ಡಿಎಸ್ಪಿ ಬಸವರಾಜ್ ಪುತ್ರಿ ದೀಕ್ಷಾಗೆ ಶೇ.99ರಷ್ಟು ಅಂಕ! ದೀಕ್ಷಾಳ ಪಾಲಿಗೆ ಜ್ಯೋತಿ ಬೆಳಕು
ದಾವಣಗೆರೆ: ಅಪರಾಧಿಗಳ ಪತ್ತೆ ಕಾರ್ಯದಲ್ಲಿ ಮನೆ, ಮಠ, ಸಂಬ0ಧ, ಸ್ನೇಹಿತರನ್ನು ತೊರೆದು ಕೆಲಸದ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳೊಬ್ಬರ ಮಗಳು ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.99ರಷ್ಟು ಅಂಕ ಪಡೆದು ಪೋಷಕರಿಗೆ ಹಾಗೂ ಪೊಲೀಸ್ ಇಲಾಖೆಗೆ ಕೀರ್ತಿ ತಂದಿದ್ದಾಳೆ. ಬಾಗೇವಾಡಿ ಕ್ರೈಂ ಲೋಕದಲ್ಲಿ ತನ್ನದೇ ಹವಾ ಸೃಷ್ಟಿಸಿರುವ ಡಿಎಸ್‌ಪಿ ಬಿ.ಎಸ್. ಬಸವರಾಜ್ ಅವರ ಪುತ್ರಿಯೇ ದೀಕ್ಷಾ. ಮಗಳು ದೀಕ್ಷಾ ಶಿಕ್ಷಣದಲ್ಲಿ ತನ್ನ ಪ್ರಾಬಲ್ಯ ತೋರಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.99 ರಷ್ಟು ಅಂಕ ಪಡೆದು ತಂದೆಗೆ ಗರಿಮೆ ಹೆಚ್ಚಿಸಿದ್ದಾರೆ.
ತಂದೆಯ0ತೆ ಶಿಸ್ತಿನ ಸಿಪಾಯಿ ಆಗಿರುವ ಈಕೆಗೆ ತನ್ನ ತಾಯಿ ಜ್ಯೋತಿ ಮೊದಲ ಗುರುವಂತೆ ಮಗಳ ಈ ಉತ್ತಮ ಸಾಧನೆಗೆ ತಾಯಿ ಶ್ರಮ ಹೆಚ್ಚಿದೆ. ಇದರ ಹಿಂದೆ ಒಂದು ಕಥೆ ಕೂಡ ಇದೆ. ತಂದೆ ಪೊಲೀಸ್ ಇಲಾಖೆಯಲ್ಲಿ ಇರುವ ಕಾರಣ ಟ್ರಾನ್ಸ್ಫರ್ ಎಂಬುವುದು ಕಾಮನ್ ಆಗಿತ್ತು. ಒಂದು ವರ್ಷ ತೀರ್ಥಹಳ್ಳಿಯಲ್ಲಿ ಇದ್ದರೆ, ಇನ್ನೊಂದು ವರ್ಷ ಹರಪನಹಳ್ಳಿ, ಬೆಂಗಳೂರಿಗೂ ಹೋಗಬೇಕಾಗಿತ್ತು. ಕುಟುಂಬವೂ ಜತೆಗೆ ಹೋಗಬೇಕಾದ ಕಾರಣ ದೀಕ್ಷಾ ಕೂಡ ಅಪ್ಪನ ಜತೆ ಹೋಗಬೇಕಾಗಿತ್ತು. ಹೀಗಿರುವಾಗ ಒಂದು ಶಾಲೆಯಲ್ಲಿ ಕಲಿತ ಪಾಠಕ್ಕೂ, ಬೇರೊಂದು ಶಾಲೆಯಲ್ಲಿ ಕಲಿಯುವ ಪಾಠದಲ್ಲಿ ವ್ಯತ್ಯಾಸವಾಗುತ್ತಿತ್ತು. ಇದರಿಂದ ದೀಕ್ಷಾ ಮಾನಸಿಕವಾಗಿ ಕುಗ್ಗುವ ಸಂದರ್ಭವಿತ್ತು. ಆಗ ದೀಕ್ಷಾದ ನೆರವಿಗೆ ಬಂದಿದ್ದೇ ತಾಯಿ ಜ್ಯೋತಿ.
ದೀಕ್ಷಾಳ ತಾಯಿ ಜ್ಯೋತಿ ಬಿಎಸ್ಸಿ ಓದಿದ್ದು, ಮೊದಲು ತಾನು ಓದಿ ನಂತರ ಮಗಳಿಗೆ ಪಾಠ ಹೇಳಿಕೊಡುತ್ತಿದ್ದರಂತೆ. ಓದಿಗಾಗಿಯೇ ಸಮಯ ಮೀಸಲಿಟ್ಟು, ತಾನು ಓದಿ ಮನನ ಮಾಡಿಕೊಂಡ ನಂತರ ಮಗಳಿಗೆ ಪಾಠ ಹೇಳಿಕೊಡುತ್ತಿದ್ದರು. ಅಷ್ಟೇಅಲ್ಲದೆ ಪದೇಪದೇ ರಿವಿಜನ್ ಮಾಡಿ, ಅಂದಿನ ಪಾಠ ಅಂದೇ ಓದುವಂತೆ ಪ್ರೇರೇಪಿಸಿ, ಸಮಯಕ್ಕೆ ಸರಿಯಾಗಿ ನಿದ್ದೆ, ಊಟ ಮಾಡಲು ಸೂಚಿಸುತ್ತಿದ್ದರು. ಮೊಬೈಲ್ ಗೀಳನ್ನು ಹೆಚ್ಚಾಗಿ ಹಚ್ಚಿಕೊಳ್ಳದಂತೆ ತಡೆದಿದ್ದರು. ಕೇವಲ ಮಾಹಿತಿಗಾಗಿ ಮಾತ್ರ ಮೊಬೈಲ್ ಬಳಸುವಂತೆ ಹೇಳುತ್ತಿದ್ದರು. ಕೆಲ ಸಮಯ ಮನರಂಜನೆಗೆ ಒತ್ತುಕೊಡಲಾಗಿತ್ತು. ಈ ಎಲ್ಲದರ ನಡುವೆ ಮಗಳಿಗೆ ಅರ್ಥವಾಗುವಂತೆ ಹೇಳಿಕೊಡಬೇಕಾದ ಕರ್ತವ್ಯ ತಾಯಿಯದ್ದಾಗಿತ್ತು. ಇನ್ನು ತಾಯಿ ಜತೆ ಶಾಲೆಯಲ್ಲಿ ಶಿಕ್ಷಕರು ಸಹ ಸಾಥ್ ನೀಡಿದ್ದರು. ಈ ಎಲ್ಲ ಕಾರಣಗಳಿಂದ ಮಗಳು ದೀಕ್ಷಾ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು.
ದೀಕ್ಷಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 617 ಅಂಕ ಪಡೆದು ತೇರ್ಗಡೆ ಹೊಂದಿದ್ದು ಕನ್ನಡದಲ್ಲಿ 125, ಇಂಗ್ಲೀಷ್ 99, ಹಿಂದಿ 100, ಗಣಿತ 99, ವಿಜ್ಞಾನ 99, ಸಮಾಜ ವಿಜ್ಞಾನ 95 ಅಂಕ ಗಳಿಸಿದ್ದಾರೆ.
ಸಿವಿಲ್ ಸರ್ವೀಸ್ ಮಾಡುವಾಸೆ ಹೊತ್ತ ದೀಕ್ಷಾ!
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ದೀಕ್ಷಾಳಿಗೆ ಸಿವಿಲ್ ಸರ್ವೀಸ್ ಮಾಡುವ ಆಸೆ ಇದೆಯಂತೆ. ಸಮಾಜಕ್ಕೆ ಏನಾದರೂ ಹೊಸತನ್ನು ಮಾಡುವ ತುಡಿತದಿಂದ ಸಿವಿಲ್ ಸರ್ವೀಸ್ ಮಾಡುವ ಬಯಕೆ ಇದೆ. ಇದಕ್ಕಾಗಿ ಸಾಕಷ್ಟು ಶ್ರಮಪಡಬೇಕಾದ ಅವಶ್ಯಕತೆ ಇದೆ ಎನ್ನುತ್ತಾರೆ ದೀಕ್ಷಾ.
garudavoice21@gmail.com 9740365719