ದಾವಣಗೆರೆ : ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ !ಮಿಲಿಟರಿ ಪಡೆ ಬಲಪಡಿಸಬೇಕಿದೆ

ದಾವಣಗೆರೆ : ನಮ್ಮ ಭಾರತಕ್ಕೆ ಮತ್ತಷ್ಟು ಯೋಧರ ಬಲ ಬೇಕಾಗಿದೆ, ಇಲ್ಲವಾದಲ್ಲಿ ಉಕ್ರೇನ್‌ಗೆ ಆದ ಸ್ಥಿತಿ ನಮ್ಮ ಭಾರತಕ್ಕೆ ಬರುವುದರಲ್ಲಿ ಸಂದೇಹವಿಲ್ಲ. ಹೆಚ್ಚು ಯುವಕರು ಉತ್ಸಾಹದಿಂದ ಸೇನೆಯನ್ನು ಸೇರುವ ಮೂಲಕ ಮಿಲಿಟರಿ ಪಡೆಯನ್ನು ಬಲಪಡಿಸಬೇಕಾಗಿದೆ ಎಂದು ನಿವೃತ್ತ ಯೋಧ ಪುಟ್ಟಸ್ವಾಮಿ ಹೇಳಿದರು. ಸತತ 17 ವರ್ಷ ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತರಾಗಿ ತಾಯ್ನಾಡಿಗೆ ಮರಳಿದ ದಾವಣಗೆರೆ ಜಿಲ್ಲೆಯ ಇಬ್ಬರು ಯೋಧರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮತ್ತೊಬ್ಬ ನಿವೃತ್ತ ಯೋಧ ಪರಮೇಶ್ ಮಾತನಾಡಿ, ರಾಜಸ್ಥಾನ, ದೆಹಲಿ, ಅಹ್ಮದ್‌ನಗರ ಹಾಗೂ ಮಹಾರಾಷ್ಟçವೂ ಸೇರಿದಂತೆ ಮುಂತಾದ ಕಡೆ ಕೆಲಸ ಮಾಡಿದ್ದೇವೆ, ನಮ್ಮ ಭಾಗದವರು ಸೇನೆ ಸೇರುವುದು ಕಡಿಮೆ, ನಮ್ಮ ದಾವಣಗೆರೆಯವರು ಹೆಚ್ಚು ಸೇನೆ ಸೇರಲು ಮನಸ್ಸು ಮಾಡಬೇಕು ಎಂದರು. ಬೆಳಗಾವಿಯಿದ ರೈಲು ಮೂಲಕ ದಾವಣಗೆರೆಗೆ ಆಗಮಿಸಿದ ಪರಮೇಶ್ ಮತ್ತು ಪುಟ್ಟಸ್ವಾಮಿ ಎಂಬ ಇಬ್ಬರು ಯೋಧರನ್ನು ಮೇಯರ್ ಜಯಮ್ಮ ಗೋಪಿನಾಯ್ಕ್ ಹಾಗೂ ಕೆಲ ಪಾಲಿಕೆ ಸದಸ್ಯರು ಹೂಗುಚ್ಛ ನೀಡಿ ಸನ್ಮಾನ ಮಾಡುವ ಮೂಲಕ ದಾವಣಗೆರೆಗೆ ಬರಮಾಡಿಕೊಂಡರು.

ಜನಸಾಮಾನ್ಯರು ಕೂಡ ಅದ್ಧೂರಿಯಾಗಿ ಸ್ವಾಗತ ಕೋರಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ದಾವಣಗೆರೆ ಜಿಲ್ಲೆಯ ಪಾವಗಡ ಗ್ರಾಮದ ಪುಟ್ಟಸ್ವಾಮಿ ಹಾಗೂ ಸರಸ್ವತಿ ನಗರದ ನಿವಾಸಿಯಾದ ಪರಮೇಶ್ ಇಬ್ಬರನ್ನು ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಬರಮಾಡಿಕೊಂಡು ಸನ್ಮಾನ ಮಾಡಿದರು. ಬಳಿಕ ಇಬ್ಬರು ಯೋಧರು ಕೂಡ ರಾಷ್ಟçಪಿತ ಮಹಾತ್ಮ ಗಾಂಧೀಜಿಯಯವರ ಪುತ್ಥಳಿಗೆ ನಮಿಸಿದರು.

Leave a Reply

Your email address will not be published. Required fields are marked *

error: Content is protected !!