ಬೀದಿ ನಾಯಿಗಳ ಹಾವಳಿ ಕಡಿವಾಣಕ್ಕೆ ನಿಂತ ದಾವಣಗೆರೆ ಪಾಲಿಕೆ
ದಾವಣಗೆರೆ: ನಗರದಲ್ಲಿ ವಿಪರೀತವಾದ ಬೀದಿನಾಯಿಗಳ ಹಾವಳಿ ಕಡಿವಾಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ.
ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ವಿವಿದೆಡೆ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನಡೆಯುತ್ತಿದೆ.
ಇದಕ್ಕಾಗಿ ಮಹಾನಗರ ಪಾಲಿಕೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೂ ದಿನೇ ದಿನೇ ನಾಯಿಗಳ ಉಪಟಳ ಹೆಚ್ಚುತ್ತಲೇ ಇದೆ.
ರಾತ್ರಿಯಂತೂ ಬೀದಿನಾಯಿಗಳ ಹಾವಳಿ ಇಂದಾಗಿ ಜನರು ಭಯ ಭೀತರಾಗಿದ್ದಾರೆ. ವಾಹನ ಸವಾರರು ರಾತ್ರಿಸಂಚಾರಕ್ಕೆ ಭಯ ಪಡುತ್ತಿದ್ದಾರೆ. ಮಕ್ಕಳು, ವಯಸ್ಕರು ಮನೆಯಿಂದ ಹೊರಬಾರದ ಪರಿಸ್ಥಿತಿನಿರ್ಮಾಣವಾಗಿದೆ..
ಕೇವಲ ನಾಮಕಾ ವಸ್ಥೆಗೆ ಪಾಲಿಕೆ ಸಂತಾನ ಹರಣ ಚಿಕಿತ್ಸೆ ನಡೆಸದೆ. ಕಠಿಣ ಕ್ರಮ ತೆಗೆದುಕೊಂಡು ಬೀದಿನಾಯಿ ಹಾವಳಿಗೆ ಕಡಿವಾಣ ಹಾಕಲಿ ಎಂಬುದು ಜನತೆಯ ಆಶಯವಾಗಿದೆ.