ಅಪರಾಧ ಪ್ರಕರಣ : ತಡೆಯಾಜ್ಞೆ ಇದ್ದರೆ ಪಾಸ್‌ಪೋರ್ಟ್ ನವೀಕರಣಕ್ಕೆ ಅನುಮತಿ ಅಗತ್ಯವಿಲ್ಲ : ಹೈಕೋರ್ಟ್

ಬೆಂಗಳೂರು : ಅಪರಾಧ ಪ್ರಕರಣಗಳಿಗೆ ಸಂಬAಧಿಸಿದAತೆ ವಿಚಾರಣಾ ಕೋರ್ಟ್ಗಳಲ್ಲಿ ಬಾಕಿ ಉಳಿದಿರುವ ಕ್ರಿಮಿನಲ್ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆಯಿದ್ದಾಗ ಆರೋಪಿಯ ಪಾಸ್‌ಪೋರ್ಟ್ ನವೀಕರಣಕ್ಕೆ ಮತ್ತೆ ಅಧೀನ ನ್ಯಾಯಾಲಯದ ಅನುಮತಿ ಅಗತ್ಯವಿಲ್ಲ ಎಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿದೆ. ಬ್ಯಾಂಕ್ ವಂಚನೆ ಆರೋಪದ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಬೆಂಗಳೂರಿನ ಆರ್.ಎಚ್. ಕಸ್ತೂರಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಇದರಿಂದಾಗಿ ಇನ್ನು ಪಾಸ್ ಪೋರ್ಟ್ ಅಧಿಕಾರಿಗಳು ಪಾಸ್‌ಪೋರ್ಟ್ ನವೀಕರಣಕ್ಕೆ ಆರೋಪ  ಎದುರಿ ಸುತ್ತಿರುವವರು ಅರ್ಜಿ ಸಲ್ಲಿಸಿದರೆ ಆಗ ಪ್ರಕರಣದಲ್ಲಿ ಹೈಕೋರ್ಟ್ ತಡೆ ನೀಡಿದ್ದರೆ, ವಿಚಾರಣಾ ಕೋರ್ಟ್ ಅನುಮತಿ ಕೋರದೆ ಪಾಸ್‌ಪೋರ್ಟ್ ನವೀಕರಣವನ್ನು ಮಾಡಿ ಕೊಡಬೇಕಾಗುತ್ತದೆ. ಸುಮ್ಮನೆ ಕೇಸು ಬಾಕಿ ಇದೆ ಪಾಸ್ ಪೋರ್ಟ್ ನವೀಕರಣ ಮಾಡಲಾಗದು ಎಂದು ಹೇಳಲಾಗುವುದಿಲ್ಲ.

1993ರಲ್ಲಿ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಪಾಸ್‌ಪೋರ್ಟ್ ನವೀಕರಣಕ್ಕಾಗಿ ಆರೋಪಿಯು ವಿಚಾರಣಾ ನ್ಯಾಯಾಲಯದ ಅನುಮತಿಯನ್ನು ಪಡೆಯುವ ಷರತ್ತು, ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದಾಗ ಉದ್ಭವಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಕ್ರಿಮಿನಲ್ ಮೊಕದ್ದಮೆಯಲ್ಲಿನ ಎಲ್ಲಾ ಮುಂದಿನ ಪ್ರಕ್ರಿಯೆಗಳಿಗೆ ಉನ್ನತ ಕೋರ್ಟ್ ತಡೆಯಾಜ್ಞೆಯನ್ನು ವಿಧಿಸಿದ್ದಾಗ ಕ್ರಿಮಿನಲ್ ಪ್ರಕರಣದ ಬಾಕಿಯಿದೆ ಎಂಬ ಆಧಾರದ ಮೇಲೆ ಪಾಸ್‌ಪೋರ್ಟ್ ನವೀಕರಣ ಅಥವಾ ಮರು-ವಿತರಣೆಗಾಗಿ ಅರ್ಜಿದಾರರ ವಿನಂತಿಯನ್ನು ನಿರಾಕರಿಸಲು ಈ ಅಧಿಸೂಚನೆ ನಿರ್ಲಕ್ಷ್ಯಿಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

error: Content is protected !!