ಎಸ್ ಪಿ ದಾವಣಗೆರೆ ಎಸ್ ಪಿ ಡಿವಿಜಿ ಎಂದು ನಕಲಿ ಫೆಸ್ ಬುಕ್ ಖಾತೆ ಕ್ರಿಯೆಟ್ ಮಾಡಿದ ಕಿರಾತಕರು

ದಾವಣಗೆರೆ: ಜಿಲ್ಲಾ ಪೊಲೀಸ್ ಅಧೀಕ್ಷಕರ ಹೆಸರಲ್ಲಿದ್ದ ಇಲಾಖೆಯ ಫೇಸ್ ಬುಕ್ ಖಾತೆಯನ್ನೇ ದುಷ್ಕರ್ಮಿಗಳು ಮತ್ತೊಂದು ನಕಲಿ ಖಾತೆ ಕ್ರಿಯೆಟ್ ಮಾಡಿಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆಯ SP Davanagere Spdvg ಅಧಿಕೃತ ಖಾತೆಯ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿರುವ ದುಷ್ಕರ್ಮಿಗಳು ಇತರರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಅವರಿಗೆ ಹಣದ ಬೇಡಿಕೆ ಇಡುತ್ತಿರುವುದಷ್ಟೇ ಅಲ್ಲದೇ ಎಸ್ಪಿ ರಿಷ್ಯಂತ್ ಹೆಸರಲ್ಲಿ 080997 27196 ಈ ನಂಬರ್ ನಿಂದ ಕರೆ ಅಥವಾ ಸಂದೇಶ ಕಳಿಸಿ ವಿವಿಧ ರೀತಿಯ ಸಹಾಯ ಹಾಗೂ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆಂದು ಸ್ವತಃ ಎಸ್ಪಿ ತಿಳಿಸಿದ್ದಾರೆ.
ಆದ್ದರಿಂದ, ಸಾರ್ವಜನಿಕರು ಈ ನಕಲಿ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಲ್ಲಿ ಅಥವಾ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಅದನ್ನು ತಳ್ಳಿಹಾಕುವಂತೆ ಹಾಗೂ ಜಾಗೃತರಾಗಿರುವಂತೆ ಎಸ್ ಪಿ ಕೋರಿದ್ದಾರೆ.