ದಾವಣಗೆರೆ : ಶಾಮನೂರು ಬಳಿ ನಿಂತಿದ್ದ ಕಬ್ಬಿನ ಲಾರಿಗೆ ಟಾಟಾ ಏಸ್ ಢಿಕ್ಕಿ

ಟಾಟಾ ಏಸ್ ಢಿಕ್ಕಿ
ದಾವಣಗೆರೆ: ಸ್ಥಳೀಯ ಶಾಮನೂರು ಬಳಿಯ ಪಂಜಾಬಿ ಡಾಬಾ ಬಳಿ ನಿಂತಿದ್ದ ಕಬ್ಬಿನ ಲಾರಿಗೆ ಮಹೇಂದ್ರ ಏಸ್ ವಾಹನ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಹರಿಹರ ತಾಲೂಕಿನ ಎಳೆಹೊಳೆ ಗ್ರಾಮದ ಗಂಗಮ್ಮ (42) ಮೃತಪಟ್ಟವರು. ಕವಿತಾ, ಚಾಲಕ ನಿಂಗಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಇಲ್ಲಿನ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಗಮ್ಮ, ಕವಿತಾ, ನಿಂಗಪ್ಪ ಅವರೊಂದಿಗೆ ಹರಿಹರದಿಂದ ದಾವಣಗೆರೆಗೆ ತರಕಾರಿ ತೆಗೆದುಕೊಂಡು ಹೋಗಲು ಬಂದಿದ್ದರು. ಚಾಲಕ ನಿಂತಿದ್ದ ಕಬ್ಬಿನ ಲಾರಿಗೆ ಏಸ್ ವಾಹನವನ್ನು ಡಿಕ್ಕಿ ಹೊಡೆಸಿದ್ದರಿಂದ ಅಪಘಾತವಾಗಿದೆ. ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.