ಮಾರ್ಚ್ 28 ರಿಂದ ದಾವಣಗೆರೆ- ಬೆಂಗಳೂರು ಎಲೆಕ್ಟ್ರಿಕ್ ಪವರ್ ಪ್ಲಸ್ ಬಸ್‍ಗಳ ಸೇವೆ ಪ್ರಾರಂಭ
ದಾವಣಗೆರೆ : ದಾವಣಗೆರೆ-ಬೆಂಗಳೂರು ಮಾರ್ಗದಲ್ಲಿ ನೂತನ ಹವಾ ನಿಯಂತ್ರಿತ ಎಲೆಕ್ಟ್ರಿಕ್ ಪವರ್ ಪ್ಲಸ್ ಬಸ್‍ಗಳ ಸೇವೆಯನ್ನು ಮಾರ್ಚ್ 28ರಿಂದ ಆರಂಭಿಸಲಾಗಿದೆ.
ಈ ಸಾರಿಗೆಗಳು www.ksrtc.in ಮೂಲಕ ಮುಂಗಡ ಆಸನ ಕಾಯ್ದಿರಿಸುವಿಕೆಗೆ ಲಭ್ಯವಿದ್ದು ಪ್ರಯಾಣಿಕರು ಸಾರಿಗೆಗಳ ಸದುಪಯೋಗಪಡಿಸಿಕೊಳ್ಳಲು ದಾವಣಗೆರೆ ಕರಾರಸಾರಿಗೆ ನಿಗಮದ ವಿಭಾಗಿಯ ನಿಯಂತ್ರಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.