Covid: ದಾವಣಗೆರೆಯಲ್ಲಿ ಮೂವರಿಗೆ ಕೋವಿಡ್ ಸೊಂಕು; ಬಹು ಅಂಗಾಂಗ ವೈಪಲ್ಯದಿಂದ ಸಾವನ್ನಪ್ಪಿದ ವ್ಯಕ್ತಿಗೆ ಕೊವಿಡ್ ಪಾಸಿಟಿವ್

Chigateri Hospital Davanagere

ದಾವಣಗೆರೆ: (Covid) ದಾವಣಗೆರೆ ಜಿಲ್ಲೆಯ ಮೂವರಿಗೆ ಕೋವಿಡ್ ದೃಢಪಟ್ಟಿದ್ದು ಓರ್ವ ವ್ಯಕ್ತಿ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟ ನಂತರ ಅತನಿಗೆ ಕೊವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ. 

ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅನುಮತಿ ಹಾಗೂ ನಿರ್ದೇಶನದ ಮೇರೆಗೆ ದಿನಾಂಕ 4/6/2025 ರಂತೆ, ಕೆಳಕಂಡಂತೆ ಜಿಲ್ಲೆಯ ಕೋವಿಡ್ ಸ್ಥಿತಿಯನ್ನು ಆರೋಗ್ಯ ಇಲಾಖೆ ವತಿಯಿಂದ ಪ್ರಚುರಪಡಿಸಲಾಗಿದೆ ಎಂದು ಮಿಡಿಯಾ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

ದಿನಾಂಕ 26/5/2025 ರಿಂದ 4/6/2025 ರವರೆಗೆ, ಒಟ್ಟು ಸಂಗ್ರಹಿಸಲಾದ ಗಂಟಲು ದ್ರವದ ಮಾದರಿ – 30. ವರದಿ ಸ್ವೀಕರಿಸಿರುವುದು – 22. ಪಾಸಿಟಿವ್ – 3. ಮರಣ – 1. ನಿರೀಕ್ಷೆಯಲ್ಲಿರುವ ವರದಿಗಳು – 8.

3 ಪಾಸಿಟಿವ್ ಹಾಗೂ ಮರಣದ ವಿವರ : 1. 65 ವರ್ಷದ ವ್ಯಕ್ತಿ, ಬೆಳ್ಳೂಡಿ ಗ್ರಾಮ, ಹರಿಹರ ತಾಲ್ಲೂಕು. ಇವರು ದಿನಾಂಕ 24/5/2025 ರಂದು ಅನಿಯಂತ್ರಿತ ಮಧುಮೇಹ, ರಕ್ತದೊತ್ತಡ ಹಾಗು ಹೃದಯ ಸಂಬಂಧಿ ಕಾಯಿಲೆ ಮತ್ತು ಕಾಲಿನ ಗ್ಯಾಂಗ್ರಿನ್ ಗಾಗಿ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ. ದಿನಾಂಕ 30/5/2025 ರಂದು ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಕೋವಿಡ್ ಪರೀಕ್ಷೆಗಾಗಿ ಮಾದರಿ ತೆಗೆಯಲಾಗಿದೆ. ಅದೇ ದಿನ ವ್ಯಕ್ತಿಯು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿರುತ್ತಾರೆ. ದಿನಾಂಕ 3/6/2025 ರಂದು ಸದರಿ ವ್ಯಕ್ತಿಯ ಕೋವಿಡ್ ವರದಿ ಪಾಸಿಟಿವ್ ಎಂದು ಬಂದಿರುತ್ತೆದೆ.

ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಯು ಮೃತರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವರ ಮನೆಯಲ್ಲಿ ಮೂರು ಜನ ಇದ್ದು, ಯಾವುದೇ ಲಕ್ಷಣಗಳು ಇರುವುದಿಲ್ಲ ಎಂದು ತಿಳಿದು ಬಂದಿರುತ್ತದೆ. ಮುಂಜಾಗ್ರತಾ ಕ್ರಮವಾಗಿ ಏಳು ದಿನಗಳವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾವಣೆ ಮಾಡಲು ಸೂಚಿಸಿದೆ.

2. 70 ವರ್ಷದ ಮಹಿಳೆ, ಉಜ್ಜಿನಿ ಗ್ರಾಮ, ಕೂಡ್ಲಿಗಿ. ಇವರಿಗೆ ಕೊವಿಡ್ ಸೌಮ್ಯ ಲಕ್ಷಣಗಳು ಇದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

3. 21 ವರ್ಷದ ಮಹಿಳೆ, ರುದ್ರನಕಟ್ಟೆ ಗ್ರಾಮ, ದಾವಣಗೆರೆ ತಾಲ್ಲೂಕು. ಇವರಿಗೂ ಸಹ ಕೂಡಾ ಸೌಮ್ಯ ಲಕ್ಷಣಗಳು ಇದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಕೋವಿಡ್ ವರದಿ : ಒಟ್ಟು ಸಂಗ್ರಹಿಸಲಾದ ಮಾದರಿಗಳು – 13. ವರದಿ ಸ್ವೀಕರಿಸಿದ್ದು – ಇಲ್ಲ (ಪ್ರಯೋಗ ಶಾಲೆ ಕಾರ್ಯ ನಿರ್ವಹಿಸಿರುವುದಿಲ್ಲ) ಈ ದಿನದ ಮಾದರಿ ಸಂಗ್ರಹ – 2. ಒಟ್ಟು ನಿರೀಕ್ಷಿಸಿದ ವರದಿ – 13. 3/6/2025 ರಂತೆ ಪಾಸಿಟಿವ್ – 0.

error: Content is protected !!