ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಏಕತಾ ನಡಿಗೆ

ದಾವಣಗೆರೆ : ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ “ರಾಷ್ಟ್ರೀಯ ಏಕತಾ ನಡಿಗೆ” ಕಾರ್ಯಕ್ರಮವನ್ನು ದಾವಣಗೆರೆ ನಗರದ ಜಯದೇವ ವೃತ್ತದ ದಿಂದ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ ಚಾಲನೆ ನೀಡಿದರು.
ನಗರದ ಜಯದೇವ ವೃತ್ತದಿಂದ ಪ್ರಾರಂಭವಾದ ನಡಿಗೆಯು ಗಾಂಧಿ ವೃತ್ತ, ಪಿಬಿ ರಸ್ತೆ, ಎವಿಕೆ ಕಾಲೇಜ್ ರಸ್ತೆ ಮೂಲಕ ಬಡಾವಣೆ ಆರಕ್ಷಕ ಠಾಣೆಗೆ ಮುಕ್ತಾಯವಾಗಿತು.
ಪೊಲೀಸ್ ಅಧೀಕ್ಷಕರವರು ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ರವರುಗಳಾದ ಶ್ರೀ ನರಸಿಂಹ ವಿ.ತಾಮ್ರದ್ವಜ, ಶ್ರೀ ಪ್ರಕಾಶ್ , ಪೊಲೀಸ್ ನಿರೀಕ್ಷಕರಾದ ಶ್ರೀ ಗಜೇಂದ್ರಪ್ಪ, ಗುರುಬಸವರಾಜ್, ಸುರೇಶ್ ಸಗರಿ, ಹನುಮಂತಪ್ಪ ಶಿರಿಹಳ್ಳಿ ರವರುಗಳು ಸೇರಿದಂತೆ ಅಧಿಕಾರಿ- ಸಿಬ್ಬಂದಿಗಳು ರಾಷ್ಟ್ರೀಯ ಏಕತಾ ನಡಿಗೆಯಲ್ಲಿ ಭಾಗವಹಿಸಿದ್ದರು