Davanagere: ದಾವಣಗೆರೆಯಲ್ಲಿ ಅಪ್ರಾಪ್ತ ಬಾಲಕನಿಂದ ವಾಹನ ಚಾಲನೆ, ವಾಹನ ಮಾಲೀಕರಿಗೆ 25,000 ರೂಪಾಯಿ ದಂಡ

ದಾವಣಗೆರೆ: (Davanagere) ದಾವಣಗೆರೆ ನಗರದಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದನ್ನು ತಡೆಯಲು ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್ ರವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ್ ರವರು & ಶ್ರೀ ಮಂಜುನಾಥ ರವರು ಹಾಗೂ ನಗರದ ಡಿವೈಎಸ್ಪಿ ಶ್ರೀ ಶರಣಬಸವೇಶ್ವರ ಬೀಮರಾವ್ ರವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು.
ದಿನಾಂಕ 17-02-2025 ರಂದು ಮದ್ಯಾಹ್ನಾ ಸಮಯದಲ್ಲಿ ದಾವಣಗೆರೆ ಟ್ರಾಫಿಕ್ ಪೊಲೀಸ್ ಸಿಪಿಐ ರವರಾದ ಶ್ರೀ ನಲವಾಗಲು ಮಂಜುನಾಥ್ ರವರ ನೇತೃತ್ವದಲ್ಲಿ ಉತ್ತರ ಸಂಚಾರ ಠಾಣೆ ಪಿಎಸ್ಐ ಶ್ರೀಮತಿ ಜಯಶೀಲ ಹಾಗೂ ಸಿಬ್ಬಂದಿಯಾದ ರಂಗಸ್ವಾಮಿ ರವರೊಂದಿಗೆ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದು. ಆ ಸಮಯದಲ್ಲಿ ನಗರದ ಗಡಿಯಾರ ಕಂಬದ ಬಳಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವ ಸಮಯದಲ್ಲಿ ಆಕ್ಟಿವ್ ಹೊಂಡ ಬೈಕ್ ಸವಾರನು ಅಪ್ರಾಪ್ತ ವಯಸ್ಸಿನವನು ಎಂದು ತಿಳಿದು ಬಂದಿದ್ದು, ಸದರಿ ಬಾಲಕನಿಗೆ ಸಾರ್ವಜನಿಕ ರಸ್ತೆ ಮೇಲೆ ಚಲಾಯಿಸಲು ಬೈಕ್ ನೀಡಿದ್ದರ ಬಗ್ಗೆ ಸದರಿ Active honda ಬೈಕ್ ಅನ್ನು ಜಪ್ತು ಪಡಿಸಿಕೊಂಡು ದಾವಣಗೆರೆ ದಕ್ಷಿಣ ಸಂಚಾರ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಮಾನ್ಯ PCJ & JMFC ದಾವಣಗೆರೆ ನ್ಯಾಯಾಲಯಕ್ಕೆ Active honda ಬೈಕ್ ಮಾಲೀಕರಾದ ಶ್ರಿಮತಿ ಮಮತ, ದಾವಣಗೆರೆ ರವರ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಿದ್ದು, ಅದಕ್ಕೆ ಮಾನ್ಯ ನ್ಯಾಯಾಲಯವು ದಿನಾಂಕ 17-02-2025 ರಂದು ಆರೋಪಿತರಾದ ಬೈಕ್ ಮಾಲೀಕರು ತಮ್ಮ ಆಕ್ಟಿವ್ ಹೊಂಡ ಬೈಕ್ ಅನ್ನು ಅಪ್ರಾಪ್ತ ವಯಸ್ಕನಿಗೆ ಚಾಲನೆ ಮಾಡಲು ಕೊಟ್ಟಿದ್ದಕ್ಕೆ ಬೈಕ್ ಮಾಲೀಕರಿಗೆ 25,000/- ರೂಗಳ ದಂಡವನ್ನು ವಿಧಿಸಿರುತ್ತದೆ.
ಆದ್ದರಿಂದ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ಚಾಲನೆ ಮಾಡಲು ಕೊಡುವ ಪಾಲಕರಿಗೆ / ವಾಹನ ಮಾಲೀಕರಿಗೆ ದಾವಣಗೆರೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿ ಅರಿವು ಮೂಡಿಸಿದ್ದಾರೆ, ಇದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಅಧೀಕ್ಷಕರವರು ರವರು ತಿಳಿಸಿರುತ್ತಾರೆ.