ದಾವಣಗೆರೆ ಇಎಸ್‌ಐ ಆಸ್ಪತ್ರೆಯ ತುರ್ತು ಸೇವೆಗಾಗಿ ಅಂಬುಲೆನ್ಸ್ ನೀಡಿದ ರೆಡ್ ಕ್ರಾಸ್ ಸಂಸ್ಥೆ.

ದಾವಣಗೆರೆ:ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಜಿಲ್ಲಾ ಶಾಖೆಯಿಂದ ನಗರದ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ(ಇಎಸ್‌ಐ)ಗೆ ಸೋಮವಾರ ಅಂಬುಲೆನ್ಸ್ ವಾಹನವನ್ನು ಕೋವಿಡ್ ರೋಗಿಗಳ ತುರ್ತು ಸೇವೆಗೆ ಬಳಸಲು ನೀಡಲಾಯಿತು.

ಈ ಅಂಬುಲೆನ್ಸ್ ಸೇವೆಯು ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಿಂದ ಇಎಸ್‌ಐ ಆಸ್ಪತ್ರೆಗೆ ಕೋವಿಡ್ ರೋಗಿಗಳ ಸೇವೆಗೆ ನೀಡಲಾಗಿದೆ ಎಂದು ಸಂಸ್ಥೆ ಚೇರ್ಮನ್ ಡಾ.ಎ.ಎಂ.ಶಿವಕುಮಾರ ತಿಳಿಸಿದರು.

ನಗರದ ಇಎಸ್‌ಐ ಆಸ್ಪತ್ರೆ ಆವರಣದಲ್ಲಿ ಸೋಮವಾರ ರೆಡ್ ಕ್ರಾಸ್ ಸಂಸ್ಥೆಯ ಅಂಬುಲೆನ್ಸ್ ವಾಹನವನ್ನು ಇಎಸ್‌ಐ ಆಸ್ಪತ್ರೆ ಅಧೀಕ್ಷಕ ಡಾ.ಬಸವನಗೌಡರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಇತ್ತೀಚೆಗೆ ಕೋವಿಡ್ ರೋಗಿಗಳಿಗೆ ಅವಶ್ಯಕವಾಗಿ ಬೇಕಾಗಿದ್ದ ಔಷಧಗಳನ್ನು ದಾನಿಗಳ ಸಹಕಾರದಿಂದ ಖರೀದಿಸಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ನೀಡಲಾಗಿತ್ತು.

ಪ್ರತಿದಿನ ಕೊರೋನಾ ವಾರಿಯರ್ಸ್‌ ನಗರದ ವಿವಿಧೆಡೆ ತೆರಳಿ ಕೋವಿಡ್ 19 ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಮುಂದುವರೆದ ಭಾಗವಾಗಿ ಈಗ ಸಂಸ್ಥೆಯಿಂದ ಅಂಬುಲೆನ್ಸ್ ಸೇವೆಯನ್ನು ಕೋವಿಡ್ ರೋಗಿಗಳ ಅನುಕೂಲಕ್ಕಾಗಿ ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ.ಚಿದಾನಂದ, ಡಾ.ಅಣ್ಣಪ್ಪ ಸ್ವಾಮಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಡಿ.ಎಸ್.ಸಾಗರ್, ಇನಾಯತ್‌ವುಲ್ಲಾ, ಶಿವಾನಂದ, ಕೆ.ಕೆ.ನಾಗರಾಜ, ಡಾ.ಧನಂಜಯ, ರವಿಕುಮಾರ, ಶ್ರೀಕಾಂತ ಬಗರೆ, ಇರ್ಫಾನ್, ತಾಹೀರ್, ಇಬ್ರಾಹಿಂ, ರಹೀಂ, ಫೈಜುಲ್ಲಾ, ಫಯಾಜ್, ಆಸಿಯಾಭಾನು ಮತ್ತಿತ್ತರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ನಗರದ ತುರ್ತು ರೋಗಿಗಳಿಗೆ ಸದುಪಯೋಗವಾಗಲು ತುರ್ತು ಸೇವೆಗೆ ಇನ್ನೊಂದು ಉಚಿತ ವಾಹನ ಸೇವೆಗೆ ಇರಲಿದ್ದು.

ಮೊಬೈಲ್ ನಂ.7676667877ನ್ನು ಸಂಪರ್ಕಿಸಲು ಮನವಿ ಮಾಡಿದರು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು.

Leave a Reply

Your email address will not be published. Required fields are marked *

error: Content is protected !!