ಬಡವರ ಅನ್ನಭಾಗ್ಯಕ್ಕೆ ಕಬಂಧ ಬಾಹುವುಳ್ಳ ಗುಂಪಿಂದ ಕನ್ನ: ಕಾಳಸಂತೆಯಲ್ಲಿ ಕೇರಳಕ್ಕೆ ಮಾರಾಟ! ಮೌನಕ್ಕೆ ಶರಣಾಗಿರುವ ಸಂಬಂಧಿಸಿದ ಇಲಾಖೆಗಳು

ಗರುಡವಾಯ್ಸ್ EXCLUSIVE REPORT
ದಾವಣಗೆರೆ: ರಾಜ್ಯದ ಬಡವರು ಹಸಿವಿನಿಂದ ಬಳಲಬಾರದು ಎಂದು ರಾಜ್ಯ ಸರಕಾರ ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ಉಚಿತ ಅಕ್ಕಿ ನೀಡುತ್ತಿದೆ. ಕೊವಿಡ್ ಲಾಕ್‌ಡೌನ್ ಪರಿಹಾರವಾಗಿ ಈಚೆಗೆ ಕೇಂದ್ರ ಸರಕಾರವೂ ಸಹ ರಾಜ್ಯದ ಪಾಲಿನ ಜೊತೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಅಕ್ಕಿ ನೀಡುತ್ತಿದೆ. ಆದರೆ ಈ ಅಕ್ಕಿಯನ್ನು ದಾವಣಗೆರೆ ಜಿಲ್ಲೆಯಲ್ಲಿರುವ ವ್ಯವಸ್ಥೆಯ ಕಬಂಧ ಬಾಹುವುಳ್ಳ ಗುಂಪೊಂದು ಸಂಬಂಧಿಸಿದವರ ಜೊತೆ ಸೇರಿಕೊಂಡು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿರುವ ಪ್ರಕರಣ ಎಗ್ಗಿಲ್ಲದೆ ನಡೆಯುತ್ತಿದ್ದರೂ ಜಾಣ ಕುರುಡರಂತೆ ಸುಮ್ಮನಿದ್ದಾರೆ. ರಾಜ್ಯದಲ್ಲಿ ಬಡವರಿಗೆ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ನೀಡುತ್ತಿರುವ ಅಕ್ಕಿಯನ್ನು ಫಲಾನುಭವಿಗಳಿಂದ ಕಡಿಮೆ ಬೆಲೆಗೆ ಖರೀದಿಸಿ ಹೊರ ರಾಜ್ಯಕ್ಕೆ ಸಾಗಿಸುವ ದಂದೆ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಬಡವರ ಹೊಟ್ಟೆ ತುಂಬಿಸಬೇಕಿದ್ದ ಅನ್ನ ಭಾಗ್ಯದ ಅಕ್ಕಿ ವ್ಯವಸ್ಥಿತವಾಗಿ ದುರ್ಮಾರ್ಗದ ಮೂಲಕ ಸ್ಥಿತಿವಂತರ ಕೈ ಸೇರುತ್ತಿದೆ.
ಪ್ರತಿ ತಿಂಗಳು ಬಡವರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯ ಹಲವಡೆ ಈ ಅಕ್ಕಿಯನ್ನು ಫಲಾನುಭವಿಗಳ
ಮನೆ ಬಾಗಿಲಿನಿಂದಲೇ ನೇರವಾಗಿ ಖರೀದಿಸಲು ಕೆಲವೊಂದು ತಂಡಗಳು ಸಕ್ರಿಯವಾಗಿದ್ದು, ಪ್ರತಿ ತಿಂಗಳು ಪಡಿತರ ವಿತರಣೆಯಾಗುತ್ತಿದ್ದಂತೆ ಪ್ರತಿ ದಿನ ಈ ತಂಡದವರು ಗಲ್ಲಿಗಲ್ಲಿಗಳಲ್ಲಿ ಸಂಚರಿಸಿ ಅಕ್ಕಿ ಖರೀದಿಸಿ ಲೋಡ್‌ಗಟ್ಟಲೇ ತೆಗೆದುಕೊಂಡು ಹೋಗುತ್ತಿದ್ದಾರೆ. ಬಡವರು, ಕೂಲಿ ಕಾರ್ಮಿಕರು, ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರು ವಾಸ ಮಾಡುವ ಪ್ರದೇಶಗಳು ಈ ದಂಧೆಕೋರರ ಟಾರ್ಗೆಟ್ ಆಗಿದೆ. ಈ ದಂಧೆ ಲಾಕ್ ಡೌನ್ ವೇಳೆಯಲ್ಲಿ ಯಾರ ಮೂಲಾಜಿಲ್ಲದೇ ಬಹಿರಂಗವಾಗಿ ನಡೆಯುತ್ತಿರುವುದು ವಿಪರ್ಯಾಸ. ಯಾರಾದರೂ ಅವಶ್ಯಕ ವಸ್ಥುಗಳನ್ನ ತರಲು ಪೇಟೆಗೆ ಬಂದರೆ ಇನ್ನಿಲ್ಲದಂತೆ ಸರ್ಕಸ್ ಮಾಡಿ ದಂಡ ವಿಧಿಸುವರಿಂದ ತಪ್ಪಿಸಿಕೊಂಡು ಹೋಗಬೇಕು, ಆದ್ರೆ ಈ ಅನ್ನಭಾಗ್ಯ ಅಕ್ಕಿಯನ್ನ ರಾಜಾರೋಚವಾಗಿ ತೆಗೆದುಕೊಂಡು ಹೋಗುತ್ತಿದ್ದರು, ಕಾಳಸಂತೆಯಲ್ಲಿ ಮಾರಾಟ ತಡೆಯುವ ವರ್ಗ ಮೌನಕ್ಕೆ ಶರಣಾಗಿರುವುದು ಯಾವ ಉದ್ದೇಶಕ್ಕೆ ಅಂತಾ ಗೊತ್ತಿಲ್ಲ.
ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ತಂಡೋಪವಾಗಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿವೆ, ಪ್ರಮುಖವಾಗಿ ದಾವಣಗೆರೆ ನಗರದ ಹಳೇ ಭಾಗದಲ್ಲಿ ಹೆಚ್ಚಾಗಿ ಈ ದಂಧೆಕೊರರ ಅಡ್ಡಾಗಳಿವೆ, ಇವರೆಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಅಕ್ಕಿಯನ್ನ ಖರೀದಿ ಮಾಡಿಕೊಂಡು ಬಂದು ವ್ಯವಸ್ಥತವಾದ ಗೊಡೌನ್ ನಲ್ಲಿ ಶೇಖರಣೆ ಮಾಡಿ 50 ಕೆಜಿ ಚೀಲದಲ್ಲಿ ತುಂಬಿಸಿಕೊಳ್ಳುತ್ತಾರೆ, ನಂತರ 16 ರಿಂದ 17 ಟನ್ ಅಕ್ಕಿಯ ಮೂಟೆಗಳನ್ನ ಕ್ಯಾಂಟರ್ ಲಾರಿಗಳಲ್ಲಿ ಲೋಡ್ ಮಾಡಿ ಕಳಿಸುತ್ತಾರೆ. ಈ ವಾಹನಗಳ ಲೆಕ್ಕವನ್ನ ಕೇಳಿದ್ರೆ ಶಾಕ್ ಆಗುತ್ತೆ. ಪ್ರತಿ ನಿತ್ಯ ನೂರಾರು ಟನ್ ಅಕ್ಕಿಲೋಡ್ ಜಿಲ್ಲೆಯಿಂದ ಹೊರ ರಾಜ್ಯಕ್ಕೆ ರವಾನೆಯಾಗುತ್ತೆ.
ನಗರವಾಸಿಗಳು, ಮಧ್ಯಮ ವರ್ಗದವರು ಸಾಧಾರಣವಾಗಿ ಪಡಿತರ ಅಂಗಡಿಯಲ್ಲಿ ಉಚಿತವಾಗಿ ನೀಡಿರುವ ಅಕ್ಕಿಯನ್ನು ಸೇವಿಸಲ್ಲ ಕೆಲವರು ದೋಸೆಗೆ ಹಾಗೂ ಇಡ್ಲಿಗೆ ಬೇಕಾದಷ್ಟು ಅಕ್ಕಿಯನ್ನ ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ. ಅದರಲ್ಲೂ ತೀರಾ ಕಡು ಬಡವರು ತಿಂಗಳ ಬಳಕೆಗಾಗಿ ಉಳಿಸಿಕೊಂಡು ಉಳಿದ ಅಕ್ಕಿಯನ್ನ ಈ ದಂಧೆಕೋರರಿಗೆ ಮಾರಾಟ ಮಾಡ್ತಾರೆ, ಇನ್ನುಳಿದಂತೆ ಹಲವರು ಪಾಲಿಷ್ ಅಕ್ಕಿಯನ್ನು
ಇಷ್ಟಪಡುವ ಕಾರಣ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ದುಬಾರಿ ಬೆಲೆಯ ಅಕ್ಕಿಯನ್ನು ಖರೀದಿಸುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡು ವ್ಯವಹಾರದಲ್ಲಿ ತೊಡಗಿಕೊಂಡಿರುವ ಗುಂಪು ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಸಕ್ರೀಯವಾಗಿದ್ದರೂ ಯಾರೂ ಇವರನ್ನ ಏನೂ ಮಾಡಿಕೊಳ್ಳಲು ಆಗುತ್ತಿಲ್ಲವಂತೆ.
ಒಂದು ಮೂಲದ ಪ್ರಕಾರ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ, ಅವುಗಳನ್ನು ವ್ಯವಸ್ಥಿತವಾಗಿ ಪ್ಯಾಕೆಟ್ ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ. ಗಲ್ಲಿ ಗಲ್ಲಿಗಳಲ್ಲಿ ಅಕ್ಕಿ ಖರೀದಿಗೆ ಬರುವವರು ಕೆಜಿಗೆ
10 ರೂ ದಿಂದ 12 ರೂವರೆಗೆ ಖರೀದಿಸುವ ದಂಧೆಕೋರರು ಸ್ಥಿತಿವಂತ, ಕಬಂಧ ಬಾಹುವುಳ್ಳ ಗುಂಪುನವರಿಗೆ 15- 17 ರೂಪಾಯಿವರೆಗೆ ಮಾರಾಟ ಮಾಡ್ತಾರೆ. ಇವರುಗಳು ಪ್ರತಿ ನಿತ್ಯ ಒಂದರಿಂದ ಎರಡು ಕ್ಯಾಂಟರ್ ಲಾರಿಗಳಲ್ಲಿ ತಮ್ಮ ಅಧಿಕೃತ ಟ್ರೇಡಿಂಗ್ ಕಂಪನಿ ಹೆಸರಿನಲ್ಲಿ ಯಾರಿಗೂ ಅನುಮಾನ ಬರದಂತೆ ಬಿಲ್ ತಯಾರಿಸಿ ಪ್ರಮುಖವಾಗಿ ಕೇರಳ ರಾಜ್ಯಕ್ಕೆ ಕಳುಹಿಸಿ ಅಲ್ಲಿ 25 ರೂಪಾಯಿಂದ 30 ರೂಪಾಯಿಗೆ ಮರು ಮಾರಾಟ ಮಾಡುತ್ತಾರೆ. ಕೆರಳದಲ್ಲಿ ಈ ಅಕ್ಕಿಯನ್ನ ಪಾಲಿಶ್ ಮಾಡಿ 35 ರೂಪಾಯಿಂದ 40 ರೂಪಾಯಿಗೆ ಮಾರುಕಟ್ಟೆಯಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿರುವುದಂತು ಸತ್ಯ.
ಒಟ್ಟಾರೆ ದಾವಣಗೆರೆ ಜಿಲ್ಲೆಯಲ್ಲಿ ಅಕ್ಕಿ ದಂಧೆಕೋರರು ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯಯನ್ನ ಕಾಳಸಂತೆಯಲ್ಲಿ ಮಾರಿಕೊಂಡು ಉತ್ತಮ ರಿತೀಯಲ್ಲಿ ದಂಧೆ ನಡೆಸುತ್ತಿದ್ದಾರೆ. ಇಂತಹ ದಂಧೆಯಲ್ಲಿ ಕೆಲವು
ಭ್ರಷ್ಟ ಅಧಿಕಾರಶಾಹಿಗಳ ಕೈ ಜೋಡಿಸಿರುವುದು ಕಂಡುಬರುತ್ತೆ. ಇದೇಲ್ಲಾ ಸಂಬಂಧಿಸಿದವರ ಗಮನಕ್ಕೆ ಬಂದಿದ್ದರೂ, ವ್ಯವಸ್ಥೆಯಲ್ಲಿ ಪಳಗಿರುವವರ ಮರ್ಮದಾಟಕ್ಕೆ ಏನೂ ಮಾಡೋಕೆ ಆಗೊದಿಲ್ಲವಂತೆ. ಆದರೂ ಮನಸ್ಸು ಮಾಡಿದ್ರೆ ಏನು ಬೇಕಾದರೂ ಮಾಡಬಹುದು ಎಂಬ ಗಾದೆ ನಿಜವಾ ಅಥವಾ ಸುಳ್ಳಾ..? ಇನ್ನಾದರೂ ಈ ದಂಧೆಗೆ ಕಡಿವಾಣ ಬೀಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.