ದಾವಣಗೆರೆ ಪಿ ಜೆ ಬಡಾವಣೆಯಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ.!

ದಾವಣಗೆರೆ : ದಾವಣಗೆರೆ ನಗರದ ಪಿಜೆ ಬಡಾವಣೆಯಲ್ಲಿ ನಿನ್ನೆ ರಾತ್ರಿ ಬಿದ್ದ ಗುಡುಗು ಸಹಿತ ಮಳೆಯಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದ ಘಟನೆ ನಡೆದಿದೆ.
ಸುಮಾರು ಹೊತ್ತು ಸಿಡಿಲು ಬಡಿದು ಮಳೆ ಸುರಿದು ಸಂಚಾರ ಅಸ್ತವ್ಯಸ್ತ ವಾಗಿತ್ತು. ಸಿಡಿಲು ಬಡಿದು ಸಣ್ಣ ಬೆಂಕಿ ಕಿಡಿಯೊಂದಿಗೆ ಉರಿಯಲು ಆರಂಭವಾದ ತೆಂಗಿನಮರ ಧಗ ಧಗ ಉರಿಯಲು ಆರಂಭಿಸಿತು. ಅಷ್ಟೇ ಅಲ್ಲದೇ ಪಿಜೆ ಬಡಾವಣೆಯಲ್ಲಿನ ಹಲವು ಮನೆಗಳ ಟಿ ವಿ, ಸೆಟ್ ಅಪ್ ಬಾಕ್ಸ್, ಯುಪಿಎಸ್ ಗಳಿಗೆ ಹಾನಿಯಾಗಿದೆ.

Leave a Reply

Your email address will not be published. Required fields are marked *

error: Content is protected !!