ಮೇ.31 ರಿಂದ ಜೂ.7ರವರೆಗೆ ದಾವಣಗೆರೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ : ಎರಡು ದಿನ ಮಾತ್ರ ಸಾಮಾಗ್ರಿ ಖರೀದಿಸಲು ಅವಕಾಶ 

DC pressmeet davanagere
ದಾವಣಗೆರೆ: ಕೊರೊನಾ ಸರಪಣಿ ತುಂಡರಿಸಲು ಮೇ.31 ಬೆಳಗ್ಗೆ 6 ರಿಂದ ಜೂ.7 ಬೆಳಗ್ಗೆ 6ವರೆಗೆ ಜಿಲ್ಲೆಯನ್ನು ಸಂಪೂರ್ಣ ಲಾಕ್‌ಡೌನ್ ಮಾಡುವುದಾಗಿ ಡಿಸಿ ಮಹಾಂತೇಶ್ ಬೀಳಗಿ ಶನಿವಾರ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರ ಆದೇಶದ ಹಿನ್ನೆಲೆಯಲ್ಲಿ ಈ ಕಠಿಣ ಲಾಕ್‌ಡೌನ್ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಖರೀದಿಗೆ ಸಮಯಾವಕಾಶ :
ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಾಗಬಾರದೆಂದು ಮೇ.31, ಜೂನ್ 3 ಎರಡು ದಿವಸಗಳ ಕಾಲ ಬೆಳಗ್ಗೆ 6 ರಿಂದ 12ರವರೆಗೆ ಅಗತ್ಯವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಕಿರಾಣಿ ಅಂಗಡಿ, ದಿನಸಿ, ಹಣ್ಣುಘಿ, ತರಕಾರಿ, ಮಾಂಸ, ಮೀನು, ಮದ್ಯದಅಂಗಡಿಗಳು ಇರುತ್ತದೆ. ಹೋಟೆಲ್, ರೆಸ್ಟೋರೆಂಟ್, ಉಪಹಾರ ಗೃಹಗಳು ಪಾರ್ಸೆಲ್ ಮಾತ್ರ ಕೊಡಬೇಕು. ಎಂದಿನಂತೆ ಬೆಳಗ್ಗೆ 6 ರಿಂದ 10 ರವರೆಗೆ ಮೊಟ್ಟೆಘಿ, ಹಾಲು ಇರುತ್ತದೆ. ಇ-ಕಾಮರ್ಸ್, ಹೋಮ್ ಡೆಲಿವರಿ ಸೇವೆ ಇರುತ್ತದೆ ಎಂದು ಡಿಸಿ ತಿಳಿಸಿದರು.
ಜೂ.4ರತನಕ ಮಾತ್ರ ಮದುವೆಗೆ ಅವಕಾಶ :
ಹಳೆ ಮಾರ್ಗಸೂಚಿಯಂತೆ ಜೂ.4ರವರೆಗೆ ಯಾರು ಮದುವೆ ಮಾಡಲು ಸ್ಥಳೀಯ ಸಂಸ್ಥೆಗಳಿಂದ ಅವಕಾಶ ಪಡೆದಿರುತ್ತಾರೆಯೋ ಅವರು ಮದುವೆ ಮಾಡಬಹುದು. ಆದರೆ ಮದುವೆಯಲ್ಲಿ 10 ಜನರು ಮಾತ್ರ ಇರಬೇಕು. ಮದುವೆಯಲ್ಲಿ ಊಟದ ವ್ಯವಸ್ಥೆ ನಿಷೇಧ ಮಾಡಲಾಗಿದೆ. ಜೂ.5ರಿಂದ ಜೂ.19ವರೆಗೆ ಜಿಲ್ಲಾದ್ಯಂತ ಮದುವೆ ಹಾಗೂ ಧಾರ್ಮಿಕ ಸಭೆ, ಸಮಾರಂಭ ಇರೋದಿಲ್ಲಘಿ ಎಂದು ಎಂದು ಡಿಸಿ ಸೂಚಿಸಿದರು.
ಹೋಂ ಐಸೋಲೇಷನ್ ಇಲ್ಲ :
ಕೊರೊನಾ ಸೋಂಕು ಸರಪಳಿ ಕಟ್ ಮಾಡಲು ಸಚಿವರು ಹೋಂ ಐಸೋಲೇಷನ್‌ನಲ್ಲಿರುವವರನ್ನು ಕಾಳಜಿ ಕೇಂದ್ರಕ್ಕೆ ಶ್‌ಟಿ ಮಾಡಬೇಕೆಂದು ಸೂಚಿಸಿದ್ದುಘಿ, ಅದರಂತೆ 2891 ಜನ ಸೋಂಕಿತರನ್ನು 23 ಕಾಳಜಿ ಕೇಂದ್ರಕ್ಕೆ ಶ್‌ಟಿ ಮಾಡಲಾಗಿದೆ. ಇನ್ಮುಂದೆ ಮನೆ ಎಷ್ಟೇ ದೊಡ್ಡದು ಇದ್ದರೂ, ಕಾಳಜಿ ಕೇಂದ್ರಕ್ಕೆ ಬರಬೇಕು ಎಂದು ಡಿಸಿ ಮಹಾಂತೇಶ್ ಬೀಳಗಿ ಹೇಳಿದರು.
ಆರೈಕೆ ಆಸ್ಪತ್ರೆಗೆ ನೋಟಿಸ್ :
ಆರೈಕೆ ಆಸ್ಪತ್ರೆಯಲ್ಲಿ 50 ಬೆಡ್‌ಗಳಿದ್ದುಘಿ, ಈವರೆಗೆ 6 ಬೆಡ್‌ಗಳನ್ನು ಮಾತ್ರ ನೀಡಿದ್ದಾರೆ. ಡಿಎಚ್‌ಒ ಹೋದರೆ ಸರಿಯಾಗಿ ಮಾಹಿತಿ ನೀಡಿಲ್ಲಘಿ. ಆದ್ದರಿಂದ ಕೆಪಿಎಂಇ ಕಾಯಿದೆ ಪ್ರಕಾರ ಅವರಿಗೆ ನೋಟಿಸ್ ನೀಡಲಾಗುವುದು. 24 ಗಂಟೆಯಲ್ಲಿ ಉತ್ತರ ಕೊಡದೇ ಹೋದರೆ ಮುಂದೆ ಕೈಗೊಳ್ಳಬೇಕಾದ ಕ್ರಮ ಕೈಗೊಳ್ಳುತ್ತೇವೆ. ಎಪಿಡೆಮಿಕ್ ಕಾಯ್ದೆ ಅನ್ವಯ ಶೇ. 50ರಷ್ಟು ಬೆಡ್ ನೀಡಬೇಕು. ಅದೇ ರೀತಿ ಎಸ್.ಎಸ್.ಆಸ್ಪತ್ರೆ ಎಷ್ಟು ಬೆಡ್ ಕೊಟ್ಟಿದೆ ಅಂತ ಪರಿಶೀಲನೆ ನಡೆಸಿ ಆ ಆಸ್ಪತ್ರೆ ಮೇಲೆಯೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿ ಹೇಳಿದರು.
ವಯೋಮಾನದ ಆಧಾರದಲ್ಲಿ ಸೋಂಕಿನ ವಿವರ :
0-10 ವರ್ಷ 393; 11-20 ವರ್ಷ 981; 21-30 ವರ್ಷ 2413; 31-40 ವರ್ಷ 2754; 41-50 ವರ್ಷ2,288; 51-60 ವರ್ಷ 1,783; 61-70 ವರ್ಷ 1,098; 71-80 ವರ್ಷ 358, 81-90 ವರ್ಷ 80, 91=100 ವರ್ಷ 12 ಸೋಂಕಿನ ಪ್ರಕರಣಗಳು ದಾಖಲಾಗಿವೆ.
2ನೇ ಅಲೆಯಲ್ಲಿ ಈವರೆಗೆ ಕೋವಿಡ್ ಡೆತ್ ಒಟ್ಟು 78 :  21-30 ವರ್ಷ 6 ಸಾವು; 31-40 ವರ್ಷ 6; 41-50 ವರ್ಷ 10; 51-60 ವರ್ಷ 19; 61-70 ವರ್ಷ 20; 71-80 ವರ್ಷ 11; 81 ವರ್ಷದ ಮೇಲ್ಪಟ್ಟು 1 ಸಾವು.  ಕೋವಿಡ್ ಲೈಕ್ ಇಲ್ನೆಸ್ನಿಂದ (ಐಎಲ್‌ಐ ) 116 ಸಾವು ಸಂಭವಿಸಿದೆ.
ಹಳ್ಳಿಗಳಲ್ಲಿ ಸೋಂಕು ಇಳಿಮುಖ ;
ಜಿಲ್ಲಾ ಪಂಚಾಯತ್ ಸಿಇಒ ಡಾ.ವಿಜಯ ಮಹಾಂತೇಶ್ ದಾನಮ್ಮನವರ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಪ್ರಕರಣಗಳನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದುಘಿ,ಹಳ್ಳಿಗಳಲ್ಲಿ ಸೋಂಕು ಇಳಿಮುಖವಾಗುತ್ತಿದೆ. ಮೇ. 15 ರಿಂದ 25 ರವರೆಗೆ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು ಕಳೆದ 2 ದಿನಗಳಿಂದ ಇಳಿಮುಖ ಕಾಣುತ್ತಿದೆ. 1343 ಜನರು ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಿಸಲಾಗಿದೆ. ಗ್ರಾಮಗಳಲ್ಲಿ ಸಾರ್ವಜನಿಕ ಪೂಜೆಗಳನ್ನು ನಿಷೇಧಿಸಲಾಗಿದೆ. ವಾರಕ್ಕೆರಡು ಬಾರಿ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದರು.
ಎಷ್ಟು ಗ್ರಾಮದಲ್ಲಿ ಕೊರೊನಾ ಸೋಂಕಿತರು :
ಜಿಲ್ಲೆಯಲ್ಲಿ ಒಟ್ಟು 777 ಗ್ರಾಮಗಳಿವೆ. ಅದರಲ್ಲಿ 183 ಗ್ರಾಮಗಳಲ್ಲಿ ಶನಿವಾರತನಕ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ. 419 ಗ್ರಾಮಗಳಲ್ಲಿ 1-5 ಪ್ರಕರಣ, 101 ಗ್ರಾಮಗಳಲ್ಲಿ 6-10 ಪ್ರಕರಣ74 ಗ್ರಾಮಗಳಲ್ಲಿ 10ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲು ಆಗಿದೆ ಎಂದು ಸಿಇಇ ವಿಜಯ್ ಮಹಾಂತೇಶ್  ದಾನಮ್ಮನವರ್ ಹೇಳಿದರು.
52ಸಾವಿರಕ್ಕೂ ಹೆಚ್ಚು ಪ್ರಕರಣ : ಲಾಕ್ಡೌನ್ ಹಿನ್ನೆಲೆ ದಾವಣಗೆರೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
ಮಾಸ್ಕ್ ಸಂಬಂಧಿತ 52 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ರೆಮ್ಡಿಸಿವರ್ ಸಂಬಂಧಿತ 2 ಪ್ರಕರಣ ದಾಖಲಾಗಿದೆ.
ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ 6 ಪ್ರಕರಣ ದಾಖಲಾಗಿದೆ. ಕೊರೊನಾ 2ನೇ ಅಲೆಯಲ್ಲಿ  57 ಪೊಲೀಸರಿಗೆ ಸೋಂಕು ತಗುಲಿತ್ತು. ಆದರೆ ವ್ಯಾಕ್ಸಿನ್ ಹಾಕಿಸಿದ ಪರಿಣಾಮ ಹಲವರು ಗುಣಮುಖರಾಗಿದ್ದಾರೆ.  ಈವರೆಗೆ 30 ಪೊಲೀಸರು ಕ್ವಾರಂಟೈನ್ನಲ್ಲಿದ್ದಾರೆ ಎಂದು ಎಸ್ಪಿ ಹನುಮಂತರಾಯ ಮಾಹಿತಿ ನೀಡಿದರು.  ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರವೀರಮಲ್ಲಪ್ಪ, ಡಿಹೆಚ್‌ಓ ಡಾ.ನಾಗರಾಜ್, ಆರ್‌ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಇದ್ದರು.

Leave a Reply

Your email address will not be published. Required fields are marked *

error: Content is protected !!