ದಾವಣಗೆರೆಯಲ್ಲಿ ನಕಲಿ ಬಂಗಾರದ ಬಿಲ್ಲೆ ನೀಡಿ ವಂಚನೆ.! 22 ಲಕ್ಷ ಹಣ ವಶಪಡಿಸಿಕೊಂಡ ಸಂತೆಬೆನ್ನೂರು ಪೊಲೀಸ್
ದಾವಣಗೆರೆ: ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ, 22 ಲಕ್ಷ ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಯನ್ನ ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.ದುಗ್ಗಪ್ಪ @ ದುರಗಪ್ಪ ಈತ ಬಂಧಿತ ಆರೋಪಿಯಾಗಿದ್ದು ಮೂಲತಃ ಚೆನ್ನಗಿರಿ ತಾಲೂಕಿನವನು. ಚೆನ್ನಗಿರಿಯ ಎಸ್ ಬಿ ಆರ್ ಕಾಲೋನಿಯ ಬಸ್ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು 22 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.
ಸಂತೋಷ್ ಎಸ್ ಡಿವೈಎಸ್ಪಿ ಚೆನ್ನಗಿರಿ ವಿಭಾಗ ಸಂತೆಬೆನ್ನೂರು ವೃತ್ತದ ಶ್ರೀ ಮಹೇಶ್ ಅವರ ನೇತೃತ್ವದಲ್ಲಿ ಸಂತೆಬೆನ್ನೂರು ಪಿಎಸ್ಐ ಶ್ರೀ ಶಿವರುದ್ರಪ್ಪ ಎಸ್ ಮೇಟಿ ಹಾಗೂ ಸಿಬ್ಬಂದಿಗಳಾದ ಎಂ ಟಿ ಸ್ವಾಮಿ, ಎಎಸ್ಐ ಮೈಲಾರಪ್ಪ, ಎಎಸ್ಐ ಓಂಕಾರಪ್ಪ, ಎಎಸ್ಐ ರುದ್ರೇಶ್ ಎಂ, ಸತೀಶ್ ಜಿ ಆರ್, ಉಮೇಶ್ ವಿಟಿ, ಆಂಜನೇಯ, ಕೊಟ್ರೇಶ್, ದೊಡ್ಡಶಿ ಮಂಜುನಾಥ್, ಸಂತೋಷ್, ರುದ್ರಸ್ವಾಮಿ, ಪ್ರವೀಣ್ ಗೌಡ, ಗಂಗಪ್ಪ, ಸೋಮಶೇಖರ್ ನೊಳಗೊಂಡ ತಂಡವು ಪ್ರಕರಣ ಭೇದಿಸಿದೇ.
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ರ‍್ಗದವರನ್ನು ಮಾನ್ಯ ಶ್ರೀ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿಬಿ ರಿಷ್ಯಂತ್ ಐಪಿಎಸ್ ದಾವಣಗೆರೆ ಹಾಗೂ ಪೊಲೀಸ್ ಅಧೀಕ್ಷಕರಾದ ಆರ್ ಬಿ ಬಸರಗಿ ಅವರು ಶ್ಲಾಘಿಸಿದ್ದಾರೆ.