ಮಾಧ್ಯಮದವರ ಮೇಲೆ ಗರಂ ಆದ ಜಿಲ್ಲಾಧಿಕಾರಿ: ಪತ್ರಕರ್ತರು ಮತ್ತು ಡಿಸಿ ನಡುವೆ ವಾಗ್ವಾದ, ಯಾಕೆ ಗೊತ್ತಾ..? ಇದನ್ನ ಓದಿ.

ಹೆಚ್ ಎಂ ಪಿ ಕುಮಾರ್
ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಅವಶ್ಯಕವಾಗಿರುವ ಆಮ್ಲಜನಕವನ್ನು ಅನ್ಯ ಜಿಲ್ಲೆಗಳಿಗೆ ಸರಬರಾಜು ಮಾಡಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರಕರ್ತರು ಕೇಳಿದಾಗ ಸಚಿವರು ಉತ್ತರಿಸುವ ವೇಳೆ ಮಧ್ಯ ಪ್ರವೇಶ ಮಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ ಪತ್ರಕರ್ತರ ಪ್ರಶ್ನೆಗೆ ಸಂಸದರು,ಶಾಸಕರ ಉಪಸ್ಥಿತಿಯಲ್ಲಿ ಸಿಟ್ಟಾಗಿ ಉತ್ತರ ನೀಡಲು ಮುಂದಾದಗ ಜಿಲ್ಲಾಧಿಕಾರಿ ಹಾಗೂ ಪತ್ರಕರ್ತರ ಮಧ್ಯೆ ವಾಗ್ವಾದ ನಡೆಯಿತು.
ಸರ್ಕಾರದ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳಾದ ಈ.ವಿ.ರಮಣರೆಡ್ಡಿ ಹಾಗೂ ಪ್ರತಾಪ್ ರೆಡ್ಡಿ ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಹರಿಹರ ತಾಲ್ಲೂಕಿನ ಸದರನ್ ಗ್ಯಾಸ್ ಸಂಸ್ಥೆಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ 8500 ಲೀಟರ್ ಆಮ್ಲಜನಕ ಸರಬರಾಜು ಮಾಡಲು ನಿರ್ದೇಶನ ನೀಡಿದ್ದಾರೆ. ಹರಿಹರ ತಾಲ್ಲೂಕಿನ ಸದರನ್ ಗ್ಯಾಸ್ ಸಂಸ್ಥೆಯು ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ 6 ಕೆಎಲ್, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ 4 ಕೆಎಲ್ ಸೇರಿದಂತೆ ಎರಡೂ ಜಿಲ್ಲೆಗಳ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಮತ್ತು ರಾಣೆಬೆನ್ನೂರು, ಹರಪನಹಳ್ಳಿ ಹಾಗೂ ಹೂವಿನಹಡಗಲಿ ತಾಲ್ಲೂಕುಗಳಿಗೆ ಒಟ್ಟು 8500 ಲೀಟರ್ ಆಕ್ಸಿಜನ್ ಸರಬರಾಜು ಮಾಡುತ್ತಾ ಬಂದಿರುತ್ತದೆ.

ಆಕ್ಸಿಜನ್ ಕೊರತೆಯಿಂದ ಗುರುವಾರ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಅತ್ಯಂತ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲೆಗೆ ಆಕ್ಸಿಜನ್ ಪೂರೈಕೆಯಲ್ಲಿ 4 ತಾಸು ವಿಳಂಬವಾಗಿತ್ತು, ಕೊಂಚ ಮೈ ಮರೆತಿದ್ದರೆ ಚಾಮರಾಜನಗರ ಜಿಲ್ಲೆಗಿಂತ ದೊಡ್ಡ ದುರಂತ ಸಂಭವಿಸುತ್ತಿತ್ತು. ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ತಂಡ ಉತ್ತಮ ಕೆಲಸ ನಿಭಾಯಿಸಿ ಹಲವರ ಪ್ರಾಣ ಉಳಿಯಲು ಕಾರಣವಾಗಿದ್ದರು,
ಜಿಲ್ಲಾಧಿಕಾರಿಗಳು ಹರಿಹರ ತಾಲ್ಲೂಕಿನ ಸದರನ್ ಗ್ಯಾಸ್ ಸಂಸ್ಥೆಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಆಮ್ಲಜನಕ ಪೂರೈಕೆ ಮಾಡುವ ಬಗ್ಗೆ ಜಿಲ್ಲಾ ಸಚಿವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದರು.ಈ ಹಿನ್ನೆಲೆಯಲ್ಲಿ ಸಚಿವರು ಚಿತ್ರದುರ್ಗ, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲೆಗೆ 8500 ಲೀಟರ್ ವೈದ್ಯಕೀಯ ಆಮ್ಲಜನಕದ ಬೇಡಿಕೆ ಅವಶ್ಯಕತೆಯಿದೆ. ಅವಶ್ಯವಿರುವ ಆಮ್ಲಜನಕ ಸರಬರಾಜಿಗೆ ನಿರ್ದೇಶನ ನೀಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನ ಬರೆದು ಹಿನ್ನೆಲೆ ವಿಜಯನಗರ ಜಿಲ್ಲೆಯ ತೋರಣಗಲ್ ನಿಂದ ದಾವಣಗೆರೆ ಜಿಲ್ಲೆಗೆ ಟ್ಯಾಂಕರ್ ಮೂಲಕ ಆಕ್ಸಿಜನ್ ಪೂರೈಕೆ ಮಾಡಲು ಅನುಮತಿ ನೀಡಲಾಗಿತ್ತು, ಅಲ್ಲಿ ಬಿಲ್ಲಿಂಗ್ ಮಾಡುವ ಸಮಯ ವ್ಯತ್ಯಾಸ ವಾದ್ದರಿಂದ ಟ್ಯಾಂಕರ್ ದಾವಣಗೆರೆಗೆ ಬರುವುದು ತಡವಾಗಿತ್ತು.
ಹರಿಹರದಿಂದ ಆಕ್ಸಿಜನ್ ಟ್ಯಾಂಕರ್ ಮಂಗಳೂರು, ಉಡುಪಿಗೆ ಯಾಕೆ ಹೋಯ್ತು ಎಂದು ಸಚಿವರನ್ನು ಪತ್ರಕರ್ತರು ಪ್ರಶ್ನಿಸಿದಾಗ, ಈ ವೇಳೆ ಡಿಸಿ ಮಹಾಂತೇಶ್ ಬೀಳಗಿ ಮಧ್ಯ ಪ್ರವೇಶಿಸಿ, ಕೇಂದ್ರ ಸರಕಾರದ ಗೈಡ್‌ಲೈನ್ ಪ್ರಕಾರ ಜಿಂದಾಲ್‌ನಿಂದ ರಾಜ್ಯಕ್ಕೆ ಆಕ್ಸಿಜನ್ ಸಪ್ಲೇ ಆಗುತ್ತದೆ. ಹರಿಹರದಲ್ಲಿ ಸಿಲಿಂಡರ್‌ಗಳಿಗೆ ಮಾತ್ರ ಆಕ್ಸಿಜನ್ ತುಂಬಲಾಗುತ್ತದೆ. ಅಲ್ಲಿಂದ ಸಿಲಿಂಡರ್‌ಗಳನ್ನು ಜಿಲ್ಲಾಸ್ಪತ್ರೆಗೆ ತಂದು ಆಕ್ಸಿಜನ್ ಸಪ್ಲೇ ಮಾಡಲಾಗುತ್ತದೆಂದು ಅಲ್ಲಿನ ಜನರು ಜನರಲ್ಲವಾ ಏನು ಮಾತಾಡ್ತೀರಾ ನೀವು ಅಂತಾ ಪತ್ರಕರ್ತರಿಗೆ ಕೈ ತೋರಿಸುತ್ತಾ ಮಾಧ್ಯಮದವರ ಮೇಲೆ ಗರಂ ಆದರು.
ಮಾದ್ಯಮದವರು ಪ್ರಶ್ನೆ ಮಾಡಬಾರದಾ…? ಪ್ರಶ್ನೆ ಮಾಡಿದ್ರೆ ಯಾಕೆ ಸಿಟ್ಟಾಗ್ತೀರಾ.. ಸಾರ್ವಜನಿಕರ ಧ್ವನಿಯಾಗಿ ನಿಮಗೆ ಪ್ರಶ್ನೆಯ ಮೂಲಕ ಮಾಹಿತಿ ಕೇಳಿರುತ್ತೆವೆ, ಅದಕ್ಯಾಕೆ ಈ ರೀತಿ ಮಾತಾಡ್ತೀರಾ, ಎಲ್ಲ ಜನರು ಒಂದೇ, ಹರಿಹರ ಎಲ್ಲಿ ಮಂಗಳೂರು ಎಲ್ಲಿ, ಹರಿಹರದಿಂದ ದಾವಣಗೆರೆ, ಚಿತ್ರದುರ್ಗ, ರಾಣೆಬೆನ್ನೂರು ಹರಪನಹಳ್ಳಿ ಗೆ ಸರಬರಾಜಿಗೆ ಸಮಯ ಹಾಗೂ ಹತ್ತಿರವಾಗುತ್ತೆ, ಎಂದಾಗ, ಸಚಿವರು, ಸಂಸದರು,ಶಾಸಕರು ಮಧ್ಯೆ ಪ್ರವೇಶಿಸಿ ಎಲ್ಲರನ್ನೂ ಸುಮ್ಮನಿರಿಸಲು ಪ್ರಯತ್ನಿಸಿದರು.ಈ ಹಿನ್ನೆಲೆ ಪತ್ರಕರ್ತರು ಮತ್ತು ಡಿಸಿ ನಡುವೆ ವಾಗ್ವಾದ ನಡೆಯಲು ಕಾರಣವಾಯಿತು.