ದತ್ತಮಾಲೆಯಿಂದ ಹೊಟ್ಟೆ ತುಂಬಲ್ಲ: ಶಾಸಕ ರಾಜೇಗೌಡ

ಬೆಂಗಳೂರು: ಶೃಂಗೇರಿಯ ಕಾಂಗ್ರೆಸ್ ಶಾಸಕ ರಾಜೇಗೌಡ ಮತ್ತೊಮ್ಮೆ ಹಿಂದೂ ಸಂಘಟನೆಗಳನ್ನು ಕೆಣಕಿದ್ದಾರೆ.
ದತ್ತಮಾಲೆ ಹಾಕಿಸುವವರು ಮನೆಹಾಳರು ಎಂದು ಹಿಂದೂ ಸಂಘಟನೆಗಳನ್ನು ಟೀಕಿಸಿರುವ ರಾಜೇಗೌಡ ಅವರ ಆಡಿಯೋ ಇದೀಗ ವೈರಲ್ ಆಗಿದೆ.
ಅಯೋಧ್ಯೆ ಹೋರಾಟದಲ್ಲಿ ಲಕ್ಷಾಂತರ ಜನರನ್ನು ಬಲಿ ಕೊಡಲಾಗಿದೆ. ಕೇಸರಿ ಶಾಲು, ಕುಂಕುಮ ಹಾಕಿಕೊಂಡು ದತ್ತಮಾಲೆ ಹಾಕಿದರೆ ಹೊಟ್ಟೆ ತುಂಬುವುದಿಲ್ಲ ಎಂದೂ ಅವರು ಹೇಳಿರುವುದು ಆಡಿಯೋದಲ್ಲಿದೆ.