ಅನಾಮದೇಯ ಗಂಡಸಿನ ಶವ ಪತ್ತೆ!

ದಾವಣಗೆರೆ: ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಿಗನೂಡು ಗ್ರಾಮದ ಹತ್ತಿರ ಭದ್ರಾ ಚಾನೆಲ್ನಲ್ಲಿ ಅನಾಮದೇಯ ಗಂಡಸಿನ ಶವವೊಂದು ಪತ್ತೆಯಾಗಿದ್ದು, ಇವರ ಬಗೆಗಿನ ಯಾವುದೇ ಮಾಹಿತಿ ಅಥವಾ ವಾರಸುದಾರರು ಯಾರೆಂದು ತಿಳಿದು ಬಂದಿಲ್ಲ. ಮೃತನು ನೀಲಿ ಕಲರ್ ಟಿ-ಶರ್ಟ್, ನೀಲಿ ಕಲರ್ನ ನೈಟ್ ಪ್ಯಾಂಟ್ ಧರಿಸಿದ್ದು ಮೃತನ ವಯಸ್ಸು ಅಂದಾಜು 25 ರಿಂದ 30 ವರ್ಷಗಳಾಗಿರುತ್ತದೆ. ಈ ರೀತಿಯ ವ್ಯಕ್ತಿಗಳು ಎಲ್ಲಿಯಾದರೂ ಕಾಣೆಯಾದ ಬಗ್ಗೆ ಮಾಹಿತಿ ಇದ್ದಲ್ಲಿ ಸಂತೆಬೆನ್ನೂರು ಪಿಎಸ್ಐ 9480803262, ಸಂತೆಬೆನ್ನೂರು ಸಿಪಿಐ 9480803230, ಕಂಟ್ರೋಲ್ ರೂಮ್ ದಾವಣಗೆರೆ 9480803200 ಗೆ ಸಂಪರ್ಕಿಸಲು ಕೋರಲಾಗಿದೆ.
garudavoice21@gmail.com 9740365719