DC Words: ಕೊಟ್ಟ ಮಾತು ಉಳಿಸಿಕೊಂಡ ಡಿಸಿ: ಯುವತಿಯ ಬಯಕೆಯಂತೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ ಸಿಇಒ

IMG-20210917-WA0057

 

ದಾವಣಗೆರೆ: ನಮ್ಮೂರ ರಸ್ತೆ ಆಗುವವರೆಗೂ ತಾನು ಮದುವೆ ಆಗುವುದಿಲ್ಲ ಎಂದು ಶಪಥ ಮಾಡಿದ್ದ ತಾಲ್ಲೂಕಿನ ರಾಂಪುರ ಗ್ರಾಮದ ಬಿಂದು ಆಗ್ರಹಕ್ಕೆ ಮಣಿದ ಜಿಲ್ಲಾಡಳಿತ ಕೊನೆಗೂ ನಿನ್ನೆಯಷ್ಟೆ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ, ‘ರಸ್ತೆಯನ್ನು ಮಾಡ್ತೀವಿ, ಮದುವೆನೂ ಮಾಡ್ತೀವಿ’ ಎಂದು ಯುವತಿಗೆ ಮಾತುಕೊಟ್ಟು ಬಂದಿದ್ದರು.

ಆ ಮಾತಿನಂತೆ ನಡೆದುಕೊಂಡಿರುವ ಡಿಸಿ ಮಹಾಂತೇಶ್ ಬೀಳಗಿ ಇಂದು ರಾಂಪುರ ರಸ್ತೆ ಕಾಮಗಾರಿ ಆರಂಭ ಮಾಡಿಸಿದ್ದಾರೆ.

ಯುವತಿ ಬಿಂದು ರಸ್ತೆ ಮಾಡಿಸಲು ಕೋರಿ ಸಿಎಂ ಬಸವರಾಜ್ ಬೊಮ್ಮಾಯಿ‌ ಅವರಿಗೆ ಮನವಿ ಮಾಡಿದ್ದರು. ಮಾಧ್ಯಮಗಳಲ್ಲಿ ಆ ವರದಿ ಬಿತ್ತರವಾಗುತ್ತಿದ್ದಂತೆ ಕಾರ್ಯಾಗತರಾದ ಡಿಸಿ ಬೀಳಗಿ, ನಿನ್ನೆಯಷ್ಟೆ ಆ ಗ್ರಾಮಕ್ಕೆ ಭೇಟಿ ನೀಡಿದ್ದರು.

ಇಂದು ರಸ್ತೆ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲೇ ರಸ್ತೆ ನಿರ್ಮಾಣವಾಗಲಿದೆ‌.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!