ಕಾಲುಜಾರಿ ಹೊಂಡದಲ್ಲಿ ಬಿತ್ತು ಹಸು.! ಯುವಕರ ರಕ್ಷಣಾ ಕಾರ್ಯ ರೋಮಾಂಚ.? ವಿಡಿಯೋ ನೋಡಿ
ದಾವಣಗೆರೆ: ಹೊಂಡದಲ್ಲಿ ಬಿದ್ದಿದ್ದ ಗೋವನ್ನು ಕೆಲವು ಯುವಕರ ತಂಡ ರಕ್ಷಿಸಿ ಮಾನವೀಯತೆ ಮೆರೆದಿದೆ.
ಜಗಳೂರು ತಾಲ್ಲೂಕಿನ ನರೇನಹಳ್ಳಿ ಗ್ರಾಮದ ಬಳಿಯಿರುವ ಹೊಂಡವೊಂದರಲ್ಲಿ ಹಸು ಬಿದ್ದು ಹೊರಗೆ ಬರಲು ಆಗದೆ ಪರದಾಡುತ್ತಿದ್ದುದ್ದನ್ನು ಗಮನಿಸಿದ. ಯುವಕರ ತಂಡ ಅದನ್ನು ಕ್ರೇನ್ ಮುಖಾಂತರ ರಕ್ಷಿಸಿ ಪ್ರಾಣ ಉಳಿಸಿದೆ.
ಹಸುವು ಹೊಂಡದ ಬಳಿ ನೀರು ಕುಡಿಯಲು ಹೋದಾಗ ಈ ಅವಘಡ ಸಂಭವಿಸಿದ್ದು, ಸಮಯಕ್ಕೆ ಸರಿಯಾಗಿ ಆಗಮಿಸಿದ ಯುವಕರ ತಂಡವು ಗೋವನ್ನು ರಕ್ಷಿಸಿರುವುದು ಗ್ರಾಮದ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.