ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ! ಸರ್ಕಾರಿ ನೌಕರರ ತುರ್ತು ಸೇವೆಗೆ ರಜೆ ಅನ್ವಯಿಸುವುದಿಲ್ಲ
ದಾವಣಗೆರೆ : ಮಹಾನಗರ ಪಾಲಿಕೆ ಮತ್ತು ಪುರಸಭೆ ಚುನಾವಣೆ ನಿಮಿತ್ತ ಆಯಾ ವ್ಯಾಪ್ತಿಯ ಮತದಾನ ನಡೆಯುವ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳು, ರಾಷ್ಟಿಕೃತ ಹಾಗೂ ಇತರೆ ಬ್ಯಾಂಕುಗಳು, ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆ, ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ, ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ Establishment ಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ಸೀಮಿತವಾದಂತೆ ರಾಜ್ಯ ಸರ್ಕಾರ ವೇತನ ಸಹಿತ ರಜೆಯನ್ನು ಘೋಷಿಸಿ ಆದೇಶ ಹೊರಡಿಸಿದೆ.
ಆದರೆ ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಲ್ಲಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಇಲಾಖೆಯ ಮುಖ್ಯಸ್ಥರು ವ್ಯವಸ್ಥೆ ಮಾಡತಕ್ಕದ್ದು, ಈ ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರು ಚುನಾವಣಾ ಕಾರ್ಯಕ್ಕೆ ಹಾಜರಾಗತಕ್ಕದ್ದು.
ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್ ನಂ.28 ಮತ್ತು 37ರ ಉಪ ಚುನಾವಣೆ, ಚನ್ನಗಿರಿ ಪುರಸಭೆ ವಾರ್ಡ್ ನಂ.16ರ ಉಪಚುನಾವಣೆ ಹಾಗೂ ವಿವಿಧ ಕಾರಣಗಳಿಂದ ದಾವಣಗೆರೆ ತಾಲ್ಲೂಕಿನ 04- ಕಾಡಜ್ಜಿ ಗ್ರಾಮ ಪಂಚಾಯತಿಯ 2-ಕಾಡಜ್ಜಿ – 2 ಕ್ಷೇತ್ರ, 41-ಕುಕ್ಕವಾಡ ಗ್ರಾಮ ಪಂಚಾಯತಿಯ 3 ಕ್ಷೇತ್ರ, ಚನ್ನಗಿರಿ ತಾಲೂಕಿನ ಹೊಸಕೆರೆ (ಬಸವಾಪಟ್ಟಣ) ಗ್ರಾಮ ಪಂಚಾಯ್ತಿಯ 1 ಕ್ಷೇತ್ರಗಳ ಉಪ ಚುನಾವಣೆ ಸಂಬ0ಧ ರಜೆ ಘೋಷಿಸಲಾಗಿತ್ತು.
ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್ ನಂಬರ್ 28 ಮತ್ತು 37 ಎಂದು ಆಗಬೇಕಾಗಿತ್ತು. ಅದರ ಬದಲಿಗೆ 27 ಮತ್ತು 38 ಎಂದು ತಪ್ಪಾಗಿದ್ದು ಇದನ್ನು ಸರಿಪಡಿಸಬೇಕಿದೆ.
garudavoice21@gmail.com 9740365719