ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ದವನ್ ಕಾಲೇಜಿಗೆ ಅತ್ಯಧಿಕ 8 ರ‍್ಯಾಂಕ್‌ಗಳು
ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ 2020-21ನೇ ಸಾಲಿನ ಪದವಿಒ ಪರೀಕ್ಷೆಯಲ್ಲಿ ದಾವಣಗೆರೆ ನಗರದ ದವನ್ ಕಾಲೇಜಿಗೆ ಶೇ.95ರಷ್ಟು ಫಲಿತಾಂಶದೊಂದಿಗೆ ಬಿ.ಕಾಂ, ಬಿ.ಬಿ.ಎಂ. ಬಿಸಿಎ ಪದವಿಯಲ್ಲಿ 8 ಗಳನ್ನು ಪಡೆದಿದ್ದು, ಇದು ಜಿಲ್ಲೆಯಲ್ಲಿಯೇ ಅತ್ಯಧಿಕ ರ‍್ಯಾಂಕ್‌ಗಳನ್ನು ಪಡೆದ ಕಾಲೇಜು ಎಂಬ ಹೆಗ್ಗಳಿಕೆಗೆ ದವನ್ ಪಾತ್ರವಾಗಿದೆ.
ಬಿ.ಬಿ.ಎಂ. ಪದವಿಯಲ್ಲಿ ಗುಂಜನ್ ಆರ್.ಜೈನ್ 3ನೇ ರ‍್ಯಾಂಕ್,
ಸಂಜನಾ ಕೆ.ಜೈನ್ 4ನೇ ರ‍್ಯಾಂಕ್, ಅಕ್ಷತಾ ಕೆ 5ನೇ ರ‍್ಯಾಂಕ್, ಕುಂದನ್ ಡಿ.ಜೈನ್ 8ನೇ ರ್ಯಾಂಕ್, ದರ್ಶಿತಾ ಎಸ್.ಜೈನ್ 10ನೇ ರ‍್ಯಾಂಕ್, ಮತ್ತು ಬಿ.ಸಿ.ಎ ಪದವಿಯಲ್ಲಿ ವಿನಯ್ ಎಸ್.ಎಂ 4ನೇ ರ‍್ಯಾಂಕ್, ಕಾವ್ಯ ಬಿ.ಎಸ್. 10ನೇ ರ‍್ಯಾಂಕ್ ಹಾಗೂ ಬಿ.ಕಾಂ. ಪದವಿಯಲ್ಲಿ ರಶ್ಮಿ ಡಿ.ಎಸ್. 4ನೇ ರ‍್ಯಾಂಕ್ ಪಡೆದಿರುತ್ತಾರೆ.
ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿ – ವಿದ್ಯಾರ್ಥಿನಿಯರನ್ನು ಸಂಸ್ಥೆಯ ಕಾರ್ಯದರ್ಶಿ ವಿರೇಶ್ ಪಟೇಲ್, ಜಂಟಿ ಕಾರ್ಯದರ್ಶಿ ಡಾ|| ಅಂಜು ಜಿ.ಎಸ್., ನಿರ್ದೇಶಕರಾದ ಹರ್ಷರಾಜ್ ಎ.ಗುಜ್ಜರ್, ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾತಿ ಬಸವರಾಜ್, ಆಡಳಿತ ಮಂಡಳಿಯ ಸದಸ್ಯರು ಹಾಗೂ ಉಪ ಪ್ರಾಚಾರ್ಯರಾದ ಶ್ರೀಮತಿ ಅನಿತಾ ಎನ್ ಮತ್ತು ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.