Davanagere: ಪ್ರಾಮಾಣಿಕ ಸೇವೆಯಿಂದ ಯಶಸ್ಸು: ಪ್ರೊ.ಸುಚಿತ್ರಾ

29du-suchitra

ದಾವಣಗೆರೆ: (Davanagere) ತಾಳ್ಮೆ, ನಿಸ್ವಾರ್ಥ ಹಾಗೂ ಪ್ರಾಮಾಣಿಕತೆಯಿಂದ ಯಾವುದೇ ಕೆಲಸದಲ್ಲಾದರೂ ನೆಮ್ಮದಿಯ ಜೊತೆಗೆ ಯಶಸ್ಸು ಪಡೆಯಬಹುದು ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ, ಡೀನ್ ಪ್ರೊ.ಸುಚಿತ್ರಾ ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಯೋ ನಿವೃತ್ತಿ ಪಡೆಯುತ್ತಿರುವ ಪ್ರೊ.ಸುಚಿತ್ರಾ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಮೂರು ದಶಕಗಳ ಕಾಲ ಅಧ್ಯಾಪಕಿಯಾಗಿ ಕೆಲಸ ಮಾಡಿದ್ದೇನೆ. ಯಾವುದೇ ಆಸೆ ಇಲ್ಲದೆ ಕೇವಲ ವೃತ್ತಿಗೆ ಆದ್ಯತೆ ನೀಡಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ. ವೃತ್ತಿಯಲ್ಲಿ ಎಲ್ಲ ಮನ್ನಣೆಗಳೂ ಸಿಕ್ಕಿವೆ. ಆದ್ದರಿಂದ ಫಲಾಪೇಕ್ಷೆಗೆ ಇಷ್ಟಪಡದೆ, ನಮ್ಮ ಕೆಲಸವನ್ನು ನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದನ್ನು ಸ್ವತಃ ಕಂಡುಬರುವ ಅನುಭವವಾಗಿದೆ’ ಎಂದರು.
ಮಕ್ಕಳಿಗೆ ಪಾಠ ಮಾಡುವುದರಲ್ಲಿಯೇ ಶಿಕ್ಷಕರಿಗೆ ಬೆಲೆ ಕಟ್ಟಲಾಗದ ನೆಮ್ಮದಿ, ತೃಪ್ತಿ ಸಿಗುತ್ತದೆ. ಅಧಿಕಾರ, ಅವಕಾಶಕ್ಕೆ ಆಸೆಪಡದೆ, ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ವಿದ್ಯಾರ್ಥಿಗಳು ನಮ್ಮ ಮಕ್ಕಳೆಂಬ ಮನಸ್ಥಿತಿ ಒಡಮೂಡಬೇಕು. ಮಕ್ಕಳಲ್ಲಿ ಉನ್ನತ ಮೌಲ್ಯಗಳನ್ನು ಬೆಳೆಸುವ ಪರಿಪಾಠ ಬೆಳೆದಾಗ ಸದೃಢ, ಸುಂದರ ಸಮಾಜ ನಿರ್ಮಿಸಬಹುದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರೊ.ಜೆ.ಕೆ.ರಾಜು, ಪ್ರೊ.ರಂಗಪ್ಪ, ಪ್ರೊ.ಪಿ.ಲಕ್ಷ್ಮಣ್, ಪ್ರೊ. ಸೀರಪ್ಪ, ಡೀನ್‌ಗಳಾದಪ್ರೊ. ಆರ್.ಶಶಿಧರ, ಪ್ರೊ.ವೆಂಕಟೇಶ ಮಾತನಾಡಿದರು. ಅಧ್ಯಾಪಕರ ಸಂಘದ ಅಧ್ಯಕ್ಷ ಶಿವಕುಮಾರ ಕಣಸೋಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ. ರಾಜೇಂದ್ರಪ್ರಸಾದ, ಖಜಾಂಚಿ ಡಾ. ಧಾನೇಶ, ಉಪಕಾರ್ಯದರ್ಶಿಗಳಾದ ಡಾ.ಬಿ.ಬಸವರಾಜ, ಡಾ.ರೂಪೇಶ, ಡಾ. ಸಿದ್ದಪ್ಪ ಕಕ್ಕಳಮೇಲಿ, ಪ್ರೊ.ಸುಪ್ರಿಯಾ ಮತ್ತಿತರರು ಉಪಸ್ಥಿತರಿದ್ದರು. ಡಾ.ನಾಗಭೂಷಣಗೌಡ ಕಾರ್ಯಕ್ರಮ ನಿರೂಪಿಸಿದರು.

error: Content is protected !!