ದಾವಣಗೆರೆ ಜಿಲ್ಲೆಯಲ್ಲಿ ಒಂದೇ ದಿನ 91 ಸಾವಿರಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿದ ಜಿಲ್ಲಾಡಳಿತ
ದಾವಣಗೆರೆ: ಕರೋನಾ ನಿಯಂತ್ರಣಕ್ಕಾಗಿ ಜಿಲ್ಲೆಯಾದ್ಯಂತ ಕೈಗೊಂಡಿದ್ದ ಬೃಹತ್ ಲಸಿಕಾಕರಣ ಸಂಪೂರ್ಣ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ 91.582 ಜನರು ಒಂದೇ ದಿನದಲ್ಲಿ ಲಸಿಕೆ ಪಡೆದಿದ್ದಾರೆ, ಒಟ್ಟು ಜಿಲ್ಲೆಯಲ್ಲಿ 11,67,507 ಜನರು ಕೊವಿಡ್ ಲಸಿಕೆಯನ್ನ ಹಾರಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಸರ್ಕಾರ ರಾಜ್ಯಾದ್ಯಂತ ಪ್ರಥಮ ಬಾರಿಗೆ ಇಷ್ಟು ದೊಡ್ಡ ಮಟ್ಡದ ಲಸಿಕಾಕರಣ ಹಮ್ಮಿಕೊಂಡಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಒಂದು ಲಕ್ಷ ಜನರಿಗೆ ಕೋವಿಡ್ ನಿರೋಧಕ ಲಸಿಕೆ ನೀಡಿದ್ದು, 80 ಸಾವಿರ ಜನರಿಗೆ ನೀಡುವ ಗುರಿ ನೀಡಿತ್ತು. ಆದರೆ, ಜಿಲ್ಲೆಯಲ್ಲಿ ಜನರು ವ್ಯಾಪಕವಾಗಿ ಸ್ಪಂದನೆ ನೀಡಿರುವ ಪರಿಣಾಮ ಗುರಿಗಿಂತಲೂ ಹೆಚ್ಚಿನ ಸಾಧನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇಂದು ಬೆಳಿಗ್ಗೆ 8 ರಿಂದಲೇ ಜಿಲ್ಲಾದ್ಯಂತ ಲಸಿಕಾಕರಣ ಪ್ರಾರಂಭಗೊಂಡು ಸಂಜೆ 6 ವರೆಗೂ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಿಜಿ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಲಸಿಕಾಮೇಳ ನಡೆದಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಯಿತು ಎಂದು ಅವರು ತಿಳಿಸಿದ್ದಾರೆ.