ದಾವಣಗೆರೆಯಲ್ಲಿ ತರಳಬಾಳು ಶಿವಸೈನ್ಯ ಸಂಘ ರಾಜ್ಯ ಘಟಕದ ಪದಾಧಿಕಾರಿಗಳ ಪದಗ್ರಹಣ

ದಾವಣಗೆರೆ: 900 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸಾಧು ಸದ್ಧರ್ಮ ವೀರಶೈವ ಸಮಾಜಕ್ಕೆ ಸ್ಪಷ್ಟ ರೂಪ ರೇಷಗಳನ್ನು ನೀಡಿದಂತಹವರು ಹಾಗೂ ಭದ್ರವಾದ ನೆಲೆಯನ್ನು, ಸಂಸ್ಕಾರವನ್ನು, ಗಟ್ಟಿತನವನ್ನು ತಂದುಕೊಟ್ಟಂತವರು ಲಿಂ.ತರಳಬಾಳು ಜಗದ್ಗುರು ಶ್ರೀ ಗುರುಶಾಂತರಾಜ ಮಹಾಸ್ವಾಮಿಗಳವರು.

ಸಾಧು ಸದ್ಧರ್ಮ ಸಮಾಜ ಅಸಂಘಟಿತವಾದ ಸಂದರ್ಭದಲ್ಲಿ ಈ ಸಮಾಜವನ್ನು ಒಗ್ಗೂಡಿಸುವ, ಸಮಾಜಕ್ಕೆ ಪ್ರಜ್ಞೆ, ಪಸ್ಟ ರೂಪ ನೀಡಬೇಕು ಎನ್ನುವ ವಿಚಾರಧಾರೆಯಲ್ಲಿ ಸುಸಂಘಟಿತವಾದ ಸಮಾಜ ನಿರ್ಮಾಣ ಮಾಡಬೇಕು ಎಂಬ ನಿಟ್ಟಿನಲ್ಲಿ ಗುರುಶಾಂತರಾಜ ಮಹಾಸ್ವಾಮಿಗಳು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಮಾಜದ ಭಕ್ತರನ್ನು ಸುಶಿಕ್ಷತರನ್ನಾಗಿ ಮಾಡುವುದಲ್ಲದೆ ಸಮಾಜವನ್ನು ಭದ್ರಗೊಳಿಸಿದರು. ಅದೇ ರೀತಿ ಲಿಂ.ಹಿರಿಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಸಾಧು ಸಮಾಜವನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಸದೃಢಗೊಳಿಸಿ ಸಮಾಜ ಬಾಂಧವರು ತಲೆಯೆತ್ತಿ ನಡೆಯುವಂತೆ ಮಾಡಿದ್ದಾರೆ. ಮುಂದುವರೆದು ಇಂದಿನ 21ನೇ ಜಗದ್ಗುರುಗಳವರು ಸಮಾಜವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಹಿಂದೆ ದುಗ್ಗಾಣೆ ಮಠವಾಗಿದ್ದ ನಮ್ಮ ಮಠ ಇಂದು 2000 ಕೋಟಿಯಷ್ಟು ಆಸ್ತಿ ಹೊಂದಿದೆ ಎಂಬುದು ನಮ್ಮ ಸಮಾಜದ ಸದ್ಭಕ್ತರ ಹೃದಯ ಶ್ರೀಮಂತಿಕೆಯನ್ನು ಸಂಸ್ಕಾರವನ್ನು ಉದಾರತೆಯನ್ನು ತೋರಿಸುತ್ತದೆ. ಇಂತಹ ಶ್ರೀಮಂತ ಸಂಸ್ಕಾರಯುತ ಉದಾರವಾದ ದೊಡ್ಡ ಸಮಾಜಕ್ಕೆ ಪೂರಕವಾದ ಅಂತಹ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಇಂದು ತರಳಬಾಳು ಶಿವಸೈನ್ಯ ಸಂಘ ರಾಜ್ಯ ಘಟಕ ಅಸ್ತಿತ್ವಕ್ಕೆ ಬಂದಿದ್ದು ಅದರ ದೇವ ದೇಶಗಳು ತುಂಬಾ ಉತ್ತಮವಾಗಿವೆ. ಇದು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಅದರಲ್ಲಿ ನಾನು ಗೌರವಾಧ್ಯಕ್ಷನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ವಿಜಯನಗರ ಜಿಲ್ಲೆಯ ಮಹಾಬಲೇಶ್ವರ ಗೌಡರು ತಿಳಿಸಿದರು.

ರೈತ ಮುಖಂಡರಾದ ಹೊನ್ನೂರು ಮುನಿಯಪ್ಪನವರು ಮಾತನಾಡುತ್ತಾ ತರಳಬಾಳು ಶಿವಸೇನೆ ಸಂಘವು ಸಮಾಜದಲ್ಲಿ ತಪ್ಪು ದಾರಿಯಲ್ಲಿ ಹೋಗುವವರನ್ನು ತಿದ್ದುವಂತಹ ಸರಿದಾರಿಗೆ ತರುಹಂತಹ ಕೆಲಸ ಮಾಡಬೇಕೆಂದು ತಿಳಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪನವರು ಮಾತನಾಡುತ್ತಾ ತರಳಬಾಳು ಶಿವಸೈನ್ಯ ಸಂಘವು ಯಾವುದೇ ಸಮಾಜದ ಪ್ರತಿಸ್ಪರ್ಧಿಯಾಗಿ ರೂಪಗೊಂಡಿಲ್ಲ. ಬದಲಾಗಿ ಇದು ನಮ್ಮ ಸಮಾಜವನ್ನು ಮತ್ತಷ್ಟು ಸದೃಢಗೊಳಿಸುವ, ಸಮಾಜಮುಖಿಯಾಗಿ ಕೆಲಸ ಮಾಡುವ, ಉತ್ತಮೋತ್ತಮ ಕೆಲಸ ಮಾಡುವ ನಿಟ್ಟಿನಲ್ಲಿ ರೂಪಗೊಂಡಿದೆ. ನಮ್ಮ ಸಮಾಜದಲ್ಲಿ ಯಾವುದೇ ವ್ಯತ್ಯಾಸಗಳು, ನಿಲುವುಗಳು, ಭಿನ್ನಾಭಿಪ್ರಾಯಗಳು ಇದ್ದರೂ ನಮ್ಮ ಸಮಾಜಕ್ಕೆ ಪಿತಾಮಹಾರೆಂದರೆ ತರಳಬಾಳು ಜಗದ್ಗುರುಗಳೇ ಹೊರತು ಬೇರೆಯವರಲ್ಲ ಎಂಬುದನ್ನು ನಾವೆಲ್ಲ ಮನಗಾಣ ಬೇಕಾಗಿದೆ ಎಂದು ತಿಳಿಸಿದರು.

ನಮ್ಮ ಸಮಾಜ ಹಾಗೂ ಸಂಘವು ತರಳಬಾಳು ಪರಂಪರೆಯ ಗುರುಪೀಠದ ಆದೇಶದಂತೆ ಅದನ್ನು ಚಾಚು ತಪ್ಪದೇ ಪಾಲಿಸಿ ಕೊಂಡು ಬರುವ ಸಂಪ್ರದಾಯವನ್ನು ಹೊಂದಿದೆ. ಅದೇ ರೀತಿ ತರಳಬಾಳು ಶಿವಸೇನೆ ಸಂಘವು ನಡೆದುಕೊಂಡು ಹೋಗಬೇಕೆಂಬುದು ನಮ್ಮ ಆಶಯವಾಗಿದೆ. ಈ ಸಂಘವು ಹೋಬಳಿ ಮಟ್ಟದಿಂದ ಹಿಡಿದು ತಾಲೂಕು,ಜಿಲ್ಲೆ ಗಳಲ್ಲಿ ತನ್ನ ಕಾರ್ಯಕ್ಷೇತ್ರ ಮತ್ತು ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆಯ ಸದಸ್ಯರಾದ ಗಡಿಗುಡಾಳ್ ಮಂಜುನಾಥ್ ರವರು ಮಾತನಾಡುತ್ತ ತರಳಬಾಳು ಶಿವಸೈನ್ಯ ಸಂಘ ರಾಜ್ಯ ಘಟಕ ಇಂದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇದರಿಂದ ಇದರ ಜವಾಬ್ದಾರಿಯು ಕೂಡ ಹೆಚ್ಚಾಗಿದೆ.ಈ ಸಂಘಕ್ಕೆ ಯಾವುದೇ ರೀತಿಯ ಸಹಕಾರ ಬೇಕಾದರೂ ನಾನು ಮಾಡಲು ಸಿದ್ಧ. ಸಂಘವು ನಮ್ಮ ಸಮಾಜದ ಯಾರೇ ಬಂದವರು ಉತ್ತಮ ಉತ್ತಮ ಸಾಧನೆಗಳನ್ನು ಕೆಲಸಗಳನ್ನು ಮಾಡಿದಾಗ ಅವರನ್ನು ಗುರುತಿಸಿ ಬೆಂಬಲಿಸುವ ಬೆನ್ನುತಟ್ಟುವ ಕೆಲಸ ಮಾಡಬೇಕು ಎಂಬ ಅಭಿಪ್ರಾಯ ಹಂಚಿಕೊಂಡರು.


ಸಮಾರಂಭದ ಆರಂಭದಲ್ಲಿ ಶಿವಸೈನ್ಯ ಸಂಘದಲ್ಲಿ ಇದುವರೆಗೂ ಕೆಲಸ ನಿರ್ವಹಿಸಿದಂತ ಪದಾಧಿಕಾರಿಗಳಿಗೆ ಗೌರವಿಸಿ ಸನ್ಮಾನಿಸಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದ ತರಳಬಾಳು ಶಿವಸೈನ್ಯ ಸಂಘದ ರಾಜ್ಯ ಘಟಕದ ಅಧ್ಯಕ್ಷರಾಗಿ ಶಶಿಧರ ಹೆಮ್ಮನಬೇತೂರು, ಗೌರವಾಧ್ಯಕ್ಷರಾಗಿ ವಿಜಯನಗರ ಜಿಲ್ಲೆಯ ಮಹಾಬಲೇಶ್ವರ ಗೌಡರು ಹಾಗೂ ದಾವಣಗೆರೆಯ ಜಿಲ್ಲೆಯ ಶ್ರೀನಿವಾಸ್ ಶಿವಗಂಗಾ, ಉಪಾಧ್ಯಕ್ಷರಾಗಿ ಕೆ ಬಿ ಮೋಹನ್ ಸಿರಿಗೆರೆ, ಅಶ್ವಿನ್ ಕೆ ಪಿ ನಿಂಬೆಗುಂದಿ ಶಿಕಾರಿಪುರ ವೀರಣ್ಣ ಮಾಕನೂರು, ಕೆಬಿ ಶ್ರೀಧರ್ ಪಾಟೀಲ್ ಭದ್ರಾವತಿ, ಲಿಂಗರಾಜ್ ಆಗಸನಕಟ್ಟೆ ಹಾಗೂ ಕಾರ್ಯದರ್ಶಿಯಾಗಿ ಬಸವನಗೌಡರು ವಕೀಲರು ವಿಜಯನಗರ, ಕೋಶಾಧ್ಯಕ್ಷರಾಗಿ ಶಿವಕುಮಾರ್ ಡಿಎಂ ಕೋರಟಿಕೆರೆ, ಹೀಗೆ ಒಟ್ಟು 39 ಪದಾಧಿಕಾರಿಗಳು ಪದಗ್ರಹಣವನ್ನು ಸ್ವೀಕರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಕ್ಕರಗೊಳ್ಳದ ಕೆ ಜಿ ಬಸವನಗೌಡರು ವಹಿಸಿದ್ದರು. ಪಿ.ಮಹಾಬಲೇಶ್ವರ ಗೌಡ್ರು, ಬಿ.ವಾಮದೇವಪ್ಪ, ಹೊನ್ನೂರು ಮುನಿಯಪ್ಪ, ರಾಮಗೊಂಡನಹಳ್ಳಿ ಜಯಣ್ಣ, ಬೇತೂರು ಸಂಗನಗೌಡ್ರು, ಮಾಗನೂರು ಉಮೇಶಗೌಡ್ರು, ಯಶವಂತಗೌಡ್ರು, ಶ್ರೀನಿವಾಸ ಶಿವಗಂಗಾ, ಕೆ.ನಾಗಪ್ಪ ಮೇಷ್ಟ್ರು, ಕಂಸಾಗರ ಪಂಚಣ್ಣ, ಬೇತೂರು ರೇವಣಸಿದ್ದಪ್ಪ ಮರಡಿ, ಶಶಿಧರ ಹೆಮ್ಮನಬೇತೂರು, ಶಿವರಾಜ್ ಕಬ್ಬೂರು, ಕಾವಲಹಳ್ಳಿ ಪ್ರಭು, ಶಿವಕುಮಾರ್ ಗಡಿಗುಡಾಳ್ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪ್ರಭು ಕಾವಲಹಳ್ಳಿ,ಆರ್ ಜಿ ರುದ್ರೇಶ್, ಬಿಎಸ್ ಪ್ರಕಾಶ್, ಪ್ರಕಾಶ್ ಕಬ್ಬೂರು, ಕುಮಾರ್ ಮಳ್ಳಿಕಟ್ಟೆ, ಬಸವರಾಜ್ ಮುಡೇನಹಳ್ಳಿ, ನರೇಂದ್ರ ರಾಂಪುರ, ಸತೀಶ್ ಸಿರಿಗೆರೆ ಸೇರಿದಂತೆ ಸುಮಾರು 10 ಜಿಲ್ಲೆಗಳಿಂದ 250 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಆರಂಭದಲ್ಲಿ ಸಿ ಜಿ ಜಗದೀಶ್ ಕೂಲಂಬಿ ಸ್ವಾಗತಿಸಿದರು. ಶಿವರಾಜ್ ಕಬ್ಬೂರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!