ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳ/ಸಿಬ್ಬಂದಿಗಳ “ಪುಗಸಟ್ಟೆ ವಿದ್ಯುತ್ ಉರಿಸುವ ಭಾಗ್ಯ.!” – ನಾಗಾರ್ಜುನ್ ಗುಜ್ಜರ್

city corporation free power bhagya

ದಾವಣಗೆರೆ: 25-08-2022 (www.garudavoice.com) CITY CORPORATION DAVANAGERE: ವಿದ್ಯುತ್ ಉರಿಸುವ ಭಾಗ್ಯ ನಾ ? ಇದ್ಯಾವ ರೀತಿ ಭಾಗ್ಯ , ಹೌದು ಓದುಗರೇ, ಕೇಳುಗರೇ ನೀವು ಎಂದು ಕೇಳರಿಯದ ಭಾಗ್ಯ, ಇದು ಅನೇಕ ಜನರು ಕೇಳಿದ ತಕ್ಷಣ ತುಂಬಾ ವಿಶೇಷ ಎನಿಸುವ ಭಾಗ್ಯ , ಈ ಭಾಗ್ಯಕ್ಕೆ ಸರ್ಕಾರದಿಂದ ಯಾವುದೇ ಆದೇಶವಿಲ್ಲ , ಬದಲಾಗಿ ಅಧಿಕಾರಿಗಳೇ ತಮ್ಮ ಸ್ವಇಚ್ಛೆಯಿಂದ ಮಾಡಿಕೊಂಡಿರುವ ಭಾಗ್ಯ ಅದಕ್ಕೆ ಪುಗಸಟ್ಟೆ ವಿದ್ಯುತ್ ಉರಿಸುವ ಭಾಗ್ಯ ಎಂದು ಕರೆಯಬಹುದು ?

ಹೌದು ನಮಗೆಲ್ಲ ತಿಳಿದಿರುವ ಹಾಗೆ ಸರ್ಕಾರೀ ಕಛೇರಿಗಳು ಮತ್ತು ಅದಕ್ಕೆ ಸಂಬಂಧಪಟ್ಟ ಪ್ರತಿಯೊಂದು ಖರ್ಚು/ವೆಚ್ಚಗಳು ಜನರ ತೆರಿಗೆ ಹಣದಿಂದ ನಡೆಯುತ್ತಿದ್ದೆ ಎಂಬುವುದು ಪ್ರತಿಯೊಬ್ಬ ಸಾರ್ವಜನಿಕರಿಗೂ ತಿಳಿದಿರುವ ವಿಷಯ. ಸರ್ಕಾರೀ ಅಧಿಕಾರಿಗಳಿಗೆ / ಸಿಬ್ಬಂದಿಗಳಿಗೆ ತಮಗೆ ಬೇಕಾದಷ್ಟು ವಿದ್ಯುತ್ ಬಳಸಲು ಅಗುವುದಿಲ್ಲವೆನಿಸುತ್ತದೆ, ದಾವಣಗೆರೆ ನಗರದ ಮಹಾನಗರಪಾಲಿಕೆ ಮುಖ್ಯ ಕಚೇರಿಯಲ್ಲಿ ತಮಗಿಷ್ಟ ಬಂದಂತೆ ವಿದ್ಯುತ್ ದುಂದು ವೆಚ್ಚ ಮಾಡುತ್ತಿದ್ದಾರೆ ಎಂಬುವುದರಲ್ಲಿ ಯಾವುದೇ ಸಂಶಯ ಬೇಡ.

ಹೌದು ಸ್ನೇಹಿತರೆ ಮಹಾನಗರಪಾಲಿಕೆ ಕಚೇರಿಯ ಕೊಠಡಿಗಳಲ್ಲಿ ಅಧಿಕಾರಿಗಳು / ಸಿಬ್ಬಂದಿಗಳು ಇರಲಿ ಬಿಡಲಿ ಅಲ್ಲಿನ ಲೈಟ್ ಮತ್ತು ಫ್ಯಾನ್ ಸದಾ ಉರಿಯುತ್ತಲೇ ಇರುತ್ತದೆ, ಬೆಳಗಿನ ಸಮಯದಲ್ಲಿ ಅಧಿಕಾರಿಗಳು ಕೊಠಡಿಗೆ ಬರುವ 1 ಗಂಟೆ ಮುಂಚೆಯಿಂದಲೇ ಲೈಟ್ ಮತ್ತು ಫ್ಯಾನ್ ಉರಿಯುತ್ತಲೇ ಇರುತ್ತದೆ, ಬೆಳಗ್ಗೆ ಲೈಟ್ ಮತ್ತು ಫ್ಯಾನ್ ನ ಸ್ವಿಚ್ ಆನ್ ಆದರೆ ಸಂಜೆ ಪಾಲಿಕೆ ಮುಚ್ಚುವ ಹೊತ್ತಿಗೆ ಆಫ್ ಆಗಬಹುದು , ಅಥವಾ ರಾತ್ರಿಯೆಲ್ಲ ಹಾಗೆ ಉರಿಯುತ್ತದೋ ಯಾರಿಗೂ ತಿಳಿಯದು , ಮೇಲ್ಕಂಡ ಚಿತ್ರದಲ್ಲಿ ಮಹಾನಗರಪಾಲಿಕೆ ಕಚೇರಿಯಲ್ಲಿ ಮಧ್ಯಾಹ ಊಟದ ಸಮಯದಲ್ಲಿ ಭೀಗ ಹಾಕಿರುವ ಕೊಠಡಿಯಲ್ಲಿ ಫ್ಯಾನ್ ಮತ್ತು ಲೈಟ್ ಉರಿಯುತ್ತಿರುವ ದೃಶ್ಯಗಳು ನೀವು ಕಾಣಬಹುದು.

ಅಧಿಕಾರಿಗಳ ಪುಗಸಟ್ಟೆ ಭಾಗ್ಯ ಇದೆ ರೀತಿ ಮುಂದುವರೆಯುತ್ತದೆಯೋ ಅಥವಾ ತಮ್ಮ ತಪ್ಪನ್ನು ಅರಿತು ಸರಿ ಪಡಿಸಿಕೊಳ್ಳುತ್ತಿದ್ದಾರೋ ಕಾದುನೋಡಬೇಕಿದೆ. ನೀರು , ವಿದ್ಯುತ್ ಮನುಷ್ಯನ ಜೀವನದ ಅಗತ್ಯತೆಗಳು ಇದನ್ನು ಮಿತವಾಗಿ ಬಳಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮಹಾನಗರಪಾಲಿಕೆಗೆ ಇಂದು ಸಾರ್ವಜನಿಕರೇ ಹೇಳಿ ಕಲಿಸುವ ಮಟ್ಟಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು / ಸಿಬ್ಬಂದಿಗಳು  ಬಂದಿದ್ದಾರೆ,

ಪಾಲಿಕೆಯ ಕಮಿಷನರ್ ಮತ್ತು ಅಧಿಕಾರಿಗಳು ಹಾಗು ಇದಕ್ಕೆ ಸಂಬಂಧಪಟ್ಟವರು ಇದರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ನೀರು ಮತ್ತು ವಿದ್ಯುತ್ ಮಿತವಾಗಿ ಬಳಿಸಿ ಎಂದು ದಾವಣಗೆರೆ ನಗರದ ತುಂಬೆಲ್ಲ ಬರೆಸಿರುವ ಮಹಾನಗರ ಪಾಲಿಕೆಗೆ ಇಂದು ಸಾರ್ವಜನಿಕರು ಹೇಳುವ ಸ್ಥಿತಿಗೆ ಬಂದಿದೆ.

ನಾಗಾರ್ಜುನ್ ಗುಜ್ಜರ್,

ತರಳಬಾಳು ಬಡಾವಣೆ, ದಾವಣಗೆರೆ.              

Leave a Reply

Your email address will not be published. Required fields are marked *

error: Content is protected !!