ನೂರು ದಿನ ಕೊವಿಡ್ ಕರ್ತವ್ಯ ಪೂರೈಸುವ ವೈದ್ಯಕೀಯ ಸಿಬ್ಬಂದಿಗೆ ಪಿಎಂ ಸರ್ವೀಸ್ ಸನ್ಮಾನ್ ನೀಡಲು ನಿರ್ದಾರ

ದಾವಣಗೆರೆ:100 ದಿನಗಳ ಕೋವಿಡ್ ಕರ್ತವ್ಯಗಳನ್ನು ಪೂರೈಸುವ ವೈದ್ಯಕೀಯ ಸಿಬ್ಬಂದಿಗೆ ಪ್ರಧಾನ ಮಂತ್ರಿಯ ಡಿಸ್ಟಿಂಗ್ವಿಶ್ಡ್ ಕೋವಿಡ್ ನ್ಯಾಷನಲ್ ಸರ್ವಿಸ್ ಸಮ್ಮಾನ್ ನೀಡಲು ನಿರ್ಧಾರ, ಇದು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಪ್ರೇರಣಾದಾಯಕ ಹೆಜ್ಜೆಯಾಗಿದೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಕೋವಿಡ್ ಮಾಹಾ ಮಾರಿ‌ ವಿರುಧ್ಧ ಹೋರಾಡಲು, ಪ್ರಧಾನಿ‌ ನರೇಂದ್ರ ಮೋದಿಯವರಿಂದ ಪ್ರಮುಖ ನಿರ್ಧಾರವನ್ನ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿಗೆ ಹೃದಯ ಪೂರ್ವಕ ಧನ್ಯವಾದಗಳನ್ನ ಅರ್ಪಿಸುತ್ತಿದ್ದೇನೆ. COVID-19 ವಿರುದ್ಧ ಹೋರಾಡಲು ವೈದ್ಯಕೀಯ ಸಿಬ್ಬಂದಿಗಳ ಲಭ್ಯತೆಯನ್ನು ಹೆಚ್ಚಿಸಲು ಪಿಎಂ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ನೀಟ್-ಪಿಜಿ ಪರೀಕ್ಷೆಯನ್ನು ಕನಿಷ್ಠ 4 ತಿಂಗಳವರೆಗೆ ಮುಂದೂಡಲಾಗುವುದು, 100 ದಿನಗಳ ಕೋವಿಡ್ ಕರ್ತವ್ಯಗಳನ್ನು ಪೂರೈಸುವ ವೈದ್ಯಕೀಯ ಸಿಬ್ಬಂದಿಗೆ ಮುಂಬರುವ ನಿಯಮಿತ ಸರ್ಕಾರಿ ನೇಮಕಾತಿಗಳಲ್ಲಿ ಆದ್ಯತೆ ನೀಡಲಾಗುವುದು. ವೈದ್ಯಕೀಯ ಇಂಟರ್ನ್‌ಗಳನ್ನು ತಮ್ಮ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ಕೋವಿಡ್ ಮ್ಯಾನೇಜ್‌ಮೆಂಟ್ ಕರ್ತವ್ಯದಲ್ಲಿ ನಿಯೋಜಿಸಲಾಗುವುದು.

ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಟೆಲಿ-ಸಮಾಲೋಚನೆ ಮತ್ತು ಸೌಮ್ಯವಾದ ಕೋವಿಡ್ ಪ್ರಕರಣಗಳ ಮೇಲ್ವಿಚಾರಣೆಗೆ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ಬಳಸಿಕೊಳ್ಳಬಹುದು.

ಹಿರಿಯ ವೈದ್ಯರು ಮತ್ತು ನರ್ಸಗಳ ಮೇಲ್ವಿಚಾರಣೆಯಲ್ಲಿ ಬಿಎಸ್ಸಿ / ಜಿಎನ್ಎಂ ಅರ್ಹ ದಾದಿಯರನ್ನು ಪೂರ್ಣ ಸಮಯದ ಕೋವಿಡ್ ನರ್ಸಿಂಗ್ ಕರ್ತವ್ಯದಲ್ಲಿ ಬಳಸಿಕೊಳ್ಳವ ಕುರಿತು.

ದೇಶದಲ್ಲಿ ದಿನೆ ದಿನೆ ಹೆಚ್ಚುತ್ತಿರುವ ಆಕ್ಸಿಜನ್ ಹಾಗು ವೆಂಟಿಲೇಟರ್ ಗಳ ಬೇಡಿಕೆ, ನೀಗಿಸಬೇಕೆಂಬ ಈ ಪ್ರಶ್ನಾರ್ಥಕ ಸಮಸ್ಯಯನ್ನು, ಹಾಗು ಕೋವಿಡ್ ವಿರುಧ್ಧ ಹೋರಾಡಲು ಮಾನವ ಸಂಪನ್ಮೂಲವನ್ನು ಹೆಚ್ಚಿಸುವ ಕುರಿತು ಪ್ರಧಾನಿಯಾಗಿ ಕೆಲ ದಿಟ್ಟ ನಿರ್ಧಾರಗಳನ್ನು‌ ಪ್ರಕಟಿಸಿ ಮತ್ತೊಮ್ಮೆ ತಮ್ಮ ನಾಯಕತ್ವದಲ್ಲಿ ಭಾರತದ ಸಧೃಡತೆಯನ್ನು ಪ್ರದರ್ಶಿಸಿದ್ದಾರೆ ಎಂದು ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!