ದಾವಣಗೆರೆ: ಹಂದಿ ಸೆರೆಗೆ ಹಾಕಿದ್ದ ಬಲೆಯಲ್ಲಿ ಬಿದ್ದ ಚಿರತೆ

ದಾವಣಗೆರೆ: ದಾವಣಗೆರೆ ತಾಲೂಕಿನ ಹುಳಪಿನಕಟ್ಟೆ ಗ್ರಾಮದಲ್ಲಿ ಚಿರತೆಯೊಂದು ಸೆರೆ ಸಿಕ್ಕಿದೆ. ಹಂದಿ ಹಿಡಿಯುವ ಸಲುವಾಗಿ ಬಲೆ ಹಾಕಲಾಗಿತ್ತು. ಆದರೆ ಹಂದಿ ಬದಲು ಚಿರತೆ ಆ ಬಲೆಯೊಳಗೆ ಬಿದ್ದಿದ್ದು, ಅರವಳಿಕೆ ಮದ್ದು ನೀಡಿ ಶಿವಮೊಗ್ಗ ಅರವಳಿಕೆ ತಜ್ಞರು ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಅರಣ್ಯ ಸಿಬ್ಬಂದಿಗಳು ಬೆಳಗ್ಗೆಯಿಂದಲೇ ಸತತವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
garudavoice21@gmail.com 9740365719

 
                         
                       
                       
                       
                       
                       
                       
                      