಟ್ ನಲ್ಲಿ ಮಾದರಿ ಈ ಗ್ರಾಮ: ಸ್ವ-ಇಚ್ಚೆಯಿಂದ ಕೊವಿಡ್ ಟೆಸ್ಟ್ ಮಾಡಿಸಿಕೊಂಡ ಗ್ರಾಮಸ್ಥರು

ದಾವಣಗೆರೆ – ಚನ್ನಗಿರಿ: ಕೋವಿಡ್ ಎರಡನೇ ಅಲೆಗೆ ಗ್ರಾಮಗಳು ಹೆಚ್ಚು ಬಲಿಯಾಗಿದ್ದು, ಸೋಂಕಿನ ಸರಪಳಿಯು ದಿನೆದಿನೆ ಹೆಚ್ಚುತ್ತಿದೆ, ಇದನ್ನು ತಡೆಯಲು ಸ್ವಯಂ ಗ್ರಾಮಸ್ಥರು ಎಚ್ಚೆತ್ತುಕೊಂಡು ಗಂಟಲು ಮಾದರಿ‌ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.

ಹೌದು ಈ ಘಟನೆ ನಡೆದಿದ್ದು ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದಲ್ಲಿ.  ಕಬ್ಬಳ ಗ್ರಾಮದಲ್ಲಿ 38 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು ಅದರಲ್ಲಿ 25 ಜನರು ಈಗಾಗಲೇ ಗುಣಮುಖರಾಗಿದ್ದಾರೆ. ಇಬ್ಬರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇನ್ನುಳಿದವರು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಲವು ಬಾರಿ ಜನರಲ್ಲಿ ಕೋರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ, ಗಂಟಲು ದ್ರವ ತೆಗೆದುಕೊಳ್ಳಲು ಬಂದಾಗ ತಿರಸ್ಕರಿಸಿದ್ದ ಜನರು, ಇದೀಗ ಸ್ವ-ಇಚ್ಚೆಯಿಂದ ಗಂಡಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಅಲ್ಲದೇ ತಮ್ಮ‌ಅಕ್ಕ ಪಕ್ಕದ ಮನೆಯವರಿಗೂ ಮನವಿ ಮಾಡಿ ಕರೆತರುತ್ತಿರುವುದು ವಿಶೇಷವಾಗಿದೆ.

ಬುಧವಾರ ಸುಮಾರು 55 ಜನರಿಗೆ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಮುಂಚಿತವಾಗಿ ಕೊರೊನಾ ಪಾಸಿಟಿವ್ ಇದ್ದ ಕುಟುಂಬಸ್ಥರಿಗೆ ಪ್ರತ್ಯೇಕವಾಗಿ ರಾಪಿಡ್ ಟೆಸ್ಟ್ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಒಂದೇ ಕುಟುಂಬದ ನಾಲ್ಕು ಜನರಲ್ಲಿ ಪಾಸಿಟಿವ್ ಬಂದಿದ್ದು ಅವರನ್ನು ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಇನ್ನುಳಿದ 50 ಜನರ ಫಲಿತಾಂಶವನ್ನು ಇನ್ನೆರಡು ದಿನಗಳಲ್ಲಿ ಬರಲಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ನಂಜನಾಯ್ಕ ಹಾಗೂ ಆಶಾಕಾರ್ಯಕರ್ತೆ ರುಕ್ಮಿಣಿಬಾಯಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ, ಶಂಕರ ನಾಯ್ಕ್, ಅಂಗನವಾಡಿ ಕಾರ್ಯಕರ್ತೆ ನಾಗಮ್ಮ, ತುಂಗಬಾಯಿ, ರೈತ ಸಂಘದ ಕಾರ್ಯಕರ್ತ ಸಂತೋಷ್ ನಾಯ್ಕ್, ಅಭಿಲಾಷ್ ಸೇರಿದಂತೆ ಗ್ತಾಮಸ್ಥರು ಉಪಸ್ಥಿತರಿದ್ದರು.

ವರದಿ- ಅಭಿಲಾಷ್ ಎಂ. ಕಬ್ಬಳ

Leave a Reply

Your email address will not be published. Required fields are marked *

error: Content is protected !!