ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಎ ಎಸ್ ಪಿ ಯಾಗಿ ಐಪಿಎಸ್ ಕನ್ನಿಕಾ ಸಕ್ರಿವಾಲ್ ನೇಮಕ : ಡಿ ವೈ ಎಸ್ ಪಿ ನರಸಿಂಹ ತಾಮ್ರಧ್ವಜ ವರ್ಗಾವಣೆ
![Davanagere_rural_sub_division_ips_kannika_sakriwal_took_charge_as_asp[1]](https://garudavoice.com/wp-content/uploads/2021/10/Davanagere_rural_sub_division_ips_kannika_sakriwal_took_charge_as_asp1.jpg)
ದಾವಣಗೆರೆ: ಗ್ರಾಮಾಂತರ ಡಿ ವೈ ಎಸ್ ಪಿ ( ಎ ಎಸ್ ಪಿ ) ಯಾಗಿ ದೆಹಲಿ ಮೂಲದ 2018 ನೇ ಬ್ಯಾಚ್ ಐ ಪಿ ಎಸ್ ಅಧಿಕಾರಿ ಕನ್ನಿಕಾ ಸಕ್ರಿವಾಲ್ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಕನ್ನಿಕಾ ಅವರು 2018 ರ ಬ್ಯಾಚ್ನ ಕರ್ನಾಟಕ ಕೆಡರ್ ನಲ್ಲಿ ಐಪಿಎಸ್ ಆಗಿ ಆಯ್ಕೆಯಾಗಿದ್ದರು.
ಈ ಹಿಂದೆ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿ ವೈ ಎಸ್ ಪಿ ಆಗಿದ್ದ ನರಸಿಂಹ ತಾಮ್ರಧ್ವಜಗೆ ಇನ್ನೂ ಪೋಸ್ಟಿಂಗ್ ತೋರಿಸಿಲ್ಲ. ಒಂದೂವರೆ ವರ್ಷಕ್ಕೆ ತಾಮ್ರಧ್ವಜ್ ರನ್ನ ಸರಕಾರ ವರ್ಗಾವಣೆ ಮಾಡಿದೆ. ಕಕ್ಕರಗೊಳ್ಳ ಕೊಲೆ ಪ್ರಕರಣ ಸೇರಿದಂತೆ ಪಡಿತರ ಅಕ್ಕಿ ಕಳ್ಳಸಾಗಣೆ, ಸ್ಪೋಟಕ ವಸ್ತುಗಳ ಸಾಗಾಣೆ ಪ್ರಕರಣಗಳನ್ನು ಭೇದಿಸುವಲ್ಲಿ ತಾಮ್ರಧ್ವಜ್ ಯಶಸ್ವಿಯಾಗಿದ್ದರು. ಅವರನ್ನು ಸಿಬ್ಬಂದಿಗಳು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟಿದ್ದಾರೆ.