ದಾವಣಗೆರೆಯಲ್ಲಿ ಭೂಮಿ ಕುಸಿತ.! ಪ್ರಯಾಣಿಕರು ಪಾರು.! ಇಂಜಿನಿಯರ್ ಗಳಿಗೆ ದೊಡ್ಡ ಸಲಾಮ್.!
ದಾವಣಗೆರೆ: ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ಸಂಜೀವಿನಿ ಆಸ್ಪತ್ರೆಯ ಮುಂಭಾಗ ಭೂಮಿ ಕುಸಿದು, ಸವಾರರಿಗೆ ತೊಂದರೆಯುಂಟಾಗಿದೆ!!
ಸುಮಾರು ಒಂದೆರಡು ಅಡಿಯಷ್ಟು ಭೂಮಿ ಕುಸಿದಿದ್ದು, ಆಟೋವೊಂದು ಸಂಚರಿಸುವ ವೇಳೆ ಅಲ್ಲಿ ಸಿಕ್ಕಿಹಾಕಿಕೊಂಡು ಪರದಾಡುವಂತಾಯಿತು.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ರೋಗಿಗಳ ಕಡೆಯವರಿಗೆ ಈ ರಸ್ತೆ ದುರಾವಸ್ತೆಯಿಂದ ಸಾಕಷ್ಟು ತೊಂದರೆಯಾಗಿತ್ತಿದ್ದರೂ ಸಂಬಂಧ ಪಟ್ಟ ಇಲಾಖೆ ಇತ್ತ ಕಡೆ ಗಮನಹರಿಸುತ್ತಿಲ್ಲ.
ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ, ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮದಡಿ ರಸ್ತೆ, ನೀರಿನ ಪೈಪ್ ಲೈನ್ ದುರಸ್ತಿಗೊಳಿಸಬೇಕಾದ ಅಧಿಕಾರಿ ವರ್ಗದವರು ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಮೈಮರೆತಿರುವುದೇ ಈ ದುರಾವಸ್ತೆಗೆ ಕಾರಣ.