C V Raman College: ಸಿ ವಿ ರಾಮನ್ ಕಾಲೇಜ್ ನಲ್ಲಿ‌ ಆಹಾರ ಮೇಳ ( Food Fest ) || ವಿದ್ಯಾರ್ಥಿಗಳು ಹೇಗೆ ಎಂಜಾಯ್ ಮಾಡಿದ್ರು ಅಂತಾ 👇 ವಿಡಿಯೋ ನೋಡಿ

cv Raman college food festival

ದಾವಣಗೆರೆ: ವಿದ್ಯಾರ್ಥಿಗಳು ಕೇವಲ ಶಿಕ್ಷಣದಲ್ಲಿ ಮುಂದಿದ್ದರೆ ಸಾಲದು, ಅದರ ಜತೆಗೆ ಕೌಶಲ್ಯ ಹೊಂದಿರುವ ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮ ಜ್ಞಾನವಿಕಾಸ ಮಾಡಿಕೊಳ್ಳವ ಅಗತ್ಯ ಈಗ ಅವಶ್ಯಕವಾಗಿದೆ.

ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ ಇವುಗಳಷ್ಟೆ ಅಲ್ಲದೇ, ಉದ್ಯಮಶೀಲರಾಗಿ ಬೆಳೆಯಲು ವಿದ್ಯಾರ್ಥಿಗಳಿಗೆ ಈಗಿನಿಂದಲೇ ಚಟುವಟಿಕೆಗಳ ಮೂಲಕ ಅಗತ್ಯ ತರಬೇತಿ ನೀಡಬೇಕಾದ ಅವಶ್ಯಕತೆ ಇದೆ. ಈಗ ಇದಕ್ಕೆ ಉದಾಹರಣೆಯಾಗಿ ನಗರದ ಸಿ.ವಿ. ರಾಮನ್ ಕಾಲೇಜು ಮುಂದಾಗಿದ್ದು, ವಿದ್ಯಾರ್ಥಿಗಳಿಗೆ ಸರ್ವರೀತಿ ತಯಾರಿಗೆ ಅಗತ್ಯ ತರಬೇತಿ ಶಿಬಿರ ಸೇರಿದಂತೆ ಕೌಶಲ್ಯಾಭಿವೃದ್ಧಿಗೆ ಅಗತ್ಯವಿರುವ ತರಬೇತಿಯನ್ನು ನೀಡುತ್ತಾ ಬಂದಿದೆ.

ಈಚೆಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಫುಡ್ ಫೆಸ್ಟ್ ಆಯೋಜಿಸಲಾಗಿತ್ತು. ಅಂದರೆ ಓದುವುದಕ್ಕೆ ಸೀಮಿತಗೊಳ್ಳದೇ ಪಠ್ಯೇತರ ಚಟುವಟಿಕೆಗಳಿಗೂ ಕಾಲೇಜಿನಿಂದ ಪ್ರೋತ್ಸಾಹಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಉತ್ಸಾಹ ಭರಿತರಾಗಿ ಫುಡ್ ಫೆಸ್ಟ್ ನಲ್ಲಿ ಪಾಲ್ಗೊಂಡು ತರಹೇವಾರಿ ತಿಂಡಿಗಳನ್ನು ಮಾಡಿ, ತಾವು ಸವಿದು, ಫುಡ್ ಫೆಸ್ಟ್ ವೀಕ್ಷಿಸಲು ಬಂದಿದ್ದವರಿಗೂ ಕಡಿಮೆ ಬೆಲೆಗೆ ಕೊಟ್ಟು ಉದ್ಯಮಶೀಲ ಪ್ರವೃತ್ತಿಗೆ ನಾಂದಿ ಹಾಡಿದರು.

 

ಸಿ.ವಿ. ರಾಮನ್ ಕಾಲೇಜು ಆರಂಭವಾಗಿ ಈ ಹದಿನಾರು ವರ್ಷಗಳಲ್ಲಿ ಇಂತಹ ಹಲವು ಶಿಬಿರ, ತರಬೇತಿಗಳು, ಕೌಶಲ್ಯಾಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡುತ್ತಾ ಬಂದಿದೆ. ಇದೇ ಕಾರಣಕ್ಕೆ ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಅಲ್ಲದೇ, ಕಾಲೇಜಿಗೆ ವಿವಿಧ ವಿಶ್ವವಿದ್ಯಾಲಯಗಳಿಂದ ಹದಿನಾಲ್ಕು ವಿವಿಧ ಪ್ರಶಸ್ತಿಗಳ ಗರಿ ಸಿಕ್ಕಿದೆ.

ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕಾಲೇಜಿನ ಬಗ್ಗೆ ಮತ್ತು ಅಲ್ಲಿ ನೀಡಲಾಗುತ್ತಿರುವ ತರಬೇತಿಯ ಕುರಿತು ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಅವರು ಮಾತನಾಡಿ, ಕರೋನಾ ಸಾಂಕ್ರಾಮಿಕ ಇರುವ ಈ ಹೊತ್ತಲ್ಲಿ ಆರ್ಥಿಕವಾಗಿ ಎಲ್ಲ ಜನರು ಕಂಗೆಟ್ಟಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಆಲೋಚನೆಗಳು ವಿಶಾಲವಾಗಿಸಲು, ಹಾಗೂ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಹೊಸ ಉದ್ಯಮಗಳ ಶುರುವಾತಿಗೆ ಅವರನ್ನು ಪ್ತೋತ್ಸಾಹಿಸಲು ಈ ಫುಡ್ ಫೆಸ್ಟ್ ಹಮ್ಮಿಕೊಳ್ಳಲಾಗಿದೆ ಎಂದು ಅವರು‌ ತಿಳಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!