ಹಲವು ವರ್ಷದ ನಂತರ ಮಧ್ಯಮವರ್ಗದವರ ಪರವಾದ ಚೊಚ್ಚಲ ಬಜೆಟ್ – ರೋಹಿತ್. ಎಸ್. ಜೈನ್
ದಾವಣಗೆರೆ: ಕೇಂದ್ರ ಸರ್ಕಾರದ ಈ #Budget2023 ಭಾರತದ ಅಭೂತಪೂರ್ವ ಯಶಸ್ಸಿಗೆ ಅಡಿಗಲ್ಲಾಗಲಿದೆ.
ನಮ್ಮ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಹಣಕಾಸು ಸಚಿವೆಯೊಬ್ಬರು ಮಹಿಳಾ ಅಧ್ಯಕ್ಷರ ( PRESIDENT OF INDIA) ನೇತೃತ್ವದಲ್ಲಿ , ಭಾರತದ ಆರ್ಥಿಕ ಬಜೆಟ್ ಅನ್ನು ಮಂಡಿಸಿದ್ದಾರೆ. ಇದು ಮಹಿಳಾ ಸಬಲೀಕರಣದ ಸುವರ್ಣ ಯುಗ!
ರೈಲ್ವೆಗೆ ₹2.40 ಲಕ್ಷ ಕೋಟಿ ಬಂಡವಾಳವನ್ನು ಒದಗಿಸಲಾಗಿದೆ. ಇದು 2013-2014 ನಂತರ ಮಾಡಲಾದ ಅತಿ ಹೆಚ್ಚು , ಇದೊಂದು ತುಂಬಾ ಒಳ್ಳೆಯ ಬೆಳವಣಿಗೆ
ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ 5300 ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ಹಾಗೂ ಸನ್ಮಾನ್ಯ ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳು.
ಮಧ್ಯಮ ವರ್ಗದವರಿಗೆ ವೈಯಕ್ತಿಕ ಆದಾಯ ತೆರಿಗೆ ಪ್ರಸ್ತುತ, ರೂ 5 ಲಕ್ಷ ಆದಾಯ ಹೊಂದಿರುವವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸುವುದಿಲ್ಲ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ರಿಯಾಯಿತಿ ಮಿತಿಯನ್ನು ರೂ 7 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾಪ , ಮಾಧ್ಯಮ ವರ್ಗದವರ ಅಭಿವೃದಿಗೆ ಒಳ್ಳೆಯ ಬಜೆಟ್ ಅಂತ ಹೇಳಬಹುದು.
ಇತರ ಪ್ರಮುಖ ನಿರ್ಣಯಗಳು
ದೇಶೀಯ ಉತ್ಪಾದನೆ ಮತ್ತು ರಫ್ತುಗಳನ್ನು ಉತ್ತೇಜಿಸಿ , ಕ್ಯಾಪಿಟಲ್ ಗೂಡ್ಸ್ ಮತ್ತು ಲಿಥಿಯಂ ಬ್ಯಾಟರಿಗಳ ಮೇಲಿನ ತೆರಿಗೆ ವಿನಾಯಿತಿ , ಮೊಬೈಲ್‌ಗಳು, ಕ್ಯಾಮೆರಾ ಲೆನ್ಸ್‌ಗಳು ಅಗ್ಗ , ಒಳ್ಳೆಯ ನಿರ್ಧಾರ
ಚಿನ್ನ, ಬೆಳ್ಳಿ ಮತ್ತು ವಜ್ರಗಳು, ಸಿಗರೇಟ್, ಆಮದು ಮಾಡಿದ ರಬ್ಬರ್ ಕೊಂಚೂ ದುಬಾರಿ.
ಒಟ್ಟಿಗೆ ಹೇಳಬೇಕಂದ್ರೆ ಸುಮಾರು ವರ್ಷಗಳ ನಂತರ ಮಧ್ಯಮವರ್ಗದ ವರ ಪರವಾಗಿ ಒಂದು ಚೊಚ್ಚಲ ಬಜೆಟ್ ಶ್ರೀಮತಿ ನಿರ್ಮಲ ಸೀತಾರಾಮನ್ ಅವರು ಘೋಷಿಸಿದ್ದಾರೆ.
ರೋಹಿತ್ . ಎಸ್ . ಜೈನ್
ಕಾರ್ಯದರ್ಶಿ
ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ ( ರೀ )
ದಾವಣಗೆರೆ