ಚಿಪ್ಪು ಹಂದಿಗಳ ಚಿಪ್ಪುಗಳನ್ನ ಮಾರುತ್ತಿದ್ದ 18 ಜನರ ಬಂಧನ, 67 ಕೆಜಿ ಚಿಪ್ಪು ವಶ: CEN ಪೊಲೀಸ್ ಕಾರ್ಯಾಚರಣೆ

IMG-20211103-WA0169

ದಾವಣಗೆರೆ: ಅಳಿವಿನಂಚಿನಲ್ಲಿರುವ ಚಿಪ್ಪು ಹಂದಿಗಳ ಚಿಪ್ಪುಗಳನ್ನು ಮಾರಾಟ ಮಾಡುತ್ತಿದ್ದ 18 ಜನ ಅಂತರ್‌ ಜಿಲ್ಲಾ ಆರೋಪಿತರನ್ನು ಸಿಇಎನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿತರಿಂದ ಸುಮಾರು 67 ಕೆಜಿ ಚಿಪ್ಪುಗಳು, ಕೃತ್ಯಕ್ಕೆ ಬಳಸಿದ 02 ಓಮಿನಿ, 01 ಕಾರನ್ನು ವಶಪಡಿಸಿಕೊಳ್ಳಲಾಗಿದ.

ಹರಿಹರ- ಶಿವಮೊಗ್ಗ ರಸ್ತೆಯ ಬಳಿ ವನ್ಯಜೀವಿಗೆ ಸಂಬಂಧಿಸಿದ ಚಿಪ್ಪು ಹಂದಿ ವನ್ಯಜೀವಿಯ ಚಿಪ್ಪುಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿಸಿಆರ್‌ಬಿ ಘಟಕ ಉಪಾಧೀಕ್ಷಕ ಬಿ.ಎಸ್.ಬಸವರಾಜ ಅವರ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಬಿ.ವಿ ಗಿರೀಶ್ ಮತ್ತವರ ತಂಡ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿತರ ವಿರುದ್ಧ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!