ಪ್ರಳಯ ಸಂತ್ರಸ್ತರಿಗೆ ಚೈತನ್ಯ ತುಂಬಿದ ‘ಅಣ್ಣಾ, ರವಿ’.! ಕಾರ್ಯಾಚರಣೆಯ ಅಖಾಡದಲ್ಲಿ ಕಮಲ ಸೇನೆ

IMG-20211114-WA0121

ಚೆನ್ನೈ: ಬಂಗಾಳಕೊಳ್ಳಿಯಲ್ಲಿ ಎದ್ದ ಚಂಡಮಾರುತ, ನಿರಂತರ ಬಿರುಗಾಳಿ ಮಳೆಯ ಹೊಡೆತದಿಂದಾಗಿ ದ್ರಾವಿಡರ ನೆಲ ತಮಿಳುನಾಡು ಅಕ್ಷರಶಹ ನಲುಗಿದೆ. ರಸ್ತೆಗಳು ನದಿಗಳಂತಾಗಿ, ಪ್ರವಾಹದ ನಡುವೆ ಜನರ ಬದುಕು ದುಸ್ತರವಾಗಿದೆ. ಹಲವು ಕುಟುಂಬಗಳು ನಿರಾಶ್ರಿತವಾಗಿವೆ. ಮಗೆಗಳು ಹಾನಿಗೊಳಗಾದರೆ, ಸಾಮಾನು ಸರಂಜಾಮುಗಳು ಹಾಳಾಗಿವೆ. ಈ ಬಾರಿಯ ಮಳೆ ಅವಾಂತರಗಳಿಂದಾಗಿ ಆಗಿರುವ ಕಷ್ಟ-ನಷ್ಟಗಳನ್ನು ಅಂದಾಜಿಸುವುದೂ ಕಷ್ಟ ಸಾಧ್ಯವೆಂಬಂತಿದೆ.

ಚೆನ್ನೈ ಸಹಿತ ತಮಿಳುನಾಡಿನ ಅನೇಕ ನಗರಗಳ ರಸ್ತೆಗಳಲ್ಲಿ ಪ್ರವಾಹದ ನೀರು ನಿಂತಿದ್ದ ಸನ್ನಿವೇಶವು ಕರಾಳ ಕಥೆಯನ್ನೇ ಸರುವಂತಿದೆ. ಇಂತಹಾ ಪರಿಸ್ಥಿತಿಯಲ್ಲಿ ಅನ್ನ-ಆಹಾರಕ್ಕಾಗಿ ಸಿರಿವಂತರೂ ಪರದಾಡುವ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆನೀರಿನಿಂದಾದ ಉಂಟಾದ ಪರಿಸ್ಥಿತಿ ಬಗ್ಗೆ ಜನರು ಕಣ್ಣೀರಿಡುತ್ತಿದ್ದ ಸುದ್ದಿ ತಿಳಿದ ಕೂಡಲೇ ತಮಿಳುನಾಡಿಗೆ ಧಾವಿಸಿದ ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಸಿ.ಟಿ.ರವಿ ಪರಿಹಾರ ಕಾರ್ಯ ಕೈಗೆತ್ತಿಕೊಂಡರು.
ಕಳೆದೆರಡು ದಿನಗಳಿಂದ ತಮಿಳುನಾಡಿನಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಟೀಂ ಜೊತೆ ಸಂತ್ರಸ್ತರ ಕೇರಿಗಳಲ್ಲಿ ಸವಾರಿ ಕೈಗೊಂಡಿದ್ದಾರೆ.

ಅನ್ನ-ಆಹಾರಕ್ಕಾಗಿ ಜನ ಪರಿತಪಿಸಿಕೊಳ್ಳುತ್ತಿರುವುದನ್ನು ಕಂಡ ಈ ನಾಯಕರು ಕ್ಷಿಪ್ರ ಕ್ರಮ ಕೈಗೊಂಡು ಲೋಡ್ ಗಟ್ಟಲೆ ಆಹಾರ ಸಾಮಾಗ್ರಿಗಳನ್ನು ತರಿಸಿ ಹಂಚಿದ್ದಾರೆ.
ಅಧಿಕಾರಿಗಳೇ ಮಾಹಿತಿ ನೀಡಿರುವ ಪ್ರಕಾರ ಸಿ.ಟಿ.ರವಿ ಮತ್ತು ಬಿಜೆಪಿ ಕಾರ್ಯಕರ್ತರು 50 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿದ್ದಾರೆ.
ಭಾರೀ ಮಳೆಯಿಂದ ಸಂತ್ರಸ್ತವಾಗಿರುವ ಚೆಂಗಲ್ಪಟ್ಟು ಜಿಲ್ಲೆಯ ಸೆಂಬಾಕ್ಕಂ ಮಂಡಲದ ಸಲಯ್ಯೂರ್ ಪ್ರದೇಶದ ಜನರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಅದೇ ಪ್ರದೇಶಕ್ಕೆ ಧಾವಿಸಿದ ಬಿಜೆಪಿ ಕಾರ್ಯಕರ್ತರು ಅಸಹಾಯಕ ಜನರ ಪಾಲಿಗೆ ಸಂಜೀವಿನಿಯಂತಾದರು.

ಆಡಳಿತಾರೂಢ ಸರ್ಕಾರದ ಪ್ರತಿನಿಧಿಗಳಾಗಲೀ, ಸ್ಥಳೀಯ ಜನಪ್ರತಿನಿಧಿಗಳಾಗಲೀ ತಮ್ಮ ಗೋಳನ್ನು ಕೇಳಲಿಲ್ಲ. ಆದರೆ, ಈ ಹುಡುಗರು ತಮಗೆ ಊಟ-ತಿಂಡಿ ನೀಡಿದರು ಎನ್ನು್ತ ಇಳಿವಯಸ್ಸಿನ ಮಂದಿ ನಿಟ್ಟುಸಿರು ಬಿಟ್ಟ ಕ್ಷಣ ಪರಿಸ್ಥಿತಿಗೆ ಹಿಡಿದ ಕನ್ಬಡಿಯಂತಿತ್ತು.
ಚೆನ್ನೈ ಸುತ್ತಮುತ್ತಲ ಪ್ರದೇಶಗಳ ಅನೇಕ ಬಡಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿ ಮಾರ್ಗದರ್ಶನದಲ್ಲಿ ರಕ್ಷಣಾ ಕಾರ್ಯ ಕೈಗೊಂಡರು. ಅಗತ್ಯ ನೆರವನ್ನೂ ನೀಡಿದರು.

ಚೆನ್ನೈನ ಹಾರ್ಬರ್ ಕ್ಷೇತ್ರದಲ್ಲೂ ಇಂತಹುದೇ ಪರಿಸ್ಥಿತಿ. ಸೂರ್ಯೋದಯದ ನಾಡು ಎಂದೇ ಗುರುತಾಗಿರುವ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ‘ರವಿ’ ಸಾರಥ್ಯದ ಕಮಲ ಕಾರ್ಯಕರ್ತರು ಇಂದೂ ಕೂಡಾ ಈ ಕಾರ್ಯಚರಣೆ ಮುಂದುವರಿಸಿದ್ದಾರೆ. ಸಂಘಟನಾತ್ಮಕ ಸಭೆಯ ನಡುವೆ ಸೇವಾ ಕಾರ್ಯಚರಣೆ ನಡೆಸುತ್ತಾ ಈ ಸೇನಾನಿಗಳು ದೇಶದ ಗಮನ ಕೇಂದ್ರೀಕರಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!