Congress: ತುಮಕೂರಿನಲ್ಲಿ ದಾವಣಗೆರೆ ಕೈ ನಾಯಕರ ಸಭೆ*

ದಾವಣಗೆರೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜಿವಾಲ್ ಅವರು ತುಮಕೂರು ನಗರದಲ್ಲಿ ಐದು ಜಿಲ್ಲೆಗಳ ವಿಭಾಗಿಯ ಮಟ್ಟದ ಕಾಂಗ್ರೆಸ್ ನಾಯಕರುಗಳ ಸಭೆಯನ್ನು ಕರೆದಿದ್ದರು.
ಪ್ರತ್ಯೇಕವಾಗಿ ಸಮಯ ನಿಗದಿ ಮಾಡಿ ಒಂದೊಂದು ಜಿಲ್ಲೆಯ ಸಭೆಯನ್ನು ನಡೆಸಿದ ಅವರು , ಆಯಾಯ ಜಿಲ್ಲೆಗಳ ಪಕ್ಷ ಸಂಘಟನೆ , ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ ಅವರ ಮಾರ್ಗದರ್ಶನದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅದ್ಯಕ್ಷರಾದ ಹೆಚ್.ಬಿ.ಮಂಜಪ್ಪ , ಜಿಲ್ಲೆಯ ಹರಿಹರ ಶಾಸಕರಾದ ಎಸ್.ರಾಮಪ್ಪ , ಮಾಜಿ ಶಾಸಕರುಗಳಾದ ವಡ್ನಾಳ ರಾಜಣ್ಣ , ಹೊನ್ನಾಳಿ ಶಾಂತನಗೌಡ್ರು , ಮಾಯಕೊಂಡ ಕ್ಷೇತ್ರದ ಅಭ್ಯರ್ಥಿಯಾಗಿದಂತ ಕೆ.ಎಸ್.ಬಸವಂತಪ್ಪ ನವರನೊಳಗೊಂಡಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಎಲ್ಲಾ ಮುಂಚೂಣಿ ಘಟಕ, ವಿಭಾಗ , ಸೆಲ್ ಗಳ ಅದ್ಯಕ್ಷರುಗಳು ಸಭೆಯಲ್ಲಿ ಭಾಗವಹಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಗೋವಿಂದ್ ಹಾಲೇಕಲ್ಲ್ ಅವರು ತಿಳಿಸಿದ್ದಾರೆ.