ದಾವಣಗೆರೆ ಜಿಲ್ಲಾಸ್ಪತ್ರೆ ಕ್ಯಾಂಟೀನ್ ಟೆಂಡರ್ ಕರೆಯುವಲ್ಲಿಅಕ್ರಮ – ಸೂರ್ಯಪ್ರಕಾಶ್ ಆರೋಪ
ದಾವಣಗೆರೆ: ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಆಡಳಿತ ವಿಭಾಗದ ಸಿಬ್ಬಂದಿಗಳು ಸುಮಾರು 10-15 ವರ್ಷಗಳಿಂದಲೂ ಕೆಲವೇ ಕೆಲವು ವ್ಯಕ್ತಿಗಳಿಗೆ ಕ್ಯಾಂಟೀನ್ ನಡೆಸಲು ಟೆಂಡರ್ ನೀಡಿದ್ದಾರೆ ಎಂದು ಕದಂಬ ಕೇಸರಿ ಪತ್ರಿಕೆ ಸಂಪಾದಕ ಆರ್. ಸೂರ್ಯ ಪ್ರಕಾಶ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಳರೋಗಿಗಳಿಗೆ ಹಾಗೂ ಹೊರ ರೋಗಿಗಳಿಗೆ ಮತ್ತು ಆಸ್ಪತ್ರೆಯ ಸಿಬ್ಬಂಧಿಗಳಿಗೆ ಅನುಕೂಲವಾಗುವ ಉದ್ದೇಶಕ್ಕಾಗಿ ಕ್ಯಾಂಟೀನ್ ಗಳನ್ನು ತೆರೆಯಬೇಕೆಂಬ ನಿಯಮಾವಳಿಗಳಿದ್ದು, ಅದಕ್ಕೆ ಸರ್ಕಾರಿ ಆದೇಶಗಳಂತೆ ಕೆಲವೊಂದು ಮಾನದಂಡಗಳಿದೆ., ಅಂಗವಿಕಲರಿಗೆ, ವಿಧವೆಯವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮತ್ತು ಸಹಕಾರಿ ಸಂಘಗಳ ಮಾಲೀಕರಿಗೆ ವರ್ಷಕ್ಕೊಮ್ಮೆ ಟೆಂಡರ್ ಪ್ರಕಟಣೆ ಹೊರಡಿಸಿ ಸರ್ಕಾರದ ಸುತ್ತೋಲೆಯಂತೆ ಪ್ರಕ್ರಿಯೆ ನಡೆಸಬೇಕಿದೆ. ಆದರೆ ಅಧಿಕಾರಿಗಳು ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಇದ್ದಂತಹ ಸಹಾಯಕ ಆಡಳಿತಾಧಿಕಾರಿಗಳ ಸಲಹೆಯ ಮೇರೆಗೆ ಸುಖಾ-ಸುಮ್ಮನೆ ಜಿಲ್ಲಾಸತ್ರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ದಾವೆಯ ಮುಖ್ಯ ವಿವರಗಳಾಗಲಿ, ಕಾರಣಗಳಾಗಲಿ ನೀಡದೆ ಅಡಳಿತಾಧಿಕಾರಿಗಳು ಇವರಿಗೆ ಕ್ಯಾಂಟೀನ್ ನಡೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಟೆಂಡರಿನ ಕಾರ್ಯಾದೇಶವು ಮುಗಿದಿದ್ದರೂ ಯಾವುದೇ ರೀತಿಯ ಹೊಸದಾಗಿ ಟೆಂಡರ್ ನಡೆಸಿಲ್ಲ.
ಜಿಲ್ಲೆಯ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಇವರುಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಮತ್ತು ಭ್ರಷ್ಟತೆಯಲ್ಲಿ ಪಾಲ್ಗೊಂಡಿರುವ ಆಡಳಿತಾಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
.ನಮ್ಮ ದೂರನ್ನು ಪರಿಗಣಿಸದೆ ಇದ್ದಲ್ಲಿ ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿ ತನಿಖೆಗೆ ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ. ರಾಘವೇಂದ್ರ, ಎನ್.ಸಂತೋಷ್, ಪ್ರಕಾಶ್ ಉಪಸ್ಥಿತರಿದ್ದರು.