davanagere; ಕಳಪೆ ಕಾಮಗಾರಿಗೆ ಮತ್ತೊಂದು ನಿದರ್ಶನ ದಾವಣಗೆರೆ ಹೊಂಡದ ಸರ್ಕಲ್ ಕಲ್ಯಾಣಿ!

ದಾವಣಗೆರೆ, ಅ.02: ಸ್ಮಾರ್ಟ್ ಸಿಟಿ (smart city) ಲಿಮಿಟೆಡ್ ನಿಂದ ಎರಡು ಕೋಟಿ ರೂ.ಗಳ ಅನುದಾನದಲ್ಲಿ ನಿರ್ಮಾಣಗೊಂಡ ದಾವಣಗೆರೆ (davanagere) ಹೊಂಡದ ಸರ್ಕಲ್ ಕಲ್ಯಾಣಿ ಉದ್ಘಾಟನೆಗೊಂಡು ಒಂದು ವರ್ಷ ಕಳೆದರೂ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಿಲ್ಲ. ಇದು ಕಳಪೆ ಕಾಮಗಾರಿಯಾಗಿದ್ದು, ಇದನ್ನು ಸರಿಪಡಿಸಿ ಸಂಬಂಧಿಸಿದ ಟೆಂಡರ್ ದಾರರ ಮೇಲೆ ಹಾಗೂ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಹೊಂಡದ ಸರ್ಕಲ್ ಕಲ್ಯಾಣಿಯನ್ನು ಸಾರ್ವಜನಿಕ ವೀಕ್ಷಣೆಗೆ ಸಮರ್ಪಿಸಬೇಕಾಗಿ ಇಂದು ಪರಿಸರ ಪ್ರೇಮಿಗಳು ವಿನೂತನವಾಗಿ ಸ್ವಚ್ಛತೆ ಪ್ರತಿಭಟನೆಯೊಂದಿಗೆ ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆ ವಿರುದ್ಧ ಎಚ್ಚರಿಕೆ ನೀಡಿದರು.

ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರೀಜಿರವರ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್ ದೇವರಮನೆ, ಭಾರತ ದೇಶವನ್ನು ಸ್ವಚ್ಛವಾಗಿಡಬೇಕೆಂಬುದು ಗಾಂಧೀಜಿಯವರ ಕನಸಾಗಿತ್ತು. ಸ್ವಚ್ಛತೆ ಎಂದರೆ ಕೇವಲ ಕಸಮುಕ್ತ ದೇಶ ಮಾಡುವುದಲ್ಲ. ಭ್ರಷ್ಟಾಚಾರ ಮುಕ್ತ ದೇಶವನ್ನು ಮಾಡುವ ಆಸೆಯು ಅವರಿಗಿತ್ತು. ಆದರೆ ನಮ್ಮ ದೇಶದಲ್ಲಿ ಭ್ರಷ್ಟಾಚಾರ ಮುಕ್ತವಾಗುವ ಲಕ್ಷಣವೇ ಕಾಣುತ್ತಿಲ್ಲ. ದಾವಣಗೆರೆ ನಗರಕ್ಕೆ ಸಂಬಂಧಿಸಿದಂತೆ ಸ್ಮಾರ್ಟ್ ಸಿಟಿ ರೂವಾರಿಗಳು ನಾವು ಎಂದು ಹೇಳುವ ಜನಪ್ರತಿನಿಧಿಗಳು ಕಳಪೆ ಕಾಮಗಾರಿಗಳ ರೂವಾರಿಗಳು ಯಾರೆಂಬುದು ಸ್ಪಷ್ಟಪಡಿಸಬೇಕಾಗಿದೆ ಎಂದು ಹೇಳಿದರು.

loksabha; 1.5 ಲಕ್ಷ ಅಂತರದಲ್ಲಿ ಗೆಲ್ಲುವೆ: ಆಕಾಂಕ್ಷಿ ವಿನಯ್ ಕುಮಾರ್ ವಿಶ್ವಾಸ

ದಾವಣಗೆರೆ ನಗರದಲ್ಲಿ ಸ್ಮಾರ್ಟ್ ಸಿಟಿಯ ಹಲವಾರು ಯೋಜನೆಗಳು ಸಾರ್ವಜನಿಕರಿಗೆ ಉಪಯೋಗಕ್ಕೆ ಬರುತ್ತಿಲ್ಲ. ಕೆಲ ಯೋಜನೆಗಳು ಕಳಪೆಯಾಗಿದ್ದು ಇದಕ್ಕೆ ನೈಜ ಉದಾಹರಣೆ ಹೊಂಡದ ಸರ್ಕಲ್ ಕಲ್ಯಾಣಿ. ಕಾಮಗಾರಿ ತೆಗೆದುಕೊಂಡು ಟೆಂಡರ್ ದಾರರಿಗೆ ಹಣ ಪಾವತಿಸಿ ಒಂದು ವರ್ಷ ಕಳೆದು ಹೋಗಿದೆ. ತರಾತುರಿಯಲ್ಲಿ ಉದ್ಘಾಟನೆಯನ್ನು ಮಾಡಿದ್ದಾರೆ. ಕೋಟ್ಯಾಂತರ ರೂಪಾಯಿಗಳು ಅನುದಾನದ ಕಾಮಗಾರಿ ಕಳಪೆಯಿಂದ ಕೂಡಿದ್ದು, ನವೀಕರಣಗೊಂಡಿರುವ ಕಲ್ಯಾಣಿ ಇನ್ನೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿಲ್ಲ. ಇದರ ಬಗ್ಗೆ ಸಚಿವರು ತಕ್ಷಣ ಕ್ರಮ ಕೈಗೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ, ಸಾರ್ವಜನಿಕ ವೀಕ್ಷಣೆಗೆ ನೀಡಬೇಕಾಗಿದೆ ಎಂದರು.

ಕರುನಾಡ ಕನ್ನಡ ಸೇನೆ ಅಧ್ಯಕ್ಷರಾದ ಕ. ಟಿ. ಗೋಪಾಲ ಗೌಡ್ ರವರು ಮಾತನಾಡಿ, ದಾವಣಗೆರೆ ನಗರದಲ್ಲಿ ಪ್ರೇಕ್ಷಣೀಯ ಸ್ಥಳಗಳಿಲ್ಲವೆಂಬ ಕೊರಗಿನಿಂದ ಜನ ಬೇಸತ್ತಿದ್ದಾರೆ. ಕೋಟ್ಯಾಂತರ ವೆಚ್ಚದಲ್ಲಿ ಉತ್ತಮವಾಗಿ ಕಲ್ಯಾಣಿಯನ್ನು ನಿರ್ಮಿಸಿದ್ದು. ಈಗ ನಿರ್ವಹಣೆ ಇಲ್ಲದೆ ಸಾರ್ವಜನಿಕರ ವೀಕ್ಷಣೆಗೂ ಅರ್ಪಿಸದೆ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆ. ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆಯ ಒಳ ಜಗಳಗಳಿಂದ ಕಲ್ಯಾಣಿಯು ಕಸದಿಂದ ತುಂಬಿಕೊಂಡು ಪಾಳು ಬೀಳುತ್ತಿದೆ. ಸಾರ್ವಜನಿಕರ ಹಣದಿಂದ ನಿರ್ಮಿಸಿರುವ ಕಲ್ಯಾಣಿಯನ್ನು ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು.

ಹರಿಹರ ಇಓ ರವಿ, ಸಾರಥಿ ಪಿಡಿಓ ಲೋಕಾಯುಕ್ತ ವಶಕ್ಕೆ; ದಾವಣಗೆರೆ ಪಾಲಿಕೆ ಸದಸ್ಯೆ ಮನೆಯಲ್ಲಿ ಲೋಕಾಯುಕ್ತ.!

ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಬೆಳಕೇರಿ ಮಾತನಾಡಿ, ಕಾಮಗಾರಿಗಳಿಗೆ ಅನುದಾನ ಸಿಗುವುದೇ ಕಷ್ಟದ ವಿಷಯ. ಅದರಲ್ಲಿ ಸ್ಮಾರ್ಟ್ ಸಿಟಿಗೆ ನೂರಾರು ಕೋಟಿಗಳ ಹಣವನ್ನು ತಂದು ಹಲವಾರು ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಆದರೆ ಇದರಲ್ಲಿ ಕೆಲವು ಕಾಮಗಾರಿಗಳು ಅಧಿಕಾರಿಗಳ ನಿರ್ಲಕ್ಷತನದಿಂದ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಜನಪ್ರತಿನಿಧಿಗಳು ಕೇವಲ ಅನುದಾನ ತರುವುದಷ್ಟೇ ಅಲ್ಲ ಅನುದಾನಗಳ ಬಳಕೆಯ ಬಗ್ಗೆ ನಿಗಾವಹಿಸಬೇಕಾಗಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳಾದ ರಾಘವೇಂದ್ರ ಶಟ್ರು, ನಾಗರಾಜ್ ಸೊರ್ವೆ, ಪವನ್ ರೇವಣಕರ್, ಮಂಜುನಾಥ್, ರಾಜೇಂದ್ರ ಬಂಗೇರ ಸುನಂದವರ್ಣೇಕರ್, ಉಮಾದೇವಿ, ಮಾರುತಿ, ಅರುಣ್ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!